|

ನವದೆಹಲಿ – ಬಾಂಗ್ಲಾದೇಶದಲ್ಲಿ ಈ ಹಿಂದೆ ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರಕಾರವು ಭಾರತದ ಪೂರ್ವ ಗಡಿಗೆ ಹೊಂದಿಕೊಂಡಿರುವ ಬಾಂಗ್ಲಾದೇಶದ ಗಡಿಗಳನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಿತ್ತು. ಅದಕ್ಕೂ ಮೊದಲು ಬಾಂಗ್ಲಾದೇಶವನ್ನು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ನೆಲೆಯಾಗಿ ಬಳಸಲಾಗುತ್ತಿತ್ತು. ಈಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಪುತ್ರ ಸಾಜೀದ ವಾಜೆದ್ ಆತಂಕ ವ್ಯಕ್ತಪಡಿಸಿದ್ದಾರೆ. ‘ದೆಹಲಿಯ ಕೆಂಪು ಕೋಟೆಯ ಬಳಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟದ ಹಿಂದೆ ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆಯ ಕೈವಾಡವಿದೆ ಎಂಬ ಮಾಹಿತಿ ನನಗೆ ರಕ್ಷಣಾ ಇಲಾಖೆಯ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ’, ಎಂದೂ ಸಾಜೀದ ವಾಜೆದ್ ಹೇಳಿದ್ದಾರೆ.
ಭಾರತವು ಶೇಖ್ ಹಸೀನಾ ಅವರನ್ನು ಹಸ್ತಾಂತರಿಸಬಾರದು !
ಬಾಂಗ್ಲಾದೇಶದ ಮಧ್ಯಂತರ ಸರಕಾರವು ಭಾರತದ ಬಳಿ ಶೇಖ್ ಹಸೀನಾ ಅವರ ಹಸ್ತಾಂತರಕ್ಕಾಗಿ ಒತ್ತಾಯಿಸಿದೆ. ಭಾರತವು ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. ಈ ಕುರಿತು ಸಾಜೀದ ವಾಜೆದ್ ಮಾತನಾಡಿ, ಯಾವುದೇ ಕಾನೂನುಬದ್ಧ ಹಸ್ತಾಂತರಕ್ಕಾಗಿ ನಿಯಮದಂತೆ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು; ಆದರೆ ಬಾಂಗ್ಲಾದೇಶದಲ್ಲಿ ನಿಯಮ ಆಧಾರಿತ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿದಿದೆ. ನನ್ನ ತಾಯಿಗೆ ಅಲ್ಲಿನ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಲು ಸ್ವಂತ ನ್ಯಾಯವಾದಿಯನ್ನು ನೇಮಿಸಿಕೊಳ್ಳುವ ಅನುಮತಿಯನ್ನೂ ನಿರಾಕರಿಸಲಾಗಿದೆ. ಆದ್ದರಿಂದ ಭಾರತವು ಬಾಂಗ್ಲಾದೇಶ ಸರಕಾರದ ಕೋರಿಕೆಯ ಮೇಲೆ ಏನನ್ನೂ ಮಾಡುವುದು ನನಗೆ ಅಪೇಕ್ಷಿತವಿಲ್ಲ, ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ವಿಭಜನೆಯಾಗಲಿದೆ !
ಭಾರತವು ಬಾಂಗ್ಲಾದೇಶದ ಪರಿಸ್ಥಿತಿಯನ್ನು ಪರಿಹರಿಸಲು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಸಾಜೀದ ವಾಜೆದ್ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯು ಪುನರ್ ಸ್ಥಾಪನೆಯಾಗಲು ಅಂತರಾಷ್ಟ್ರೀಯ ಸಮುದಾಯವನ್ನು ತೊಡಗಿಸಿಕೊಳ್ಳುವಲ್ಲಿ ಭಾರತವು ಹೆಚ್ಚು ಪರಿಣಾಮಕಾರಿ ಪಾತ್ರವನ್ನು ನಿರ್ವಹಿಸಬೇಕು ಎಂದು ಅವರು ಹೇಳಿದರು. ಅವಾಮಿ ಲೀಗ್ ಮತ್ತು ಜಾತಿಯಾ ಪಕ್ಷ ಎಂಬ ಬಾಂಗ್ಲಾದೇಶದ ೨ ದೊಡ್ಡ ಪಕ್ಷಗಳನ್ನು ಚುನಾವಣೆಯಲ್ಲಿ ಭಾಗವಹಿಸದಂತೆ ತಡೆದಿರುವುದರಿಂದ ಬಾಂಗ್ಲಾದೇಶದ ಅರ್ಧದಷ್ಟು ಜನಸಂಖ್ಯೆಯ ಚುನಾವಣಾ ಹಕ್ಕನ್ನೇ ಕಸಿದುಕೊಳ್ಳಲಾಗಿದೆ. ಈ ದೇಶವು ಶೀಘ್ರದಲ್ಲೇ ವಿಭಜನೆಯಾಗಲಿದೆ ಎಂದು ಈ ಸಮಯದಲ್ಲಿ ಸಾಜೀಬ್ ವಾಜೆದ್ ಆತಂಕ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವುಕಳೆದ ಒಂದೂವರೆ ವರ್ಷಗಳಿಂದ ಬಾಂಗ್ಲಾದೇಶದ ಪರಿಸ್ಥಿತಿಗೆ ಸಂಬಂಧಿಸಿದಂತೆ ಭಾರತವು ಕೇವಲ ವೀಕ್ಷಕನ ಪಾತ್ರ ವಹಿಸುತ್ತಿದೆ. ಇದರ ಪರಿಣಾಮವನ್ನು ಭಾರತವು ಅನುಭವಿಸಬೇಕಾಗುತ್ತದೆ ಎಂಬದನ್ನೇ ವಾಜೆದ್ ಹೇಳುತ್ತಿದ್ದಾರೆ. ಈಗಲಾದರೂ ಭಾರತವು ಕ್ರಿಯಾಶೀಲವಾಗಿ ಏನನ್ನಾದರೂ ಮಾಡುವುದೇ? |
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