‘ಲವ್ ಜಿಹಾದ್’ ವಿರೋಧಿ ಕಾಯ್ದೆ ಕುರಿತು ರಾಜ್ಯಗಳಿಂದ ಉತ್ತರ ಕೇಳಿದ ಸರ್ವೋಚ್ಚ ನ್ಯಾಯಾಲಯ !

ನವ ದೆಹಲಿ – ಉತ್ತರಾಖಂಡ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತನಂತಹ ಕೆಲವು ರಾಜ್ಯಗಳಲ್ಲಿ ಲವ್ ಜಿಹಾದ್ ಮತ್ತು ಬಲವಂತದ ಮತಾಂತರವನ್ನು ತಡೆಯಲು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇವೆ. ಅಖಿಲ ಭಾರತ ಪಸಮಾಂದಾ ಮುಸ್ಲಿಂ ಮಂಚ್ ನ ರಾಷ್ಟ್ರೀಯ ಅಧ್ಯಕ್ಷ ಜಾವೇದ ಮಲಿಕ್ ಅವರು ಕೂಡ ಈ ಕಾಯ್ದೆಯನ್ನು ಬೆಂಬಲಿಸಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದರ ವಿಚಾರಣೆಯು ಜನವರಿ ೨೮ ರಂದು ನಡೆಯಲಿದೆ. ಅಷ್ಟೇ ಅಲ್ಲದೆ, ‘ಲವ್ ಜಿಹಾದ್ ಕಾಯ್ದೆಯ ಅಗತ್ಯವೇಕಿದೆ ?’ ಎಂಬುದಕ್ಕೆ ೩ ವಾರಗಳಲ್ಲಿ ಉತ್ತರ ನೀಡುವಂತೆ ನ್ಯಾಯಾಲಯವು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

‘ಜಮಿಯತ್ ಉಲೇಮಾ-ಎ-ಹಿಂದ್’ ಮತ್ತು ‘ಸಿಟಿಜನ್ ಫಾರ್ ಜಸ್ಟಿಸ್ ಅಂಡ್ ಪೀಸ್’ ಎಂಬ ಸಂಸ್ಥೆಗಳು ಈ ಕಾಯ್ದೆಯ ವಿರುದ್ಧ ಅರ್ಜಿಗಳನ್ನು ಸಲ್ಲಿಸಿವೆ. ಕಾಯ್ದೆಯು ದುರ್ಬಳಕೆಯಾಗುವ ಸಾಧ್ಯತೆಯಿದೆ ಮತ್ತು ಇದರಿಂದ ಧಾರ್ಮಿಕ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಹಕ್ಕುಗಳಿಗೆ ಧಕ್ಕೆಯಾಗಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯವು ಈಗ ಎಲ್ಲಾ ಪಕ್ಷಗಳ ವಾದವನ್ನು ಆಲಿಸಿ ನಿರ್ಧಾರ ಕೈಗೊಳ್ಳಲಿದೆ. ಈ ಅರ್ಜಿಗಳು ಮತ್ತು ಕಾಯ್ದೆಯ ಪರವಾಗಿ ಜಾವೇದ ಮಲಿಕ ಸಲ್ಲಿಸಿರುವ ಅರ್ಜಿಯ ಬಗ್ಗೆ ನ್ಯಾಯಾಲಯದಲ್ಲಿ ಒಟ್ಟಿಗೆ ವಿಚಾರಣೆ ನಡೆಯಲಿದೆ.