೨೬ ನವೆಂಬರ್‌ ೨೦೦೮ ರ ಆಕ್ರಮಣದಿಂದ ದೆಹಲಿ ಬಾಂಬ್‌ ಸ್ಫೋಟದವರೆಗೆ ನಾವೇನು ಕಲಿತೆವು ?

ದೆಹಲಿಯಲ್ಲಿ ಬಾಂಬ್‌ ಸ್ಫೋಟಗಳಾದವು. ಅದರ ನಂತರ ಸಾವಿರಾರು ಕೆ.ಜಿ. ಗಳಷ್ಟು ಸ್ಫೋಟಕಗಳು ಸಿಕ್ಕವು  ಅಥವಾ ‘ಅಲ್‌ ಫಲಾಹ್‌’ ವಿಶ್ವವಿದ್ಯಾಲಯದ ಎಲ್ಲಾ ಕುಕೃತ್ಯಗಳು ಮತ್ತು ವೈದ್ಯರ ಸಂಘವು ಅದರಲ್ಲಿ ಹೇಗೆ ಕೆಲಸ ಮಾಡುತ್ತಿತ್ತು ಎಂಬುದು ಈಗ ಬಹಿರಂಗವಾಗುತ್ತಿದೆ. ೨೬ ನವೆಂಬರ್‌ ೨೦೦೮ ರಂದಾದ (೨೬/೧೧) ಆಕ್ರಮಣದಿಂದ ಇಂದಿನವರೆಗೆ, ಕಳೆದ ೧೭ ವರ್ಷಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯುವಲ್ಲಿ ನಾವು ಎಲ್ಲಿಯವರೆಗೆ ತಲುಪಿದ್ದೇವೆ ಎಂದರೆ, ‘೧೭ ವರ್ಷಗಳ ಹಿಂದೆ ಅಜ್ಮಲ್‌ ಕಸಬ್‌ನನ್ನು ಸೆರೆ ಹಿಡಿದಾಗ, ಅವನು ಪಾಕಿಸ್ತಾನದ ಯಾವುದೋ ಒಂದು ಉರ್ದು ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿರುವಾಗಲೇ ಶಾಲೆಯನ್ನು ಬಿಟ್ಟಿದ್ದ ಹುಡುಗನಾಗಿದ್ದನು. ಅವನು ಎಲ್ಲೋ ಹಮಾಲಿ ಕೆಲಸ ಮಾಡುತ್ತಿದ್ದನು,’ ಎಂದು ಅವನು ನ್ಯಾಯಾಲಯದ ಮುಂದೆ ಹೇಳಿದ್ದನು. ನಮಗೆ ಕಳೆದ ೨೫-೩೦ ವರ್ಷಗಳಿಂದ ‘ಮುಸಲ್ಮಾನರು ಹಿಂದುಳಿದವರು’ ಎಂದು ನಿರಂತರವಾಗಿ ಹೇಳಲಾಗುತ್ತದೆ. ಅವರನ್ನು ಮುನ್ನಲೆಗೆ ತರಲು ನಂತರ ‘ಸಚ್ಚರ್‌ ಸಮಿತಿ’ಯ ವರದಿ ಬಂದು, ಅವರನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಬೇಕು ಎಂದು ಹೇಳಿತು.

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

೧. ಶಿಕ್ಷಣ ಮತ್ತು ಭಯೋತ್ಪಾದನೆಗೆ ಏನೂ ಸಂಬಂಧವಿಲ್ಲ !

ಶಿಕ್ಷಣವಿಲ್ಲದ ಮಕ್ಕಳು ಅಥವಾ ವಿದ್ಯಾರ್ಥಿಗಳು, ಯುವಕರ ಮನಸ್ಸಿನಲ್ಲಿ ಇಂತಹದ್ದೇನೋ ಬಿತ್ತಿ ಭಯೋತ್ಪಾದಕ ಕೃತ್ಯಗಳನ್ನು ಮಾಡಿಸಲಾಗುತ್ತಿದೆ ಎಂಬ ಒಂದು ‘ನೆರೇಟಿವ್‌’ ಸೆಟ್‌ ಮಾಡುವ (ಸುಳ್ಳು ಕಥಾನಕ ರಚಿಸುವ) ಪ್ರಯತ್ನ ದೇಶದಲ್ಲಿ ನಡೆಯುತ್ತಿತ್ತು. ದೆಹಲಿಯಲ್ಲಿ ನಡೆದ ಸ್ಫೋಟವೇ ಅದಕ್ಕೆ ಉತ್ತರವಾಗಿದೆ. ಶಿಕ್ಷಣ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಯಾವುದೇ ಸಂಬಂಧವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇಸ್ಲಾಂನಲ್ಲಿ ಎರಡು ತಾತ್ತ್ವಿಕ ಭಾಗಗಳಿವೆ: ಒಂದು ‘ದಾರ್‌ ಉಲ್‌ ಇಸ್ಲಾಂ’ ಎಂದರೆ ಇಸ್ಲಾಂನ ಆಡಳಿತ ಮತ್ತು ಇನ್ನೊಂದು ‘ದಾರ್‌ ಉಲ್‌ ಹರಬ’ ಎಂದರೆ ಇಸ್ಲಾಂ ಹೊರತುಪಡಿಸಿದ ಆಡಳಿತ ! ‘ದಾರ್‌ ಉಲ್‌ ಇಸ್ಲಾಂ’ ಸ್ಥಾಪನೆಗಾಗಿ ಕೆಲಸ ಮಾಡಬೇಕು ಎಂಬ ಭಾವನೆಯನ್ನು ಯುವಕರ ಮನಸ್ಸಿನಲ್ಲಿ ಬಿತ್ತಲಾಗುತ್ತಿದೆ.

೨. ಸರಕಾರದ ಮೇಲೆ ಕೋಟ್ಯಂತರ ರೂಪಾಯಿಗಳ ಹೊರೆ

೨೬/೧೧ ರ ಆಕ್ರಮಣದ ಸಮಯದಲ್ಲಿ, ೨-೩ ದಿನಗಳ ಕಾಲ ಮುಂಬಯಿಯಲ್ಲಿ ಭಯೋತ್ಪಾದಕರ ತಾಂಡವ ನಡೆಯುತ್ತಿತ್ತು. ಅದರಲ್ಲಿ ಅನೇಕ ನಿರಪರಾಧಿಗಳು ಮೃತಪಟ್ಟರು, ತಾಜ್‌ನಂತಹ ಪ್ರತಿಷ್ಠಿತ ಹೋಟೆಲ್‌ಗೆ ಬೆಂಕಿ ಹಚ್ಚಲಾಯಿತು. ಆ ಸಮಯದಲ್ಲಿ ೧೫೦ ಕೋಟಿ ರೂಪಾಯಿಗಳ ಸ್ಥಿರ ಆಸ್ತಿ ಹಾನಿಯಾಯಿತು. ಉಳಿದಂತೆ, ಪೊಲೀಸ್‌ ವ್ಯವಸ್ಥೆಗೆ ತಗುಲಿದ ಕೆಲಸ ಅಥವಾ ನಂತರ ನ್ಯಾಯಾಲಯದ ವ್ಯರ್ಥವಾದ ಸಮಯ, ಕಸಬ್‌ನಿಗೆ ಸರಕಾರಿ ವೆಚ್ಚದಲ್ಲಿ ನೀಡಿದ ಸೌಲಭ್ಯಗಳು, ಉಜ್ವಲ್‌ ನಿಕಮ್‌ ಅವರಂತಹ ಸರಕಾರಿ ವಕೀಲರ ವೆಚ್ಚ, ಈ ಎಲ್ಲಾ ವೆಚ್ಚಗಳು ಇಂದು ಕನಿಷ್ಠ ೪೦೦ ಕೋಟಿ ರೂಪಾಯಿಗಳ ಗಡಿಯಲ್ಲಿದೆ. ಈ ೧೭ ವರ್ಷಗಳಲ್ಲಿ ನಾವು ಏನು ಮಾಡಿದ್ದೇವೆ ಎಂದರೆ, ‘ಸಿಸಿಟಿವಿ ಕ್ಯಾಮೆರಾ’ಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ, ನಂತರ ರಾಷ್ಟ್ರೀಯ ತನಿಖಾ ದಳದಂತಹ (ನ್ಯಾಶನಲ್‌ ಇನ್ವೆಸ್ಟಿಗೇಶನ್‌ ಎಜೆನ್ಸಿ- ಎನ್‌. ಐ.ಎ. ಯಂತಹ) ಒಂದು ದೊಡ್ಡ ವ್ಯವಸ್ಥೆಯನ್ನು ದೇಶದಲ್ಲಿ ಸ್ಥಾಪಿಸಿದ್ದೇವೆ. ಕಾನೂನುಗಳನ್ನು ಬದಲಾಯಿಸಿದ್ದೇವೆ. ಸರಕಾರವು ಹೊಸ ದೋಣಿಗಳನ್ನು ಖರೀದಿಸಿತು. ಮುಂದೆ ಅದರಿಂದ ಏನು ಪ್ರಯೋಜನವಾಯಿತು ಎಂಬುದು ಬೇರೆ ವಿಷಯ. ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು, ಸರಕಾರವು ಹಲವಾರು ವ್ಯವಸ್ಥೆಗಳನ್ನು ಅತ್ಯಾಧುನೀಕರಣಗೊಳಿಸಲು ಕೋಟಿಗಟ್ಟಲೆ ರೂಪಾಯಿಗಳ ವೆಚ್ಚ ಮಾಡಿತು. ಆದರೆ, ಗಂಭೀರವಾದ ಸಂಗತಿ ಏನೆಂದರೆ, ಮುಂಬಯಿ ಮೇಲಿನ ಆಕ್ರಮಣದ ನಂತರ ಈ ವೆಚ್ಚದ ಪ್ರಮಾಣವು ಹೆಚ್ಚಿತು. ಇದಕ್ಕಾಗಿ, ಸರಕಾರವು ಹೆಚ್ಚಿನ ಹೂಡಿಕೆಯನ್ನು ಮಾಡಬೇಕಾಯಿತು.

