ಇನ್ನೂ ಎಷ್ಟು ಸಮೀರ್ ಗಾಯಕ್ವಾಡ್‌ನಂತಹವರನ್ನು ನಾವು ಕಳೆದುಕೊಳ್ಳಬೇಕಿದೆ?

ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಿರುವ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್

ಸಮೀರ್ ಗಾಯಕ್ವಾಡ್ ಶ್ರದ್ಧಾಂಜಲಿ ಸಭೆಯಲ್ಲಿ ಹಿಂದೂತ್ವನಿಷ್ಠರ ಆಕ್ರೋಶದ ಪ್ರಶ್ನೆ

ಕೊಲ್ಲಾಪುರ, ಜನವರಿ 24 (ವಾರ್ತೆ) – ನಿರಪರಾಧಿಯಾದ ಹಿಂದೂತ್ವನಿಷ್ಠ ದಿ. ಸಮೀರ್ ಗಾಯಕ್ವಾಡ್ ಅವರು ಕಾ. ಗೋವಿಂದ್ ಪಾನಸರೆ ಹತ್ಯೆ ಪ್ರಕರಣದಲ್ಲಿ ಆಡಳಿತಾತ್ಮಕ ವ್ಯವಸ್ಥೆ ಮತ್ತು ಪ್ರಗತಿಪರ ‘ಇಕೋಸಿಸ್ಟಮ್’ನ ಸುಳ್ಳು ಆರೋಪಗಳಿಗೆ ಬಲಿಯಾದರು. ಕೇವಲ ಸನಾತನ ಸಂಸ್ಥೆಯ ಸಾಧಕ ಎಂಬ ಕಾರಣಕ್ಕೆ ಅವರು ಜೈಲು ಶಿಕ್ಷೆ ಅನುಭವಿಸಬೇಕಾಯಿತು ಮತ್ತು ಇದರಿಂದ ಅವರ ಕುಟುಂಬದವರೂ ಸಂಕಷ್ಟಕ್ಕೆ ಸಿಲುಕಿದರು. ಮುಂದಿನ ದಿನಗಳಲ್ಲಿ ಸಮೀರ್ ಗಾಯಕ್ವಾಡ್ ಅವರಂತಹ ಇನ್ನು ಎಷ್ಟು ಜನರನ್ನು ನಾವು ಕಳೆದುಕೊಳ್ಳಲಿದ್ದೇವೆ?” ಎಂಬ ಆಕ್ರೋಶದ ಪ್ರಶ್ನೆಯನ್ನು ಎತ್ತಿದ ಹಿಂದೂತ್ವನಿಷ್ಠರು, ಸಮೀರ್ ಅವರ ಕುಟುಂಬಕ್ಕೆ ಸರಕಾರದಿಂದ ದೃಢ ಸಹಾಯ ಸಿಗಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಿರುವ ಶ್ರೀ. ರಾಜು ಯಾದವ

