|

ವಾಷಿಂಗ್ಟನ್ (ಅಮೆರಿಕ) – ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ಧ ಆರಂಭವಾಗಿ ಸುಮಾರು 4 ವರ್ಷಗಳ ಕಾಲ ಕಳೆದಿದೆ. ಎರಡೂ ದೇಶಗಳು ಪರಸ್ಪರ ನಿರಂತರವಾಗಿ ದಾಳಿ ನಡೆಸುತ್ತಿವೆ. ಇತ್ತೀಚಿನ ವರದಿಯೊಂದು ಈ ಯುದ್ಧದ ಭೀಕರತೆಯನ್ನು ಜಗತ್ತಿನ ಮುಂದೆ ತಂದಿದೆ. ಅಮೆರಿಕದ ‘ಥಿಂಕ್ ಟ್ಯಾಂಕ್’ ಒಂದರ ಪ್ರಕಾರ, ಫೆಬ್ರವರಿ 24, 2022 ರಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಇದುವರೆಗೆ ರಷ್ಯಾ ಮತ್ತು ಯುಕ್ರೇನ್ ಎರಡೂ ದೇಶಗಳ ಒಟ್ಟು 4 ಲಕ್ಷ 65 ಸಾವಿರ ಸೈನಿಕರು ಸಾವನ್ನಪ್ಪಿದ್ದಾರೆ. ಹಾಗೆಯೇ ಸರಿಸುಮಾರು 15 ಲಕ್ಷ 35 ಸಾವಿರ ಸೈನಿಕರು ಗಾಯಗೊಂಡಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ.
1. ಅಮೆರಿಕದ ಥಿಂಕ್ ಟ್ಯಾಂಕ್ ಆದ ‘ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್’ (CSIS) ಪ್ರಕಟಿಸಿದ ಅಧ್ಯಯನ ವರದಿಯ ಪ್ರಕಾರ, ರಷ್ಯಾ ಯುಕ್ರೇನ್ ಮೇಲೆ ನಡೆಸುತ್ತಿರುವ ಸತತ ದಾಳಿಯಿಂದಾಗಿ ಎರಡೂ ದೇಶಗಳ ಸುಮಾರು 20 ಲಕ್ಷ ಸೈನಿಕರು ಮೃತಪಟ್ಟಿದ್ದಾರೆ, ಗಾಯಗೊಂಡಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ. ಇದರಲ್ಲಿ ರಷ್ಯಾಕ್ಕೆ ಅತಿ ಹೆಚ್ಚು ಹಾನಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2. ಜನವರಿ 27 ರಂದು ‘CSIS’ ಪ್ರಕಟಿಸಿದ ವರದಿಯಲ್ಲಿ, ಈ ಯುದ್ಧಕ್ಕಾಗಿ ರಷ್ಯಾ ಭಾರಿ ಬೆಲೆ ತೆರಬೇಕಾಗಿದೆ ಎಂದು ಹೇಳಲಾಗಿದೆ. ರಷ್ಯಾದ 3 ಲಕ್ಷ 25 ಸಾವಿರ ಸೈನಿಕರು ಸಾವನ್ನಪ್ಪಿದ್ದರೆ, 8 ಲಕ್ಷ 75 ಸಾವಿರ ಸೈನಿಕರು ಗಾಯಗೊಂಡಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ.
3. ಇದೇ ಅವಧಿಯಲ್ಲಿ ಉಕ್ರೇನ್ ಸೇನೆಗೂ ದೊಡ್ಡ ಮಟ್ಟದ ಹಾನಿಯಾಗಿದೆ. ಉಕ್ರೇನ್‌ನ 1 ಲಕ್ಷ 40 ಸಾವಿರ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 4 ಲಕ್ಷ 60 ಸಾವಿರ ಸೈನಿಕರು ಗಾಯಗೊಂಡಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ.
4. ಎರಡನೇ ಮಹಾಯುದ್ಧದ ನಂತರ ಯಾವುದೇ ದೊಡ್ಡ ಶಕ್ತಿಯು ಯುದ್ಧವೊಂದರಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಜೀವಹಾನಿ ಅಥವಾ ಗಾಯಾಳುಗಳ ಸಮಸ್ಯೆಯನ್ನು ಎದುರಿಸಿಲ್ಲ ಎಂದು ವರದಿಯು ತಿಳಿಸಿದೆ.
ಸಂಪಾದಕೀಯ ನಿಲುವುಈ ನರಮೇಧಕ್ಕೆ ರಷ್ಯಾ ಎಷ್ಟು ಜವಾಬ್ದಾರಿಯೋ, ಅಷ್ಟೇ ಯುಕ್ರೇನ್ ಹಾಗೂ ಅದಕ್ಕೆ ಶಸ್ತ್ರಾಸ್ತ್ರ ಪೂರೈಸುವ ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳ ಒಕ್ಕೂಟವಾದ ‘ನಾಟೋ’ (NATO) ಕೂಡ ಜವಾಬ್ದಾರಿಯಾಗಿದೆ ಎಂಬುದನ್ನು ಮರೆಯುವಂತಿಲ್ಲ! |
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman