ಭಾರತದಿಂದ ಆಮದು ಸುಂಕವನ್ನು ರದ್ದುಗೊಳಿಸಲು ಒತ್ತಾಯಿಸಿ ! – ಅಮೇರಿಕಾದ ಇಬ್ಬರು ಸಂಸದರಿಂದ ಟ್ರಂಪ್ ಅವರಿಗೆ ಪತ್ರ ಬರೆದು ಕೋರಿಕೆ

ವಾಷಿಂಗ್ಟನ್ ಡಿ.ಸಿ. (ಅಮೇರಿಕಾ) – ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇ. ೫೦ ರಷ್ಟು ಆಮದು ಸುಂಕವನ್ನು ಹೇರಿದ್ದಾರೆ. ರಷ್ಯಾದೊಂದಿಗೆ ಭಾರತ ನಡೆಸುತ್ತಿರುವ ತೈಲ ವ್ಯಾಪಾರವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ. ಹೀಗಿರುವಾಗ, ಈಗ ಭಾರತವು ಅಮೇರಿಕಾದ ಮೇಲೆ ಹೇರಿರುವ ಶೇ. ೩೦ ರಷ್ಟು ಆಮದು ಸುಂಕದ ಕುರಿತು ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಿದೆ.
India Pushes Back 🇮🇳⚔️🇺🇸
US Senators urge Donald Trump to pressure Narendra Modi on cutting pulse tariffs 🌾
India hits back after Trump’s 50% levies; imposes extra duties on US crops, incl. 30% tariff on yellow peas (from Nov 1, 2025) 💪📊#TariffWar #Geopolitics
PC:… pic.twitter.com/oQihgFEt3R— Sanatan Prabhat (@SanatanPrabhat) January 18, 2026
North Dakota and Montana are the top two producers of pulse crops, including peas, and India is the world’s largest consumer of these crops, contributing to approximately 27% of the world’s consumption. As the United States looks to rebalance trade disparities, American farmers…
— Senator Kevin Cramer (@SenKevinCramer) January 16, 2026
ಭಾರತವು ಅಮೇರಿಕಾದಿಂದ ಆಮದು ಮಾಡಿಕೊಳ್ಳಲಾಗುವ ಬೇಳೆಕಾಳುಗಳ ಮೇಲೆ ಈ ಸುಂಕವನ್ನು ವಿಧಿಸಿದೆ. ಈ ಸುಂಕವು ಅಕ್ಟೋಬರ್ ೩೦, ೨೦೨೫ ರಿಂದ ಜಾರಿಗೆ ಬಂದಿದೆ. ಈ ಆಮದು ಸುಂಕವನ್ನು ರದ್ದುಗೊಳಿಸುವಂತೆ ಅಮೇರಿಕಾದ ಇಬ್ಬರು ಸಂಸದರು ನೇರವಾಗಿ ಟ್ರಂಪ್ ಅವರಲ್ಲಿ ವಿನಂತಿಸಿದ್ದಾರೆ.
೧. ಅಮೇರಿಕಾದ ನಾರ್ತ್ ಡಕೋಟಾದ ಸಂಸದ ಕೆವಿನ್ ಕ್ರೇಮರ್ ಮತ್ತು ಮೊಂಟಾನಾದ ಸಂಸದ ಸ್ಟೀವ್ ಡೇನ್ಸ್ ಎಂಬುವವರು ಟ್ರಂಪ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ‘ಭಾರತವು ಅಮೇರಿಕಾದ ಮೇಲೆ ಹೇರಿರುವ ಈ ಆಮದು ಸುಂಕವನ್ನು ತೆಗೆದುಹಾಕುವಂತೆ ಅಮೇರಿಕಾವು ಭಾರತದ ಮೇಲೆ ಒತ್ತಡ ಹೇರಬೇಕು’, ಎಂದು ಹೇಳಲಾಗಿದೆ.
೨. ಈ ಪತ್ರದಲ್ಲಿ ಭಾರತವು ಜಾರಿಗೆ ತಂದಿರುವ ಈ ಆಮದು ಸುಂಕದಿಂದಾಗಿ ಅಮೇರಿಕಾದ ಬೇಳೆಕಾಳು ಬೆಳೆಯುವ ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ನಷ್ಟವಾಗುತ್ತಿದೆ. ಅಮೇರಿಕಾದಿಂದ ಕಡಲೆ ಬೇಳೆ, ಮಸೂರ ಬೇಳೆ ಮತ್ತು ಬಟಾಣಿಗಳನ್ನು ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ಭಾರತವು ಬೇಳೆಕಾಳುಗಳ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು ವಿವರಿಸಲಾಗಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !