|

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಭಾರತದ ಹೈಕಮಿಷನರ್ ಪ್ರಣಯ್ ವರ್ಮಾ ಅವರಿಗೆ ಮೊಹಮ್ಮದ್ ಯುನೂಸ್ ಸರಕಾರವು ಸಮನ್ಸ್ ಜಾರಿಗೊಳಿಸಿ ವಿದೇಶಾಂಗ ಸಚಿವಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ. ಡಿಸೆಂಬರ್ 23ರಂದು ಬೆಳಗ್ಗೆ ಹಾಜರಾಗುವಂತೆ ವರ್ಮಾ ಅವರಿಗೆ ಸೂಚಿಸಲಾಗಿತ್ತು. ನವದೆಹಲಿ, ಕೋಲಕಾತಾ ಮತ್ತು ಇತರ ಭಾರತೀಯ ನಗರಗಳಲ್ಲಿರುವ ಬಾಂಗ್ಲಾದೇಶದ ಹೈಕಮಿಷನ್ ಆವರಣದಲ್ಲಿ ನಡೆದಿದೆ ಎನ್ನಲಾದ ‘ಹಿಂಸಾತ್ಮಕ ಪ್ರತಿಭಟನೆ’ಗಳ ಬಗ್ಗೆ ಬಾಂಗ್ಲಾ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿರುವ ಬಾಂಗ್ಲಾದೇಶದ ಹೈಕಮಿಷನ್ ಮತ್ತು ಅಲ್ಲಿನ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ಈ ಹಿಂದೆ ಭಾರತವು ಬಾಂಗ್ಲಾದೇಶದ ರಾಯಭಾರಿಗಳಿಗೆ ಎಚ್ಚರಿಕೆ ನೀಡಿತ್ತು, ಅದರ ನಂತರ ಬಾಂಗ್ಲಾ ಸರ್ಕಾರ ಈ ರೀತಿ ಪ್ರತಿಕ್ರಿಯಿಸಿದೆ.
ಬಾಂಗ್ಲಾದೇಶದ ದೈನಿಕ ‘ಪ್ರಥಮ್ ಅಲೋ’ ದಿನಪತ್ರಿಕೆಯ ವರದಿಯ ಪ್ರಕಾರ, ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಅಸದ್ ಆಲಂ ಸಿಯಾಮ್ ಅವರು ಭಾರತೀಯ ಹೈಕಮಿಷನರ್‌ರನ್ನು ಭೇಟಿಯಾದರು. ಭಾರತದ ವಿವಿಧೆಡೆಯಿರುವ ಬಾಂಗ್ಲಾದೇಶದ ರಾಯಭಾರಿ ಕಚೇರಿಗಳ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸುವಂತೆ ಪ್ರಣಯ್ ವರ್ಮಾ ಅವರಿಗೆ ವಿನಂತಿಸಲಾಗಿದೆ. ಕಳೆದ 10 ದಿನಗಳಲ್ಲಿ ಭಾರತೀಯ ಹೈಕಮಿಷನರ್‌ರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಯಿಸಿಕೊಂಡಿರುವುದು ಇದು ಎರಡನೇ ಬಾರಿಯಾಗಿದೆ.
ಪದೇ ಪದೇ ಸಮನ್ಸ್ ನೀಡಲಾಗುತ್ತಿರುವ ಹೈಕಮಿಷನರ್
ಆಗಸ್ಟ್ 2024 ರಲ್ಲಿ ಸ್ಥಾಪನೆಯಾದ ಮೊಹಮ್ಮದ್ ಯುನೂಸ್ ಅವರ ಮಧ್ಯಂತರ ಸರಕಾರದ ಅವಧಿಯಲ್ಲಿ, ವಿವಿಧ ಘಟನೆಗಳ ಹಿನ್ನೆಲೆಯಲ್ಲಿ ಭಾರತದ ಹೈಕಮಿಷನರ್‌ರನ್ನು ಕನಿಷ್ಠ 6 ಬಾರಿ ಕರೆಸಿಕೊಳ್ಳಲಾಗಿದೆ. ಇದೇ ತಿಂಗಳ ಡಿಸೆಂಬರ್ 14 ರಂದು ಪ್ರಣಯ್ ವರ್ಮಾ ಅವರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಯಿಸಲಾಗಿತ್ತು. ವರದಿಗಳ ಪ್ರಕಾರ, ಉಸ್ಮಾನ್ ಹಾದಿ ಮೇಲಿನ ದಾಳಿಯಲ್ಲಿ ಭಾಗಿಯಾದವರು ಭಾರತದ ಗಡಿಯೊಳಗೆ ಪ್ರವೇಶಿಸಿದ್ದರೆ, ಅವರನ್ನು ಮರಳಿ ಕಳುಹಿಸುವಂತೆ ಭಾರತವನ್ನು ಆಗ್ರಹಿಸಲಾಗಿದೆ.
