‘ಜಾಂಬಾಜ್ ರತ್ನ’ ಸನ್ಮಾನ ಪತ್ರ

ನವದೆಹಲಿ, ಡಿಸೆಂಬರ್ ೧೯ (ಸುದ್ದಿ) – ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಹಿಂದುತ್ವನಿಷ್ಠ ಸಂಘಟನೆ ‘ಜಾಂಬಾಜ್ ಹಿಂದೂಸ್ತಾನಿ ಸೇವಾ ಸಮಿತಿ’ಯು, ‘ಸನಾತನ ಪ್ರಭಾತ’ ಮಾಧ್ಯಮ ಸಮೂಹದ ಉಪಸಂಪಾದಕರಾದ ಶ್ರೀ. ವಿಕ್ರಮ ಡೊಂಗ್ರೆ ಅವರನ್ನು ಇಲ್ಲಿ ನಡೆದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಸನ್ಮಾನಿಸಿತು. ಈ ವೇಳೆ ಅವರಿಗೆ ‘ಜಾಂಬಾಜ್ ರತ್ನ’ ಎಂದು ಘೋಷಿಸಿ ಸನ್ಮಾನ ಪತ್ರವನ್ನು ನೀಡಲಾಯಿತು.

ಸಮಾಜ, ರಾಷ್ಟ್ರ ಮತ್ತು ಧರ್ಮಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದರಿಂದ ಶ್ರೀ. ಡೊಂಗ್ರೆ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ‘ಜಾಂಬಾಜ್ ಹಿಂದೂಸ್ತಾನಿ ಸೇವಾ ಸಮಿತಿ’ಯ ಅಧ್ಯಕ್ಷರಾದ ಆಲೋಕ್ ಮಿಶ್ರ ‘ಆಜಾದ್’, ಉಪಾಧ್ಯಕ್ಷರಾದ ಶ್ರೀ. ಆಲೋಕ ತಿವಾರಿ, ಹಾಗೂ ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯವಾದಿ ಧೀರೇಂದ್ರ ಶ್ರೀವಾಸ್ತವ ಉಪಸ್ಥಿತರಿದ್ದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!