೩. ಪ್ರತಿರೋಧವನ್ನೇ ವ್ಯಕ್ತಪಡಿಸದ ಕಾಂಗ್ರೆಸ್‌

ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಅವರು, ೨೬/೧೧ ರ ಆಕ್ರಮಣವಾದಾಗ ಸುಶೀಲ ಕುಮಾರ ಶಿಂದೆ ಗೃಹ ಸಚಿವರಾಗಿದ್ದರು, ಆಕ್ರಮಣದ ನಂತರ ಅವರು ರಾಜೀನಾಮೆ ನೀಡಿದರು ಎಂದು ಒಪ್ಪಿಕೊಂಡರು. ಈಗ ಚಿದಂಬರಂ ಹೇಳುತ್ತಿದ್ದಾರೆ, ‘ಏನಾದರೂ ಕ್ರಮ ತೆಗೆದುಕೊಳ್ಳಬೇಕೆಂಬ ಇಚ್ಛೆ ನಮಗಿತ್ತು; ಆದರೆ ಅಮೆರಿಕದ ಒತ್ತಡವಿತ್ತು.’ ಅವರ ಈ ಹೇಳಿಕೆಯ ಬಗ್ಗೆ ಸಾಕಷ್ಟು ಸುದ್ದಿ ಪ್ರಸಾರವಾಯಿತು. ಕಾಂಗ್ರೆಸ್‌ ಏನನ್ನೂ ಮಾಡಲೇ ಇಲ್ಲ. ನನಗೆ ನೆನಪಿದೆ, ಅಂದರೆ, ಆ ವಿಷಯದ ಬಗ್ಗೆ ನಾನು ಮೊದಲ ಟ್ವೀಟ್‌ ಮಾಡಿದ್ದೆ, ‘೨೦೧೯ ರವರೆಗೆ ನಾವು ಪಾಕಿಸ್ತಾನಕ್ಕೆ ‘ಮೋಸ್ಟ್ ಫೆವರ್ಡ ನೇಷನ್‌’ (ಅತ್ಯಂತ ಒಲವಿನ ರಾಷ್ಟ್ರ) ಸ್ಥಾನಮಾನವನ್ನು ನೀಡಿದ್ದೆವು.’ ನಾವು ‘ಆಪರೇಷನ್‌ ಸಿಂದೂರ್‌’ ಬಗ್ಗೆ ಮಾತನಾಡುತ್ತೇವೆ; ಆದರೆ ಇದು ಸಾಕೇ, ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು.

…ಆಗಲೇ ಭಯೋತ್ಪಾದನೆ ಕೊನೆಗೊಳ್ಳುತ್ತದೆ !

೧೯೯೩ ರ ಬಾಂಬ್‌ ಸ್ಫೋಟವಾದಾಗ ಟೈಗರ್‌ ಮೆನನ್‌ ಮತ್ತು ಅವನ ಇಡೀ ಕುಟುಂಬದವರು ಪಾಕಿಸ್ತಾನಕ್ಕೆ ಓಡಿಹೋದರು. ಯಾಕೂಬ್‌ಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ೨೦೧೫ ರಲ್ಲಿ ಅವನ ಗಲ್ಲು ಶಿಕ್ಷೆಯ ನಂತರ, ಅವನ ಅಂತ್ಯಯಾತ್ರೆ ನಡೆದಾಗ, ಸಹಸ್ರಾರು ಬೆಂಬಲಿಗರು ಜಮಾಯಿಸಿದ್ದರು. ಅವರು ಯಾವುದಕ್ಕಾಗಿ ಬಂದಿದ್ದರು ? ಎಲ್ಲಿಯವರೆಗೆ ಭಯೋತ್ಪಾದಕರಿಗೆ ಭಾರತದಲ್ಲಿ ಈ ಬೆಂಬಲ ಸಿಗುವುದೋ ಅಲ್ಲಿಯವರೆಗೆ ಇದು ಕೊನೆಗೊಳ್ಳುವುದಿಲ್ಲ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾರತೀಯ ಮುಸಲ್ಮಾನರ ಪಾತ್ರವು ಬಹಳ ದೊಡ್ಡದಾಗಿದೆ ಎಂದು ನನಗೆ ಅನಿಸುತ್ತದೆ. ಭಾರತೀಯ ಮುಸಲ್ಮಾನರು ಜಾಗತಿಕ ಮಟ್ಟದಲ್ಲಿ ಗಟ್ಟಿಯಾಗಿ ಕೂಗಿ, ‘ನನ್ನ ಪಾಲಿಗೆ ನನ್ನ ಮೊದಲ ಸಹೋದರ ಹಿಂದೂ, ನಂತರ ಇತರರು’ ಎಂದು ಹೇಳಿದಾಗ ಮಾತ್ರ, ಭಾರತದಲ್ಲಿ ಎಲ್ಲೋ ಒಂದು ಕಡೆ ಬದಲಾವಣೆ ಪ್ರಾರಂಭವಾಗುತ್ತದೆ. ಇಲ್ಲದಿದ್ದರೆ ಈ ಘಟನೆಗಳು ಮುಂದುವರಿಯುತ್ತಲೇ ಇರುತ್ತವೆ.

೪. ‘ಎನ್‌.ಐ.ಎ.’ಯ ಸಾಮಥ್ಯರ್ವೇನು ?