ರಾಧಾಕೃಷ್ಣ ಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಈ ಬೇಡಿಕೆಯನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಶಿವಸೇನಾ ಪಕ್ಷದ ಕರವೀರ ತಾಲೂಕು ಮುಖ್ಯಸ್ಥ ಶ್ರೀ. ರಾಜು ಯಾದವ್ ಅವರು ಸಮೀರ್ ಅವರ ಕುಟುಂಬಕ್ಕೆ ಆರ್ಥಿಕ ನೆರವು ಘೋಷಿಸಿದರು. ‘ಸಕಲ ಹಿಂದೂ ಸಮಾಜ’, ‘ಸಮಸ್ತ ಹಿಂದೂತ್ವನಿಷ್ಠ ಸಂಘಟನೆಗಳು’ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ಯ ವತಿಯಿಂದ ಈ ಸಭೆಯನ್ನು ಆಯೋಜಿಸಲಾಗಿತ್ತು. ಸಮೀರ್ ಗಾಯಕ್ವಾಡ ಪರವಾಗಿ ವಕಾಲತ್ತು ಮಾಡುತ್ತಿದ್ದವರಲ್ಲಿ ಒಬ್ಬರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ (ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್) ಇವರು “ದಿ. ಸಮೀರ್ ಅವರು ಹತ್ಯೆಯ ದಿನ ಪಾಲ್ಘರ್‌ನಲ್ಲಿ ಇದ್ದರೂ ಸಹ, ವ್ಯವಸ್ಥೆ ಮತ್ತು ಮಾಧ್ಯಮಗಳು ಅವರನ್ನು ಗುರಿಯಾಗಿಸಿದವು. ಹಾಗೂ ಅವರಿಗೆ ಕಾ. ಪಾನ್ಸರೆ ಹತ್ಯೆಯ ಆರೋಪವನ್ನು ಸಹಿಸಿಕೊಳ್ಳಬೇಕಾಯಿತು. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಶರದ್ ಕಳಸ್ಕರ್ ಮತ್ತು ಸಚಿನ್ ಅಂಧುರೆ ಅವರಿಗೆ ಶಿಕ್ಷೆಯಾದ ನಂತರ, ‘ನಾವು ನಿರಪರಾಧಿಯಾಗಿದ್ದರೂ ನಮಗೂ ಇಂತಹ ಶಿಕ್ಷೆಯಾಗಬಹುದು’ ಎಂಬ ಆತಂಕ ಅವರ ಮನಸ್ಸಿನಲ್ಲಿತ್ತು. ‘ಮೀಡಿಯಾ ಟ್ರಯಲ್’ನಿಂದಾಗಿ ಅವರು ಜೈಲಿನಲ್ಲಿ ಇರಬೇಕಾಯಿತು ಮತ್ತು ಹೆಚ್ಚಿನ ಭದ್ರತೆಯ ಹೆಸರಿನಲ್ಲಿ ಜೈಲಿನಲ್ಲಿ ತೀವ್ರ ಕಿರುಕುಳವನ್ನು ಎದುರಿಸಬೇಕಾಯಿತು”, ಎಂದು ಹೇಳಿದರು.

ಶ್ರೀ. ಕಿಶೋರ್ ಘಾಟ್ಗೆ ಉಪಜಿಲ್ಲಾ ಪ್ರಮುಖ್, ಶಿವಸೇನೆ “ಪಕ್ಷದ ನಾಯಕರೊಂದಿಗೆ ಚರ್ಚಿಸಿ ಸಮೀರ್ ಅವರ ಕುಟುಂಬಕ್ಕೆ ನೆರವು ನೀಡಲು ಪ್ರಯತ್ನಿಸುತ್ತೇವೆ. ಅವರ ಸ್ಮರಣೆಗಾಗಿ ಅವರ ಹೆಸರಿನಲ್ಲಿ ವೇದಿಕೆ ಅಥವಾ ಅಂಬ್ಯುಲೆನ್ಸ್ ಸೇವೆ ಆರಂಭಿಸಿದರೆ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ,” ಎಂದು ಹೇಳಿದರು. ಶ್ರೀ ಭಗವಂತರಾವ್ ಜಾಂಬಳೆ ಉಪಜಿಲ್ಲಾ ಪ್ರಮುಖ್, ಮಹಾರಾಷ್ಟ್ರ ನವನಿರ್ಮಾಣ ಸೇನೆ ಇವರು ಮಾತನಾಡುತ್ತಾ, “ನ್ಯಾಯಾಂಗ ವ್ಯವಸ್ಥೆಯ ದೋಷಗಳಿಂದಾಗಿ ಸಮೀರ್ ಅವರಂತಹ ಅನೇಕರ ಪ್ರಕರಣಗಳು ಬಾಕಿ ಉಳಿಯುತ್ತಿವೆ. ಹಿಂದೂತ್ವನಿಷ್ಠ ಸರಕಾರವು ಇಂತಹ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಮುಂದಾಗಬೇಕು,” ಎಂದು ಹೇಳಿದರು.

“ಒಂದು ವೇಳೆ ವಿಚಾರಣೆಯ ನಂತರ ಸಮೀರ್ ನಿರಪರಾಧಿ ಎಂದು ಸಾಬೀತಾದರೆ, ಅವರನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು.”ಎಂದು ಉದ್ದವು ಬಾಳ ಸಾಹೇಬ್ ಠಾಕ್ರೆ ಪಕ್ಷದ ಕರವೀರ ತಾಲೂಕ ಪ್ರಮುಖ ಶ್ರೀ. ರಾಜು ಯಾದವ್ ಇವರು ಬೇಡಿಕೆ ಸಲ್ಲಿಸಿದರು. ಸನಾತನ ಸಂಸ್ಥೆಯ ಡಾ. ಮಾನಸಿಗ ಶಿಂದೆ ಇವರು ಮಾತನಾಡಿ, “ಕಸಬ್‌ನಂತಹ ಕ್ರೂರ ಭಯೋತ್ಪಾದಕನಿಗೂ ವಕೀಲರನ್ನು ನೀಡಲಾಗುತ್ತದೆ; ಆದರೆ ಸಮೀರ್ ಅವರಿಗೆ ಕೊಲ್ಲಾಪುರದಲ್ಲಿ ಪ್ರಗತಿಪರರು ವಕೀಲರು ಸಿಗದಂತೆ ಮಾಡಿದ್ದು ದುರದೃಷ್ಟಕರ,” ಎಂದು ಹೇಳಿದರು. ಸೂತ್ರ ಸಂಚಾಲಕರು ಶ್ರೀ. ಬಾಬಾ ಸಾಹೇಬ ಭೊಪಳೆ ಇವರು ಹಿಂದೂ ಧರ್ಮಕ್ಕಾಗಿ ಕಾರ್ಯ ಮಾಡುವ ಸಮೀರ್ ಇವರಂತಹ ಸಾವು ಮತ್ತೆ ಯಾರದು ಆಗಬಾರದೆಂದು ನಾವೆಲ್ಲರೂ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.

ಸಭೆಯ ಆರಂಭದಲ್ಲಿ ನಿಲುವವನ್ನು ಸ್ಪಷ್ಟಪಡಿಸುತ್ತಿರುವ ಶ್ರೀ. ಬಾಬಾಸಾಹೇಬ್ ಭೋಪಳೆ ಮತ್ತು ಉಪಸ್ಥಿತ ಹಿಂದೂತ್ವನಿಷ್ಠರು

ಈ ಸಭೆಯಲ್ಲಿ ಹಿಂದೂತ್ವನಿಷ್ಠ ಶ್ರೀ. ಕಮಲಾಕರ ಕಿಲಕಿಲೆ, ಮಹಾರಾಷ್ಟ್ರ ಮಂದಿರ ಮಹಾಸಂಘದ ಶ್ರೀ. ಅಶೋಕ್ ಗುರವ್, ನ್ಯಾಯವಾದಿ ರಂಜಿತ್ ಸಿಂಗ್ ಘಾಟ್ಗೆ, ಹಿಂದೂ ಏಕತಾ ಆಂದೋಲನದ ಶ್ರೀ. ದಿಲೀಪ್ ಭಿವಟೆ, ಹಿಂದೂ ಮಹಾಸಭೆಯ ವಕ್ತಾರ ಶ್ರೀ. ಸುನಿಲ್ ಸಾಮಂತ್, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಿವಾನಂದ ಸ್ವಾಮಿ, ಭಾಜಪದ ಮಹಿಳಾ ಕಾರ್ಯದರ್ಶಿ ಸೌ. ವಂದನಾ ಬಂಬಲವಾಡ್ ಇವರು ತಮ್ಮ ಮನೋಗತ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ‘ ಮರಾಠಾ ತಿತುಕಾ ಮೇಳಾವಾ’ದ ಶ್ರೀ. ಯೋಗೇಶ ಕೆರಕರ, ಶ್ರೀ. ಪ್ರಮೋದ ಸಾವಂತ ಸೇರಿದಂತೆ ಅನೇಕ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.