ಮುಸ್ಲಿಮರಿಂದ ನಮಾಜ್ ಪಠಣೆ

ಧಾರ್ (ಮಧ್ಯಪ್ರದೇಶ) – ಇಲ್ಲಿನ ಭೋಜಶಾಲೆಯಲ್ಲಿ ಜನವರಿ 23 ರಂದು ವಸಂತ ಪಂಚಮಿ ನಿಮಿತ್ತ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡಲಾಗಿತ್ತು; ಆದರೆ ಮಧ್ಯಾಹ್ನ 12 ರಿಂದ 3.30 ರವರೆಗೆ ಮುಸ್ಲಿಮರ ನಮಾಜ್ ಪಠಣೆಗಾಗಿ ಪೂಜೆಯನ್ನು ಸ್ಥಗಿತಗೊಳಿಸಲಾಗಿತ್ತು. ದಿನವಿಡೀ ಎರಡೂ ಧರ್ಮದವರಿಂದ ಶಾಂತಿಯುತವಾಗಿ ಧಾರ್ಮಿಕ ಕಾರ್ಯಗಳು ನಡೆದವು. ಈ ಸಂದರ್ಭದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬೆಳಗ್ಗೆ ಇಲ್ಲಿ ಮೆರವಣಿಗೆಯನ್ನು ಸಹ ನಡೆಸಲಾಯಿತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಪುರುಷರು ಕೇಸರಿ ಧ್ವಜಗಳನ್ನು ಹಿಡಿದು ಪಾಲ್ಗೊಂಡಿದ್ದರು.
Bhojshala Update🕉️📜
Vasant Panchami Puja & Darshan concluded peacefully at Bhojshala; Namaz was also offered as per the Supreme Court directions
It’s widely known that Bhojshala is a Hindu site. Hindus seek an expedited court hearing on the ASI survey ordered by the court, so… https://t.co/R3RoyW6K5p pic.twitter.com/swC0gAKyXI
— Sanatan Prabhat (@SanatanPrabhat) January 23, 2026
ಭೋಜಶಾಲಾ ಆವರಣದ ಕಮಲ್ ಮೌಲಾ ಮಸೀದಿಯಲ್ಲಿ ನ್ಯಾಯಾಲಯದ ಆದೇಶದಂತೆ ನಿಗದಿಪಡಿಸಿದ ಸಮಯದಲ್ಲಿ ಮುಸ್ಲಿಮರನ್ನು ಆಡಳಿತ ಮಂಡಳಿಯು ವಜ್ರ ವಾಹನದ ಮೂಲಕ ಕರೆತಂದಿತ್ತು. ಸುಮಾರು 20 ನಿಮಿಷಗಳ ನಮಾಜ್ ನಂತರ ಎಲ್ಲಾ ಮುಸ್ಲಿಮರನ್ನು ವಾಪಸ್ ಕರೆದೊಯ್ಯಲಾಯಿತು. ಮಸೀದಿಯ ಭಾಗವನ್ನು ಟೆಂಟ್ ಹಾಕಿ ಮುಚ್ಚಲಾಗಿತ್ತು. ಮುಸ್ಲಿಮರನ್ನು ಪ್ರತ್ಯೇಕ ಮಾರ್ಗ ಮತ್ತು ಪ್ರವೇಶ ದ್ವಾರದ ಮೂಲಕ ಇಲ್ಲಿಗೆ ಕರೆತರಲಾಗಿತ್ತು.
ಭಕ್ತರ ದಟ್ಟಣೆಯಿಂದಾಗಿ ವೃದ್ಧ ಭಕ್ತ ಮೂರ್ಛೆ
ಭೋಜಶಾಲೆಯ ಮುಖ್ಯ ಪ್ರವೇಶ ದ್ವಾರದಲ್ಲಿ ಭಕ್ತರ ದೊಡ್ಡ ಸರತಿ ಸಾಲು ಇತ್ತು. ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ಪ್ರದೇಶದಲ್ಲಿ ಜನದಟ್ಟಣೆ ಇತ್ತು. ಇದೇ ಸಮಯದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧ ಭಕ್ತರೊಬ್ಬರ ಆರೋಗ್ಯ ಹಠಾತ್ ಹದಗೆಟ್ಟು ಅವರು ಪ್ರಜ್ಞೆ ತಪ್ಪಿ ಬಿದ್ದರು. ಅಲ್ಲಿದ್ದ ಆಡಳಿತ ಮಂಡಳಿ ಮತ್ತು ಸ್ವಯಂಸೇವಕರ ಸಹಾಯದಿಂದ ಅವರನ್ನು ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರ ತಂಡವು ಪ್ರಾಥಮಿಕ ಚಿಕಿತ್ಸೆ ನೀಡಿತು. ಚಿಕಿತ್ಸೆಯ ನಂತರ ಭಕ್ತನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಸಂಪಾದಕೀಯ ನಿಲುವುಭೋಜಶಾಲೆಯು ಹಿಂದೂಗಳದ್ದು ಎಂಬುದು ಜಗಜ್ಜಾಹೀರಾಗಿದೆ. ಪುರಾತತ್ವ ಇಲಾಖೆಯು ನ್ಯಾಯಾಲಯದ ಆದೇಶದಂತೆ ನಡೆಸಿದ ಸಮೀಕ್ಷೆಯ ಮೇಲೆ ಆದಷ್ಟು ಬೇಗ ವಿಚಾರಣೆ ನಡೆದು, ಭೋಜಶಾಲೆಯು ಹಿಂದೂಗಳಿಗೆ ದೊರೆತು ಈ ಸಮಸ್ಯೆ ಶಾಶ್ವತವಾಗಿ ಕೊನೆಗೊಳ್ಳಬೇಕು ಎಂದೇ ಹಿಂದೂಗಳು ಬಯಸುತ್ತಾರೆ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