೪ ಅ. ಮಡಗಾಂವ್‌ ಸ್ಫೋಟ ಪ್ರಕರಣದಲ್ಲಿ , ಎನ್‌.ಐ.ಎ.’ ವಿರುದ್ಧ ನ್ಯಾಯಾಲಯದ ತೀವ್ರ ಟೀಕೆ : ೨೬/೧೧ ರ ಭಯೋತ್ಪಾದಕ ಆಕ್ರಮಣದ ನಂತರ, ತನಿಖೆ ನಡೆಸುವ ‘ರಾಷ್ಟ್ರೀಯ ತನಿಖಾ ದಳ’ ಎಂಬ ಒಂದು ಏಜೆನ್ಸಿಯನ್ನು ಔಚಿತ್ಯದಿಂದ ಮಹತ್ತರ ಉದ್ದೇಶಕ್ಕಾಗಿ ಸ್ಥಾಪಿಸಲಾಯಿತು. ಭಯೋತ್ಪಾದನೆ ನಿರ್ಮೂಲನೆಗಾಗಿ ಸ್ಥಾಪಿಸಿದ ‘ಎನ್‌.ಐ.ಎ.’ಯ ಮೊದಲ ೫ ವರ್ಷಗಳ ಸಾಧನೆ ಏನು ಎಂದರೆ, ಗೋವಾದ ಮಡಗಾಂವ್‌ನಲ್ಲಿ ಸ್ಫೋಟ ಆಯಿತು. ಅದು ಅವರ ಮೊದಲ ಪ್ರಕರಣ. ಅದರಲ್ಲಿ ಹಿಂದೂಗಳು ಆರೋಪಿಗಳಿದ್ದರು. ನ್ಯಾಯಾಲಯದಲ್ಲಿ ಇದು ‘ಎನ್‌.ಐ.ಎ.’ಯ ಷಡ್ಯಂತ್ರ ಎಂದು ಬಹಿರಂಗವಾಯಿತು, ನ್ಯಾಯಾಲಯವು ಅವರ ವಿರುದ್ಧ ತೀವ್ರವಾಗಿ ಟೀಕಿಸಿತು. ಮುಂಬಯಿ ಉಚ್ಚ ನ್ಯಾಯಾಲಯದ ಗೋವಾ ಪೀಠವೂ ಅದೇ ತೀರ್ಪನ್ನು ಎತ್ತಿಹಿಡಿಯಿತು, ಅಂದರೆ ಮೊದಲ ಪ್ರಕರಣವೇ ವಿಫಲವಾಗಿತ್ತು.

೪ ಆ. ‘ಎನ್‌.ಐ.ಎ.’ಯ ಎರಡನೇ ಸಾಮಥ್ಯರ್ : ಮಾಲೇಗಾಂವ್‌ ೨೦೦೬ ರಲ್ಲಾದ ಸ್ಫೋಟದಲ್ಲಿ ಸಿಬೈ ಮತ್ತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌.) ಆರೋಪಪಟ್ಟಿ ಸಲ್ಲಿಸಿತ್ತು. ಅದರಲ್ಲಿ ಕೆಲವು ಮುಸಲ್ಮಾನ ಆರೋಪಿಗಳನ್ನುದ್ದೇಶಿಸಿ, ಮಸೀದಿಯಲ್ಲಿ ಸ್ಫೋಟಿಸಿದರು. ಈ ರೀತಿ ಅವರ ‘ಥಿಯರಿ’ (ಮೀಮಾಂಸೆ) ಇತ್ತು. ಮೊದಲು ‘ಎಟಿಎಸ್‌.’ ತನಿಖೆ ಮಾಡುತ್ತಿತ್ತು. ಕೆಲವು ಮುಸಲ್ಮಾನರನ್ನು ಬಂಧಿಸಿದ ನಂತರ ಆ ತನಿಖೆಯನ್ನು ಸಿಬೈಗೆ ನೀಡಲಾಗುತ್ತದೆ. ಸಿಬೈ ‘ಎ.ಟಿ.ಎಸ್‌.’ ನಡೆಸಿದ ತನಿಖೆ ಸರಿಯಾಗಿದ್ದು, ಮುಂದೆ ಈ ಪ್ರಕರಣವನ್ನು ?ಎನ್‌.ಐ.ಎ.’ಗೆ ನೀಡಲಾಗುತ್ತದೆ ಎಂದು ಹೇಳುತ್ತದೆ. ಹಾಗಿದ್ದರೆ, ಈ ಎಲ್ಲದರಲ್ಲಿ ‘ಎನ್‌.ಐ.ಎ.’ಯ ಸಾಧನೆ ಏನು ?

೫. ‘ಆಪರೇಷನ್‌ ಸಿಂದೂರ’ದಂತಹ ಕಾರ್ಯಾಚರಣೆಗಳು ನಿರಂತರವಾಗಿ ನಡೆಯಬೇಕು !

ಹಿಂದೂಗಳು ಉತ್ಸವಪ್ರಿಯರಾಗಿದ್ದಾರೆ. ಮೇ ೨೦೨೫ ರಲ್ಲಿ ಭಾರತೀಯ ಸೇನೆಯು ಭಯೋತ್ಪಾದಕರ ವಿರುದ್ಧ ‘ಆಪರೇಷನ್‌ ಸಿಂದೂರ್‌’ ಅನ್ನು ನಡೆಸಿತು, ಮತ್ತು ನಾವು ಸಂತೋಷಪಟ್ಟೆವು. ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರೂ ನಾವು ಸಂತೋಷಪಡುತ್ತೇವೆ. ಅವರ ಒಂದು ವಿಮಾನ ಬಿದ್ದರೂ ನಾವು ಸಂತೋಷಪಡುತ್ತೇವೆ ! ಇದು ಸಾಕಾಗುವುದೇ ? ಇಲ್ಲಿ ಎರಡು ಉದಾಹರಣೆಗಳನ್ನು ಹೇಳುತ್ತೇನೆ,

ಅ. ೧೯೭೩ ರ ಘಟನೆ. ಜರ್ಮನಿಯ ಮ್ಯೂನಿಚನಲ್ಲಿ ಒಲಿಂಪಿಕ್‌ ಸ್ಪರ್ಧೆ ನಡೆಯುತ್ತಿತ್ತು ಮತ್ತು ‘ಬ್ಲಾಕ್‌ ಸೆಪ್ಟೆಂಬರ್‌’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯು ಆ ಒಲಿಂಪಿಕ್ಸ್ ನಲ್ಲಿ ಆಡಲು ಬಂದಿದ್ದ ಇಸ್ರೇಲಿ ಆಟಗಾರರನ್ನು ಹತ್ಯೆ ಮಾಡಿತು. ಅದರ ನಂತರ ‘ಬ್ಲಾಕ್‌ ಸೆಪ್ಟೆಂಬರ್‌’ ಹೆಸರಿನ ಸಂಘಟನೆಯ ಜನರನ್ನು ಇಸ್ರೇಲ್‌ ಹೆಕ್ಕಿ ಹೆಕ್ಕಿ ಹತ್ಯೆ ಮಾಡಿತು. ಅವರ ಕಚೇರಿಗಳನ್ನು ನಾಶ ಮಾಡಿತು. ‘ಬ್ಲಾಕ್‌ ಸೆಪ್ಟೆಂಬರ್‌’ ಎಂಬ ಸಂಘಟನೆಯ ಹೆಸರನ್ನೂ ಇಸ್ರೇಲಿ ನಾಮಾವಶೇಷಗೊಳಿಸಿತು.

ಆ. ಅಮೆರಿಕಾದ ‘ವರ್ಲ್ಡ ಸೆಂಟರ್‌’ ಮೇಲೆ ಆಕ್ರಮಣವಾದ ನಂತರ, ಅಮೆರಿಕಾ ನೇರವಾಗಿ ಅಫ್ಘಾನಿಸ್ತಾನದೊಂದಿಗೆ ಯುದ್ಧ ಸಾರಿತು.

ಓಸಾಮಾ ಬಿನ್‌ ಲಾಡೆನ್‌ನನ್ನು ಪಾಕಿಸ್ತಾನದೊಳಗೆ ನುಗ್ಗಿ ಕೊಂದಿತು. ಇದಕ್ಕೆ ಹೋಲಿಸಿದರೆ ನಾವು ನೋಡಿದಾಗಲೊಮ್ಮೆ, ‘ಆಪರೇಷನ್‌ ಸಿಂದೂರ’ ಎನ್ನುವುದು ಕನಸಿನಲ್ಲೆಂಬಂತೆ ಎಂದೋ ಒಮ್ಮೆ ನಡೆದ ಸಂಗತಿಯೇನೋ, ಎಂಬ ಭಾವನೆ ಬರುತ್ತದೆ. ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ನಡೆಯಬೇಕು ಎಂದು ನಾವು ಹೇಳುತ್ತಲೇ ಇರಬೇಕು.

೬. ದೇಶದಲ್ಲಿ ಧರ್ಮಕ್ಕೆ ಗುರುತು ಇರುವುದು ಮುಖ್ಯ !

ಪಾಕಿಸ್ತಾನವು ಯಾರೋ ಒಬ್ಬ ಜಿಹಾದಿಯನ್ನು ಕಳುಹಿಸುತ್ತದೆ. ‘ನಾವು ಅದನ್ನು ಪ್ರತಿರೋಧಿಸಿದೆವು ಎಂದರೆ ನಾವು ಗೆದ್ದೆವು’ ಎಂದರ್ಥವಲ್ಲ. ಕೊನೆಗೆ ನಷ್ಟ ಆಗಿರುವುದು ದೇಶಕ್ಕೆ. ೧೫ ನೇ ಶತಮಾನದಲ್ಲಿ ಇಡೀ ಸ್ಪೇನ್‌ ಇಸ್ಲಾಂಮಯವಾಗಿ ಮಾರ್ಪಡುತ್ತಿತ್ತು. ಮುಸಲ್ಮಾನರ ಸಂಖ್ಯೆ ಹೆಚ್ಚಾಗಿತ್ತು. ಅದು ‘ಕ್ರಿಶ್ಚಿಯಾನಿಟಿ ವಿರುದ್ಧ ಇಸ್ಲಾಂ’ ಎಂಬ ಸಂಘರ್ಷವಾಗಿತ್ತು. ಕೊನೆಗೆ ೧೫ ನೇ ಶತಮಾನದ ಸ್ಪೇನ್‌ನ ಕ್ರೈಸ್ತ ಆಡಳಿತವು ನೇರವಾಗಿ ಆಜ್ಞೆ ಹೊರಡಿಸಿತು, ‘ಒಂದೋ  ಕ್ರೈಸ್ತರಾಗಿ ! ಇಲ್ಲದಿದ್ದರೆ ದೇಶ ಬಿಟ್ಟು ಹೋಗಿ.’ ನಂತರ ಆ ದೇಶ ಮತ್ತೆ ಕ್ರೈಸ್ತ ದೇಶವಾಗುತ್ತಾ ಹೋಯಿತು. ಇದನ್ನು ಹಿಂದೂಗಳಾಗಿ ನಾವು ಹೇಗೆ ನೋಡಬೇಕು ? ಭಾರತೀಯ ಪ್ರಜೆಗಳಾಗಿ ನಾವು ಕೇವಲ ಸಂವಿಧಾನವನ್ನು ಹಿಡಿದುಕೊಂಡು ಕುಳಿತುಕೊಳ್ಳುವುದೇ ?

೭. ಜಾಗತಿಕ ಮಟ್ಟದಲ್ಲಿ ಹಿಂದೂಗಳಾಗಿ ನಾವು ಒಬ್ಬಂಟಿಯಾಗುತ್ತಿದ್ದೇವೆಯೇ ?

ನಮ್ಮ ಆಡಳಿತಗಾರರು ‘ನೋಡಿ, ನಾವು ಇದನ್ನು ಮಾಡಿದ್ದೇವೆ’, ‘ನೋಡಿ, ನಾವು ಅದನ್ನು ಮಾಡಿದ್ದೇವೆ’ ಎಂದು ಬೆನ್ನು ತಟ್ಟಿಕೊಳ್ಳುತ್ತಾ ಇರುತ್ತಾರೆ ಮತ್ತು ಜನರೂ ಮೆಚ್ಚಿಕೊಳ್ಳುತ್ತಾ ಜೈಕಾರ ಹಾಕುತ್ತಾರೆ. ಮತ್ತೆ ಅದೇ ರಾಗವನ್ನು ಹಾಡುವುದು, ‘ಕಾಂಗ್ರೆಸ್‌ ಕಾಲದಲ್ಲಿ ಅದು ಆಗಿರಲಿಲ್ಲ. ಈಗ ನಾವು ಅದನ್ನು ಮಾಡಿದ್ದೇವೆ.’ ‘ಆಪರೇಷನ್‌ ಸಿಂದೂರ’ ಅಥವಾ ಹಿಂದಿನ ‘ಸರ್ಜಿಕಲ್‌ ಸ್ಟ್ರೈಕ್’ಗಳು ’(ಸೇನೆಯ ತಾತ್ಕಾಲಿಕ ಸೇನಾ ಕಾರ್ಯಾಚರಣೆ) ಇವುಗಳಿಂದ ಇದು ಕೊನೆಗೊಳ್ಳುತ್ತದೆಯೇ ? ಯಾವ ಬಾಂಗ್ಲಾದೇಶಕ್ಕೆ ಭಾರತದಿಂದಾಗಿ ಸ್ವಾತಂತ್ರ್ಯ ಸಿಕ್ಕಿತೋ, ಅದೇ ಈಗ ನಮ್ಮ ದೇಶದ ವಿರುದ್ಧ ನಿಂತಿದೆ. ಈ ಎಲ್ಲ ಪರಿಸ್ಥಿತಿಯಲ್ಲಿ, ನಾವು ಎಲ್ಲೋ ಜಾಗತಿಕ ಮಟ್ಟದಲ್ಲಿ ಒಬ್ಬಂಟಿಯಾಗುತ್ತಿದ್ದೇವೆಯೇ ? ಹಿಂದೂಗಳಾಗಿ ಭಾರತೀಯರು ಇದರ ಅಧ್ಯಯನ ಮಾಡಬೇಕು.

೮. ವರ್ಷ ೭೨೦ ರಿಂದ ಭಯೋತ್ಪಾದನೆ ನಡೆಯುತ್ತಿದೆ !

‘ಇದಕ್ಕಿಂತ ಮೊದಲು ಭಯೋತ್ಪಾದನೆ ಇರಲೇ ಇಲ್ಲ’ ಎಂಬ ಒಂದು ಅಂಧಶ್ರದ್ಧೆಯಲ್ಲಿ ನಾವಿದ್ದೇವೆಯೇ ಎಂದು ನೋಡಬೇಕು. ೭೨೦ ರಲ್ಲಿ ಮಹಮ್ಮದ್‌ ಬಿನ್‌ ಕಾಸಿಮ್‌ ಭಾರತದ ಮೇಲೆ ರಾಜಾ ದಾಹೀರ್‌ನ ರಾಜ್ಯದ ಮೇಲೆ ಮಾಡಿದ ಮೊದಲ ಇಸ್ಲಾಮಿ ದಾಳಿಯೇ ದೇಶದ ವಿರುದ್ಧದ ಮೊದಲ ಭಯೋತ್ಪಾದಕ ದಾಳಿಯಾಗಿತ್ತು, ಅಂದರೆ ನಾವು ೭ ನೇ ಶತಮಾನದಿಂದಲೇ ಈ ಭಯೋತ್ಪಾದನೆಯ ಸಂತ್ರಸ್ತರಾಗಿದ್ದೇವೆ. ಇದನ್ನು ಅರ್ಥ ಮಾಡಿಕೊಂಡರೆ, ಏನು ಬದಲಾಯಿಸಬೇಕು ಎಂಬುದು ತಿಳಿಯುತ್ತದೆ. ಔರಂಗಜೇಬನು ಛತ್ರಪತಿ ಸಂಭಾಜಿ ಮಹಾರಾಜರ ಹತ್ಯೆ ಮಾಡಿದನು, ಛತ್ರಪತಿ ಶಿವಾಜಿ ಮಹಾರಾಜರಿಗೆ ವಿಪರೀತ ತೊಂದರೆ ಕೊಟ್ಟು, ಅವರನ್ನು ಆಗ್ರಾದಲ್ಲಿ ಹತ್ಯೆ ಮಾಡಲು ಯತ್ನಿಸಿದನು, ಆ ಔರಂಗಜೇಬನ ಹೆಸರಿನ ರಸ್ತೆ ದೆಹಲಿಯಲ್ಲಿ ಇತ್ತೀಚಿನ ವರೆಗೂ ಇತ್ತು. ಈಗ ಅದನ್ನು ‘ಡಾ. ಎಪಿಜೆ ಅಬ್ದುಲ್‌ ಕಲಾಂ ರೋಡ್‌’ ಎಂದು ಹೆಸರಿಸಲಾಗಿದೆ. ಔರಂಗಜೇಬನ ಸಮಾಧಿಯನ್ನು ಕೇಂದ್ರ ಪುರಾತತ್ವ ಇಲಾಖೆ ನಿರ್ವಹಿಸುತ್ತದೆ. ಅದರ ಮೇಲೆ ಕಳೆದ ೧೦ ವರ್ಷಗಳಲ್ಲಿ ೧೨ ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ.

೮. ಆಡಳಿತಗಾರರಿಗೆ ಚುಚ್ಚುವ ಪ್ರತಿಕ್ರಿಯೆ ನೀಡಬೇಕು !

ನಮ್ಮ ತೊಂದರೆ ಏನೆಂದರೆ, ಈಗ೨೬/೧೧ ರ ದಾಳಿಯಾದ ನಂತರ, ನಮ್ಮಲ್ಲಿ ಆ ‘ಕ್ಯಾಂಡಲ್‌ ಮಾರ್ಚಗಳು’ (ಮೆಣಬತ್ತಿ ಮೆರವಣಿಗೆಗಳು) ನಡೆದವು. ಅದರ ಬಗ್ಗೆ ಇತ್ತೀಚಿನ ವರೆಗೂ ಮುಂಬಯಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ ನಲ್ಲಿ ಬಹಳ ಸುಂದರವಾದ ಬೋರ್ಡ ಹಾಕುತ್ತಿದ್ದರು. ಅದರಲ್ಲಿ ಹುತಾತ್ಮರನ್ನು ನೆನಪಿಸಲಾಗುತ್ತದೆ. ಈ ಸಾಮಾಜಿಕ ಪ್ರತಿಕ್ರಿಯೆ ಅಪೇಕ್ಷಿತವಲ್ಲ. ಒಂದು ವಿಭಿನ್ನ ಉದಾಹರಣೆ ಹೇಳುತ್ತೇನೆ. ಅವರು (ಮತಾಂಧರು) ಹೀಗೆ ಹೇಳುತ್ತಾರೆ, ‘ಬಾಬರಿ ಮಸೀದಿ ಪತನದ ನಂತರ ಮುಂಬಯಿಯಲ್ಲಿ ಗಲಭೆ ನಡೆದಾಗ, ಆ ಸಮಯದಲ್ಲಿ ಮುಂಬಯಿಯಿಂದ ದಾವೂದ್‌ ಇಬ್ರಾಹಿಂಗೆ ಬಳೆಗಳನ್ನು ಕಳುಹಿಸಲಾಯಿತು. ‘ಇಲ್ಲಿ ಇದೆಲ್ಲ ನಡೆಯುತ್ತಿರುವಾಗ ನೀನು ಏನೂ ಮಾಡುತ್ತಿಲ್ಲ’ ಎಂದು ಅವನಿಗೆ ಹೇಳಲಾಯಿತು. ಆ ಬಳೆಗಳ ‘ರಿಯಾಕ್ಷನ್‌’ (ಪ್ರತ್ಯುತ್ತರ) ಆಗಿ ‘ಮುಂಬಯಿ ರೈಲಿನಲ್ಲಿ ಸ್ಫೋಟಗಳು ನಡೆದವು’ ಎಂದು ಹೇಳಲಾಗುತ್ತದೆ. ಸಂಸತ್ತಿನ ಮೇಲೆ ಆಕ್ರಮಣವಾದಾಗ, ಕೊಲ್ಹಾಪುರದಿಂದ ಅಂದಿನ ರಾಷ್ಟ್ರಪತಿಯವರಿಗೆ ಬಳೆಗಳನ್ನು ಕಳುಹಿಸಿ, ‘ಈ ಬಳೆಗಳನ್ನು ಧರಿಸಿ ಮತ್ತು ಸುಮ್ಮನೆ ಕುಳಿತುಕೊಳ್ಳಿ’ ಎಂದು ಹೇಳಲಾಯಿತು. ಇಂತಹ ಸ್ವರೂಪದ ಪ್ರತಿಕ್ರಿಯೆ ಆಡಳಿತಗಾರರಿಗೆ ಚುಚ್ಚುತ್ತವೆ. ಅದರಿಂದಲೇ ಬದಲಾವಣೆ ಉಂಟಾಗುತ್ತದೆ.

೯. ಭಯೋತ್ಪಾದಕರಿಗೆ ಶಿಕ್ಷೆ ಇಲ್ಲವೇ ?

ನಮ್ಮ ವ್ಯವಸ್ಥೆಯಲ್ಲಿ ಒಂದು ತೊಂದರೆ ಏನೆಂದರೆ, ಮೊಕದ್ದಮೆಗಳು ಬೇಗ ನಡೆಯುವುದಿಲ್ಲ. ೩-೪ ವರ್ಷ ಆರೋಪಿಗಳು ಒಳಗೆ ಇರುತ್ತಾರೆ. ಅವನು ೨-೩ ವರ್ಷ ಜೈಲಿನಲ್ಲಿ ಇದ್ದಾನೆ ಎಂದರೆ, ಅವನ ಮೂಲಭೂತ ಹಕ್ಕುಗಳ ಹನನವಾಗಿದೆ; ಆದ್ದರಿಂದ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯವು ಅವನಿಗೆ ಜಾಮೀನು ನೀಡುತ್ತದೆ. ಮುಂಬಯಿಯಲ್ಲಿ ಜುಲೈ ೨೦೦೬ ರಲ್ಲಿ ರೈಲಿನಲ್ಲಿ ನಡೆದ ಸ್ಫೋಟಗಳ ಪ್ರಕರಣದ ಆರೋಪಿಗಳು ನಿರ್ದೋಷಿಗಳಾಗಿ ಬಿಡುಗಡೆಯಾದರು. 2012 ರಲ್ಲಿ ಗುಜರಾತಿನ ಅಕ್ಷರಧಾಮ ಮಂದಿರದ ಮೇಲೆ ಭಾರಿ ಆಕ್ರಮಣವಾಯಿತು. ಅದರ ಬಗ್ಗೆ ಒಂದು ವೆಬ್‌ ಸರಣಿಯೂ ಪ್ರಸಾರವಾಯಿತು. ನಂತರ ಏನಾಯಿತು ?, ಅಕ್ಷರಧಾಮ ಮಂದಿರದ ಮೇಲಿನ ಆಕ್ರಮಣದಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ. ಇದು ವಾಸ್ತವ. ಹಾಗಾಗಿ ಕೇವಲ ಕಾನೂನು ಮಾತ್ರ ನಮಗೆ ಸಾಕಾಗುತ್ತದೆಯೇ ? ಇದರ ಉತ್ತರ ?ಇಲ್ಲ? ಎಂದಾಗಿದೆ.

೧೦. ಕಾನೂನಿನ ಪ್ರಭಾವಶಾಲಿ ಕಾರ್ಯಪ್ರವೃತ್ತಿ ಇರಬೇಕು !

ಭಯೋತ್ಪಾದಕರ ಆಸ್ತಿಗಳನ್ನು ಮಾರುವುದರಿಂದ ಭಯ ಹುಟ್ಟುವುದಿಲ್ಲ. ಸಮಾಜದ ಮೇಲೆ ನಿಯಂತ್ರಣ ಸ್ಥಾಪಿಸಲು ಕಾನೂನು ಇರುತ್ತದೆ. ಅದನ್ನು ಹಾಗೆ ಬಳಸದಿದ್ದರೆ ಏನಾಗುತ್ತದೆ ? ಈಗ ನಾವು ಉತ್ತರಪ್ರದೇಶದಲ್ಲಿ ಕಾನೂನಿನ ಕಾರ್ಯಪ್ರವೃತ್ತಿ ಹೇಗೆ ಆಗುತ್ತದೆ ಎಂದು ತಿಳಿದುಕೊಳ್ಳೋಣ. ಉತ್ತರಪ್ರದೇಶದಲ್ಲಿ ಭಾಜಪ ನಾಯಕ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಯಾವುದೇ ಗಲಭೆ ನಡೆದರೂ, ಆ ಗಲಭೆಕೋರರ ಮನೆಯನ್ನು ‘ಜೆಸಿಬಿ’ಯಂತ್ರ ಬಳಸಿ ಧ್ವಂಸಗೊಳಿಸುವ ಅಭಿಯಾನವನ್ನು ಪ್ರಾರಂಭಿಸಿದರು. ಮುಂದೆ, ಈ ಕಾರ್ಯಾಚರಣೆಯು ಅಸ್ಸಾಂ ಮತ್ತು ಕಾಶ್ಮೀರ ಪ್ರಾಂತಗಳಲ್ಲಿ ವಿಸ್ತರಿಸಿತು. ಇದೀಗ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಅದನ್ನು ಜಾರಿಗೆ ತರಲು ಕನಿಷ್ಠ ಪಕ್ಷ ಪ್ರಯತ್ನವನ್ನಾದರೂ ಮಾಡಲಾಗಿದೆ. ಅಂದರೆ ಈ ರೀತಿಯ  ಕಾನೂನಿನ ಕಠಿಣವಾದ ಅನುಷ್ಠಾನದ ಮೂಲಕ ಭಯವನ್ನು ಮೂಡಿಸುವುದು ಅಗತ್ಯವಾಗಿದೆ.

(ಆಧಾರ : ಸಾಪ್ತಾಹಿಕ – ಹಿಂದುಸ್ಥಾನ ಪೋಸ್ಟ್)