ಕೇಂದ್ರ ಸಚಿವ ನಿತಿನ ಗಡಕರಿ ಅವರ ಆರೋಪ

ನವ ದೆಹಲಿ – ದೇಶದಲ್ಲಿ ಇಂದು ನಾವು ಕಾಣುತ್ತಿರುವ ಹಿಂದೂ ಮತ್ತು ಮುಸ್ಲಿಮರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾಂಗ್ರೆಸ್ಸಿನ ಜಾತ್ಯತೀತತೆಯ ಸಿದ್ಧಾಂತ ಮತ್ತು ವೋಟ್‌ಬ್ಯಾಂಕ್ ರಾಜಕೀಯವೇ ಕಾರಣವಾಗಿದೆ. ಕಾಂಗ್ರೆಸ್ ಜಾತ್ಯತೀತತೆಗೆ ತಪ್ಪು ಅರ್ಥವನ್ನು ನೀಡಿದೆ. ಜಾತ್ಯತೀತತೆ ಎಂದರೆ ಯಾವುದೋ ಒಂದು ನಿರ್ದಿಷ್ಟ ವರ್ಗದ ಓಲೈಕೆ ಮಾಡುವುದಲ್ಲ. ಇದರ ನಿಜವಾದ ಅರ್ಥ ‘ಸರ್ವಧರ್ಮ ಸಮಭಾವ’ ಎಂದಾಗಿದೆ, ಅಂದರೆ ಎಲ್ಲಾ ಧರ್ಮಗಳಿಗೆ ಸಮಾನ ಗೌರವ ನೀಡುವುದು, ಎಲ್ಲರಿಗೂ ನ್ಯಾಯ ಒದಗಿಸುವುದು ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವುದು ಎಂದು ಕೇಂದ್ರ ಸಚಿವ ನಿತಿನ ಗಡಕರಿ ಅವರು ಕಾಂಗ್ರೆಸ್ಸಿನ ಡೋಂಗಿ ಜಾತ್ಯತೀತತೆಯನ್ನು ಟೀಕಿಸಿದರು. ಅವರು ಇಲ್ಲಿ ರಾಜಸ್ಥಾನ ವಿಧಾನಸಭೆಯ ಸ್ಪೀಕರ್ ಪ್ರೊ. ವಾಸುದೇವ ದೇವನಾನಿ ಅವರ ‘ಸನಾತನ ಸಂಸ್ಕೃತಿಯ ಅಟಲ ದೃಷ್ಟಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕೂಡ ಉಪಸ್ಥಿತರಿದ್ದರು.

ಇತಿಹಾಸದಲ್ಲಿ ಯಾವುದೇ ಹಿಂದೂ ರಾಜನು ಧಾರ್ಮಿಕ ಸ್ಥಳಗಳನ್ನು ನಾಶಪಡಿಸಿದ ಉದಾಹರಣೆಯಿಲ್ಲ!
ನಿತಿನ ಗಡಕರಿ ಅವರು ಮಾತನಾಡುತ್ತಾ, ಭಾರತವು ಮೊದಲಿನಿಂದಲೂ ಸರ್ವಧರ್ಮ ಸಮಭಾವವನ್ನು ನಂಬಿಕೊಂಡು ಬಂದಿದೆ, ಇಂದಿಗೂ ನಂಬಿದೆ ಮತ್ತು ಮುಂದೆಯೂ ಹಾಗೆಯೇ ಇರುತ್ತದೆ. ಇದು ಭಾಜಪ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದಾಗಿ ಅಲ್ಲ, ಬದಲಾಗಿ ಜಗತ್ತಿನ ಕಲ್ಯಾಣವನ್ನು ಬೋಧಿಸುವ ಭಾರತೀಯ, ಹಿಂದೂ ಮತ್ತು ಸನಾತನ ಸಂಸ್ಕೃತಿಯಿಂದಾಗಿ ಸಾಧ್ಯವಾಗಿದೆ. ಭಾರತೀಯ ಸಂಸ್ಕೃತಿಯು ಸಹಿಷ್ಣುತೆ, ಕರುಣೆ ಮತ್ತು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಗುಣವನ್ನು ಹೊಂದಿದೆ ಮತ್ತು ಇತಿಹಾಸದಲ್ಲಿ ಯಾವುದೇ ಹಿಂದೂ ರಾಜನು ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸಿದ ಉದಾಹರಣೆಗಳು ಸಿಗುವುದಿಲ್ಲ ಎಂದು ಹೇಳಿದರು.
ಆಧುನೀಕರಣವು ಕುರುಡು ಅನುಕರಣೆಯನ್ನು ಆಧರಿಸಿರಬಾರದು!
ದೆಹಲಿಯಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ ಗಡಕರಿ ಅವರು, ‘ನೇಷನ್ ಫಸ್ಟ್’ (ರಾಷ್ಟ್ರ ಮೊದಲು) ಎಂಬ ಪರಿಕಲ್ಪನೆಯು ಕೇವಲ ಘೋಷಣೆಗಳಿಗೆ ಸೀಮಿತವಾಗಿರಬಾರದು. ಅದಕ್ಕಾಗಿ ದೇಶದ ಇತಿಹಾಸವನ್ನು ಪ್ರಾಮಾಣಿಕವಾಗಿ ಅರ್ಥಮಾಡಿಕೊಳ್ಳುವುದು, ವ್ಯವಸ್ಥೆಯಲ್ಲಿನ ದೋಷಗಳನ್ನು ಗುರುತಿಸುವುದು ಮತ್ತು ಭವಿಷ್ಯದಲ್ಲಿ ಸ್ವಂತ ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳುವುದು ಅಗತ್ಯವಾಗಿದೆ. ಆಧುನೀಕರಣವು ಕುರುಡು ಅನುಕರಣೆಯ ಮೇಲೆ ಆಧಾರಿತವಾಗಿರಬಾರದು, ಬದಲಾಗಿ ಅದು ಸಾಂಸ್ಕೃತಿಕ ಆತ್ಮವಿಶ್ವಾಸದ ಮೇಲೆ ಆಧಾರಿತವಾಗಿರಬೇಕು ಎಂದರು.
ಹಿರಿಯ ಪತ್ರಕರ್ತ ಉದಯ ಮಾಹುರಕರ್ ಅವರ ‘ಮೈ ಐಡಿಯಾ ಆಫ್ ನೇಷನ್ ಫಸ್ಟ್: ರಿಡಿಫೈನಿಂಗ್ ಅನ್ ಅಲಾಯ್ಡ್ ನ್ಯಾಶನಲಿಸಂ’ (ನನ್ನ ದೃಷ್ಟಿಯಿಂದ `ರಾಷ್ಟ್ರ ಮೊದಲು’ ಈ ಸಂಕಲ್ಪನೆ; ನಿಷ್ಕಳಂಕ ರಾಷ್ಟ್ರವಾದದ ಹೊಸ ಪ್ರಸ್ತುತೀಕರಣ) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗಡಕರಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಭಾಜಪ ವಕ್ತಾರ ಮತ್ತು ಸಂಸದ ಸುಧಾಂಶು ತ್ರಿವೇದಿ ಮತ್ತು ಲೆಫ್ಟಿನೆಂಟ್ ಜನರಲ್ ವಿ.ಜಿ. ಖಂಡಾರೆ (ನಿವೃತ್ತ) ಉಪಸ್ಥಿತರಿದ್ದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !