ಕಾಬೂಲ್ (ಅಫ್ಘಾನಿಸ್ತಾನ) ನಲ್ಲಿರುವ ಚೀನಿ ರೆಸ್ಟೋರೆಂಟ್ ಮೇಲೆ ಆತ್ಮಾಹುತಿ ದಾಳಿ; 7 ಮಂದಿ ಸಾವು

ಕಾಬೂಲ್ (ಅಫ್ಘಾನಿಸ್ತಾನ) – ಇಲ್ಲಿ ಜನವರಿ 19 ರಂದು ಮಧ್ಯಾಹ್ನ ‘ಚೀನಾ ಲಾಂಝೌ ಬೀಫ್ ನೂಡಲ್ಸ್’ ಎಂಬ ಹೆಸರಿನ ಚೀನಿ ರೆಸ್ಟೋರೆಂಟ್‌ನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದೆ. ಇದರಲ್ಲಿ ಓರ್ವ ಚೀನಿ ಪ್ರಜೆ ಮತ್ತು ಆರು ಅಫ್ಘಾನಿಸ್ತಾನದ ಪ್ರಜೆಗಳು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದು, ಅದರಲ್ಲಿ ಅನೇಕ ಮಕ್ಕಳೂ ಸೇರಿದ್ದಾರೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದೆ. ಅಫ್ಘಾನ್ ಶಾಖೆಯು ಚೀನಿ ಪ್ರಜೆಗಳನ್ನು ಗುರಿಪಡಿಸುವ ಪಟ್ಟಿಯಲ್ಲಿ ಸೇರಿಸಿದೆ ಎಂದು ಇಸ್ಲಾಮಿಕ್ ಸ್ಟೇಟ್‌ನ ‘ಅಮಾಕ್’ ಸುದ್ದಿ ಸಂಸ್ಥೆ ತಿಳಿಸಿದೆ. ಚೀನಾ ಸರಕಾರವು ಉಯಿಘರ್ ಮುಸ್ಲಿಮರ ವಿರುದ್ಧ ನಡೆಸುತ್ತಿರುವ ದಮನಕಾರಿ ನೀತಿಯಿಂದಾಗಿ ಈ ದಾಳಿ ನಡೆಸಲಾಗಿದೆ ಎಂದು ಈ ಭಯೋತ್ಪಾದಕ ಸಂಘಟನೆ ದಾವೆ ಮಾಡಿದೆ.
ಮೃತರ ಪೈಕಿ ಅಯೂಬ್ ಎಂಬ ಹೆಸರಿನ ಚೀನಿ ಪ್ರಜೆಯನ್ನು ಗುರುತಿಸಲಾಗಿದೆ ಎಂದು ಪೊಲೀಸ್ ವಕ್ತಾರ ಖಾಲಿದ್ ಜಾದ್ರಾನ್ ತಿಳಿಸಿದ್ದಾರೆ. ಈ ಚೀನಿ ರೆಸ್ಟೋರೆಂಟ್ ಅನ್ನು ಚೀನಿ ಮುಸ್ಲಿಂ ಅಬ್ದುಲ್ ಮಜೀದ್, ಅವರ ಪತ್ನಿ ಮತ್ತು ಅಫ್ಘಾನ್ ಸಹೋದ್ಯೋಗಿ ಅಬ್ದುಲ್ ಜಬ್ಬಾರ್ ಮಹಮೂದ್ ಜಂಟಿಯಾಗಿ ನಡೆಸುತ್ತಿದ್ದರು. ಈ ರೆಸ್ಟೋರೆಂಟ್‌ನ ಹೆಚ್ಚಿನ ಗ್ರಾಹಕರು ಚೀನಿ ಮುಸ್ಲಿಮರಾಗಿದ್ದರು. (ಚೀನಾದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಸೇಡು ತೀರಿಸಿಕೊಳ್ಳಲು ಚೀನಿ ಮುಸ್ಲಿಮರನ್ನೇ ಕೊಲ್ಲುವುದರಿಂದ ಏನು ಸಾಧಿಸಲು ಸಾಧ್ಯ? – ಸಂಪಾದಕರು)
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು