
ನವದೆಹಲಿ – ಸಂಸತ್ತಿನ ಸೆಂಟ್ರಲ್ ಹಾಲ್ (ಮಧ್ಯವರ್ತಿ ಸಭಾಗೃಹ) ಮತ್ತು ಸಾರ್ವಜನಿಕ ಸ್ಥಳಗಳಿಂದ ಸ್ವಾತಂತ್ರ್ಯವೀರ ಸಾವರ್ಕರ್ ಅವರ ತೈಲ ಭಾವಚಿತ್ರವನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಈ ಅರ್ಜಿಯನ್ನು ನಿವೃತ್ತ ನಾಗರಿಕ ಸೇವಾ ಅಧಿಕಾರಿ ಬಿ. ಬಾಲಮುರುಗನ್ ಸಲ್ಲಿಸಿದ್ದರು. ‘ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ದೊಡ್ಡ ಮೊತ್ತದ ದಂಡವನ್ನು ವಿಧಿಸಬಹುದು’ ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಬಾಲಮುರುಗನ್ ಅವರಿಗೆ ಎಚ್ಚರಿಕೆ ನೀಡಿತು. ಈ ಅರ್ಜಿಯಲ್ಲಿ, ‘ಗಂಭೀರ ಅಪರಾಧಗಳು ಅಥವಾ ರಾಷ್ಟ್ರವಿರೋಧಿ ಚಟುವಟಿಕೆಗಳ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ದೋಷಮುಕ್ತರಾಗುವವರೆಗೆ ಸರಕಾರ ಅವರನ್ನು ಗೌರವಿಸಬಾರದು’ ಎಂಬ ಬೇಡಿಕೆಯನ್ನು ಸಹ ಇಡಲಾಗಿತ್ತು.
Supreme Court of India rejects the plea to remove Swatantryaveer Vinayak Damodar Savarkar’s oil painting from Parliament.
Erasing patriots won’t erase history.
Those who file such petitions should be sentenced to Kaala Paani (Cellular Jail) pic.twitter.com/I2YwZd0DTC
— Sanatan Prabhat (@SanatanPrabhat) January 14, 2026
೧. ‘ಆರ್ಥಿಕ ಸಂಕಷ್ಟದಿಂದಾಗಿ ವಾದ ಮಂಡಿಸಲು ದೆಹಲಿಗೆ ಬರಲು ಸಾಧ್ಯವಿಲ್ಲ’ ಎಂದು ಬಾಲಮುರುಗನ್ ಹೇಳಿದ್ದರು. ಇದಕ್ಕೆ ನ್ಯಾಯಾಲಯ ಅವರನ್ನು ತರಾಟೆಗೆ ತೆಗೆದುಕೊಂಡು, ನೀವು ಒಬ್ಬ ನಾಗರಿಕ ಸೇವಾ ಅಧಿಕಾರಿಯಾಗಿದ್ದವರು, ದೆಹಲಿಗೆ ಬಂದು ನಿಮ್ಮ ಪರ ವಾದ ಮಂಡಿಸಬಹುದು. ನಾವು ನಿಮಗೆ ಭಾರೀ ದಂಡ ವಿಧಿಸಬಹುದು. ನೀವು ನಿಮ್ಮನ್ನು ಏನೆಂದು ತಿಳಿದುಕೊಂಡಿದ್ದೀರಿ? ಎಂದು ಪ್ರಶ್ನಿಸಿತು.
೨. ನ್ಯಾಯಾಲಯವು ಬಾಲಮುರುಗನ್ ಅವರಿಗೆ, ದಯವಿಟ್ಟು ಇಂತಹ ವಿವಾದಗಳಲ್ಲಿ ಸಿಲುಕಬೇಡಿ. ನಿವೃತ್ತ ಜೀವನವನ್ನು ಆನಂದಿಸಿ. ಸಮಾಜದಲ್ಲಿ ರಚನಾತ್ಮಕ ಪಾತ್ರವನ್ನು ವಹಿಸಿ ಎಂದು ತಿಳಿಸಿತು. ಇದರ ನಂತರ ಬಾಲಮುರುಗನ್ ಅವರು ಅರ್ಜಿಯನ್ನು ಹಿಂಪಡೆದರು.
ಸಂಪಾದಕೀಯ ನಿಲುವುಇಂತಹ ಅರ್ಜಿಗಳನ್ನು ಸಲ್ಲಿಸುವವರಿಗೆ ಕಪ್ಪು ನೀರಿನ ಶಿಕ್ಷೆಯನ್ನೇ ವಿಧಿಸಬೇಕು ! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !