
ತಿರುವನಂತಪುರಂ (ಕೇರಳ) – ಶಬರಿಮಲೆ ದೇವಾಲಯದ ಚಿನ್ನದ ಕಳ್ಳತನದ ಬೆನ್ನಲ್ಲೇ, ಇದೀಗ ತುಪ್ಪದ ಹಗರಣದ ತನಿಖೆಗಾಗಿ ವಿಚಕ್ಷಣಾ ದಳವನ್ನು (Vigilance Team) ರಚಿಸುವಂತೆ ಕೇರಳ ಹೈಕೋರ್ಟ್ ಆದೇಶಿಸಿದೆ. ದೇವಾಲಯದ ನೈಯ್ಯಾಭಿಷೇಕದ ನಂತರ ಉಳಿಯುವ ‘ಆದಿಯಾ ಸಿಸ್ಟಮ್’ ತುಪ್ಪದ ಮಾರಾಟದಲ್ಲಿ 35 ಲಕ್ಷ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ತನಿಖಾ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಶಬರಿಮಲೆಯ ವಿಶೇಷ ಆಯುಕ್ತರಿಗೆ ಸೂಚಿಸಿದೆ.
1. ನ್ಯಾಯಾಲಯವು, 17 ನವೆಂಬರ್ 2025 ರಿಂದ 26 ಡಿಸೆಂಬರ್ 2025 ಮತ್ತು 27 ಡಿಸೆಂಬರ್ 2025 ರಿಂದ 2 ಜನವರಿ 2026 ರ ಅವಧಿಯಲ್ಲಿ ಸುಮಾರು 35 ಲಕ್ಷ ರೂಪಾಯಿಗಳ ಅಕ್ರಮ ನಡೆದಿದೆ ಎಂದು ತಿಳಿಸಿದೆ. ಸಮರ್ಥ ಅಧಿಕಾರಿಗಳ ತಂಡವನ್ನು ಸಿದ್ಧಪಡಿಸಲು ಮತ್ತು ಮುಖ್ಯ ವಿಚಕ್ಷಣಾ ಹಾಗೂ ಭದ್ರತಾ ಅಧಿಕಾರಿಯ ವರದಿಯ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲು ವಿಚಕ್ಷಣಾ ನಿರ್ದೇಶಕರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ತನಿಖಾ ತಂಡವು ಒಂದು ತಿಂಗಳೊಳಗೆ ಪ್ರಗತಿ ವರದಿಯನ್ನು ಸಲ್ಲಿಸಬೇಕೆಂದು ತಿಳಿಸಲಾಗಿದೆ.
2. ತನಿಖೆಯಲ್ಲಿ, ಮಾರಮಠ ಕಟ್ಟಡದ ಮಾರಾಟ ಕೇಂದ್ರದಿಂದ 16 ಸಾವಿರದ 628 ಪ್ಯಾಕೆಟ್‌ಗಳ ಮಾರಾಟದಿಂದ ಬಂದ ಹಣವನ್ನು ತಿರುವಾಂಕೂರು ದೇವಸ್ವಂ ಮಂಡಳಿಯ ಖಾತೆಗೆ ಜಮಾ ಮಾಡಲಾಗಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪ್ರತಿ ಪ್ಯಾಕೆಟ್‌ನಲ್ಲಿ 100 ಮಿಲಿ ಲೀಟರ್ ತುಪ್ಪವಿದ್ದು, ಭಕ್ತರಿಗೆ 100 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಒಟ್ಟು 3,52,050 ಪ್ಯಾಕೆಟ್‌ಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳಲ್ಲಿ ಸುಮಾರು 89,300 ಪ್ಯಾಕೆಟ್‌ಗಳು ಮಾರಾಟವಾಗಿದ್ದವು; ಆದರೆ ಉದ್ಯೋಗಿಗಳು ಕೇವಲ 75,450 ಪ್ಯಾಕೆಟ್‌ಗಳ ಹಣವನ್ನು ಮಾತ್ರ ಜಮಾ ಮಾಡಿದ್ದಾರೆ. ಇದರಿಂದಾಗಿ 13,679 ಪ್ಯಾಕೆಟ್‌ಗಳ ಹಣ ಅಂದರೆ ಸುಮಾರು 13 ಲಕ್ಷದ 68 ಸಾವಿರ ರೂಪಾಯಿಗಳು ಜಮೆಯಾಗಿಲ್ಲ, ಎಂದು ಹೇಳಿದೆ.
3. ಬೋರ್ಡ, ದೇವಸ್ವಂ ನೌಕರ ಸುನಿಲ ಕುಮಾರ್ ಪೋತ್ತಿ ಅವರು ಭಕ್ತರಿಗೆ ತುಪ್ಪದ ಮಾರಾಟದ ರಸೀದಿಗಳನ್ನು ನೀಡಿರಲಿಲ್ಲ. 24 ನವೆಂಬರ್ 2025 ರಿಂದ 30 ನವೆಂಬರ್ 2025 ರ ಅವಧಿಯಲ್ಲಿ 68,200 ರೂಪಾಯಿಗಳು ಜಮೆಯಾಗಿರಲಿಲ್ಲ. ಸುಮಾರು 17 ದಿನಗಳ ನಂತರ ಆದೇಶ ಬಂದ ಮೇಲಷ್ಟೇ ಆ ಹಣವನ್ನು ಜಮಾ ಮಾಡಲಾಗಿತ್ತು. ಈ ಪ್ರಕರಣದ ನಂತರ ಸುನಿಲ ಕುಮಾರ್ ಪೋತ್ತಿ ಅವರನ್ನು ಅಮಾನತುಗೊಳಿಸಲಾಗಿದ್ದು, ಮುಂದಿನ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ, ಎಂದು ತಿಳಿಸಿದೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !