
ಕಾನ್ಪುರ (ಉತ್ತರ ಪ್ರದೇಶ) – ಮ್ಯಾನ್ಮಾರ್‌ನ ರೋಹಿಂಗ್ಯಾ ನುಸುಳುಕೋರ ಮುಸ್ಲಿಮರನ್ನು ಭಾರತದಲ್ಲಿ ಕಾನೂನುಬಾಹಿರವಾಗಿ ನೆಲೆಸುವಂತೆ ಮಾಡುತ್ತಿದ್ದ ಗ್ಯಾಂಗ್‌ನ ಮೊಹಮ್ಮದ್ ಇಬ್ರಾಹಿಂ ಎಂಬಾತನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಭಾರತದ 12 ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ರೋಹಿಂಗ್ಯಾಗಳನ್ನು ಈತ ನೆಲೆಸುವಂತೆ ಮಾಡಿದ್ದಾನೆ ಎಂಬ ಶಂಕೆಯಿದೆ. ರೋಹಿಂಗ್ಯಾ ನುಸುಳುಕೋರರ ಜಾಲವು ಮ್ಯಾನ್ಮಾರ್, ನಂತರ ಬಾಂಗ್ಲಾದೇಶ ಮತ್ತು ಅಲ್ಲಿಂದ ಭಾರತದ ಅಸ್ಸಾಂನಿಂದ ಕಾಶ್ಮೀರದವರೆಗೆ ಹರಡಿದೆ. ಗುರುತು ಸಿಗದಂತೆ ಇವರು ಬೇರೆ ಬೇರೆ ರಾಜ್ಯಗಳಲ್ಲಿ ಅಡಗಿ ಕುಳಿತಿರುವುದು ಕಂಡುಬಂದಿದೆ.
1. ಕಾನ್ಪುರ ಸೆಂಟ್ರಲ್ ನಿಲ್ದಾಣದಲ್ಲಿ ಬಂಧಿತರಾದ ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ಹಸಿಮ್ ಅಲಿಯಾಸ್ ನಾಸಿರ್ ಮತ್ತು ಶೋಕತಾರಾ ನೀಡಿದ ಮಾಹಿತಿಯ ಪ್ರಕಾರ, ಇವರು ಮೂಲತಃ ಮ್ಯಾನ್ಮಾರ್‌ನ ನಾಸಾಫುರು ಜಿಲ್ಲೆಯ ಮೊಗಂಡೋ ರಾಖಿನ ಪ್ರದೇಶದವರು. ಇವರು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಲ್ಲಿ ವಾಸವಾಗಿದ್ದರು.
2. ಮೊಹಮ್ಮದ್ ಇಬ್ರಾಹಿಂ 2017ರಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದನು. ಸ್ವಲ್ಪ ಸಮಯ ದೆಹಲಿಯಲ್ಲಿ ವಾಸವಿದ್ದ ಈತ 2024ರಲ್ಲಿ ಜಮ್ಮುವಿಗೆ ತೆರಳಿದ್ದನು. ಆನಂತರ ಬಾಂಗ್ಲಾದೇಶದಿಂದ ರೋಹಿಂಗ್ಯಾಗಳನ್ನು ಭಾರತಕ್ಕೆ ಕರೆತಂದು ನೆಲೆಸುವಂತೆ ಮಾಡುವ ಕೆಲಸದಲ್ಲಿ ಸಕ್ರಿಯನಾದನು. ತನಿಖಾ ಸಂಸ್ಥೆಗಳು ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿವೆ.
ಸಂಪಾದಕೀಯ ನಿಲುವುಇಂತಹವರಿಗೂ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರುವುದು ಈಗ ಅತ್ಯಗತ್ಯವಾಗಿದೆ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!