ಭಾರತದ ನಿಲುವು
ವಿಯೆನ್ನಾ ಒಪ್ಪಂದದ ಪ್ರಕಾರ ಭಾರತದ ಭೂಪ್ರದೇಶದಲ್ಲಿರುವ ವಿದೇಶಿ ರಾಯಭಾರಿ ಕಚೇರಿಗಳ ಸುರಕ್ಷತೆಯ ಜವಾಬ್ದಾರಿಯನ್ನು ಭಾರತವು ಸಂಪೂರ್ಣವಾಗಿ ನಿರ್ವಹಿಸುತ್ತಿದೆ ಎಂದು ಭಾರತ ಸರಕಾರ ತಿಳಿಸಿದೆ. ಅಲ್ಲದೆ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಅಸ್ಥಿರತೆಯ ಮೇಲೆ ಭಾರತವು ನಿರಂತರವಾಗಿ ಕಣ್ಣಿಟ್ಟಿದೆ.
ಬಾಂಗ್ಲಾದೇಶದ ಪ್ರತಿಯೊಬ್ಬರಿಗೂ ಸುರಕ್ಷತೆ ನೀಡಿ! – ವಿಶ್ವಸಂಸ್ಥೆಯ ಎಚ್ಚರಿಕೆ
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಪಡಿಸುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿಕೆ ನೀಡಿದ್ದಾರೆ. “ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ನಾವು ಕಳವಳ ಹೊಂದಿದ್ದೇವೆ. ಯಾವುದೇ ಧರ್ಮಕ್ಕೆ ಸೇರಿದ್ದರೂ ಪ್ರತಿಯೊಬ್ಬ ನಾಗರಿಕನ ಸುರಕ್ಷತೆಯನ್ನು ಖಚಿತಪಡಿಸುವುದು ಬಾಂಗ್ಲಾ ಸರಕಾರದ ಜವಾಬ್ದಾರಿಯಾಗಿದೆ” ಎಂದು ಅವರು ತಿಳಿಸಿದ್ದಾರೆ.(ವಿಶ್ವಸಂಸ್ಥೆ ಗೆ ಯಾವ ದೇಶವೂ ಮಹತ್ವ ನೀಡದಿರುವುದರಿಂದ ಬಾಂಗ್ಲಾದೇಶದ ಮೇಲೆ ಕೂಡ ಈ ಎಚ್ಚರಿಕೆಯಿಂದ ಯಾವ ಪರಿಣಾಮ ಬೀರಲು ಸಾಧ್ಯವಿಲ್ಲ – ಸಂಪಾದಕರು)
ಮಧ್ಯಂತರ ಸರಕಾರದಿಂದ ಅಪೇಕ್ಷೆ
ಮಹಮ್ಮದ್ ಯುನೂಸ್ ಸರಕಾರವು ಬಾಂಗ್ಲಾದೇಶದ ಪ್ರತಿಯೊಬ್ಬ ನಾಗರೀಕರ ರಕ್ಷಣೆಗಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡಲಿ ಎಂದು ವಿಶ್ವಸಂಸ್ಥೆಯ ಮಹಾ ಸಚಿವರ ವಕ್ತಾರರು ಅಪೇಕ್ಷಿಸಿದ್ದಾರೆ. ವಿಶ್ವಸಂಸ್ಥೆ ಮಾನವಾಧಿಕಾರ ಉಚ್ಚಾಯುಕ್ತ ಫೋಲ್ಕರ ತುರ್ಕ ಅವರು ಕೂಡ ಬಾಂಗ್ಲಾದೇಶದ ಜನರಿಗೆ ಶಾಂತಿ ಕಾಪಾಡಲು ಮತ್ತು ಹಿಂಸೆಯನ್ನು ನಿಲ್ಲಿಸಲು ಕರೆ ನೀಡಿದ್ದಾರೆ. ಫೆಬ್ರುವರಿಯಲ್ಲಿ ನಡೆಯುವ ಚುನಾವಣೆಯ ಮೊದಲು ಸುರಕ್ಷಿತ ಮತ್ತು ಶಾಂತಿಯ ವಾತಾವರಣ ನಿರ್ಮಾಣವಾಗುವುದು ಆವಶ್ಯಕವಾಗಿದೆ ಎಂದು ಅವರು ಹೇಳಿದರು.
ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಿ ಕಾನೂನು ಪುನರ್ಸ್ಥಾಪನೆಗೊಳಿಸಿ – ಅಮೆರಿಕದ ಸಂಸದರ ಆಗ್ರಹ
ಹಿಂದೂ ಯುವಕನನ್ನು ಜೀವಂತವಾಗಿ ಸುಟ್ಟ ಘಟನೆಯನ್ನು ಅಮೆರಿಕದ ಸಂಸದರು ತೀವ್ರವಾಗಿ ಖಂಡಿಸುತ್ತಾ ಇಲಿನಾಯ್ಸ್ ರಾಜ್ಯದ ಡೆಮಾಕ್ರಟಿಕ್ ಪಕ್ಷದ ಸಂಸದ ರಾಜಾ ಕೃಷ್ಣಮೂರ್ತಿ ಅವರು ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಹತ್ಯೆಯನ್ನು “ಗುರಿ ಮಾಡುವ ಹಿಂಸಾಚಾರ” ಎಂದು ಕರೆದಿದ್ದಾರೆ. ಈ ಘಟನೆಯಿಂದ ದೇಶದಲ್ಲಿನ ಹೆಚ್ಚುತ್ತಿರುವ ಅಸ್ಥಿರತೆ ಮತ್ತು ಅಶಾಂತಿಯು ಗಮನಕ್ಕೆ ಬರುತ್ತದೆ ಎಂದು ಹೇಳಿದರು. ತಪ್ಪಿತಸ್ಥರ ವಿರುದ್ಧ ಪಾರದರ್ಶಕ ತನಿಖೆ ಮತ್ತು ಕಠಿಣ ಕ್ರಮ ಅಗತ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. ದೀಪು ಚಂದ್ರದಾಸ್ ಅವರನ್ನು ಜನರ ಗುಂಪು ಹತ್ಯೆ ಮಾಡಿರುವುದರಿಂದ ಅತ್ಯಂತ ದುಃಖಿಯಾಗಿದ್ದೇನೆ ಎಂದು ಅವರು ಹೇಳಿದರು. ಕೇವಲ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಷ್ಟೇ ಅಲ್ಲದೆ, ಇತರ ಅಲ್ಪಸಂಖ್ಯಾತರನ್ನು ಮುಂದೆ ನಡೆಯಬಹುದಾದ ಹಿಂಸಾಚಾರದಿಂದ ಕೂಡ ರಕ್ಷಿಸಲು ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಅವರು ಆಗ್ರಹಿಸಿದರು.
ನ್ಯೂಯಾರ್ಕ್ ರಾಜ್ಯ ವಿಧಾನಸಭೆಯ ಸದಸ್ಯೆ ಜೆನ್ನಿಫರ್ ರಾಜ್‌ಕುಮಾರ್ ಕೂಡ ಈ ಘಟನೆ ಭಯಾನಕ ಎಂದು ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳದ ಇದೊಂದು ಆಘಾತಕಾರಿ ನಮೂನೆ ಬಹಿರಂಗವಾಗುತ್ತಿದೆ ಎಂದು ಅವರು ಹೇಳಿದರು. ಜೆನಿಫರ್ ರಾಜಕುಮಾರ್ ಅವರ ಅಭಿಪ್ರಾಯದ ಪ್ರಕಾರ ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಐಕ್ಯತಾ ಪರಿಷತ್ತಿನ ಅಂಕಿಅಂಶಗಳ ಪ್ರಕಾರ, ಆಗಸ್ಟ್ 2024 ರಿಂದ ಜುಲೈ 2025 ರವರೆಗೆ ಅಲ್ಪಸಂಖ್ಯಾತರ ಮೇಲೆ 2400 ಕ್ಕೂ ಹೆಚ್ಚು ದಾಳಿಗಳು ನಡೆದಿವೆ ಮತ್ತು 150 ಕ್ಕೂ ಹೆಚ್ಚು ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ.
ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವಾಧಿಕಾರದ ರಕ್ಷಣೆ ಇದು ಕೇವಲ ಬಾಂಗ್ಲಾದೇಶದ್ದಷ್ಟೇ ಅಲ್ಲದೆ, ಇದು ಸಂಪೂರ್ಣ ಜಗತ್ತಿನ ಸಾಮೂಹಿಕ ಜವಾಬ್ದಾರಿ ಆಗಿರುವುದಾಗಿ ಅಮೆರಿಕಾದ ಸಂಸದೆ ಹೇಳಿದರು.
ಸಂಪಾದಕೀಯ ನಿಲುವು
|
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !