
ಸಿಡ್ನಿ (ಆಸ್ಟ್ರೇಲಿಯಾ) – ಇಲ್ಲಿ ಡಿಸೆಂಬರ್ 14 ರಂದು ಬಾಂಡಿ ಕಡಲತೀರದಲ್ಲಿ ಯಹೂದಿಗಳ ಹನುಕ್ಕಾ ಹಬ್ಬದ ಸಮಯದಲ್ಲಿ ನಡೆದ ಜಿಹಾದಿ ಭಯೋತ್ಪಾದಕ ದಾಳಿಯಲ್ಲಿ ಸಾವಿಗೀಡಾದವರ ಸಂಖ್ಯೆ 16 ಕ್ಕೆ ಏರಿದೆ. ಇದರಲ್ಲಿ 10 ವರ್ಷದ ಬಾಲಕಿ ಮತ್ತು ಒಬ್ಬ ಇಸ್ರೇಲಿ ನಾಗರಿಕರು ಸೇರಿದ್ದಾರೆ. ಅಲ್ಲದೆ, 45 ಮಂದಿ ಗಾಯಗೊಂಡಿದ್ದಾರೆ. ಸಾಜಿದ್ ಅಕ್ರಂ (50 ವರ್ಷ) ಮತ್ತು ನಾವೀದ್ ಅಕ್ರಂ (24 ವರ್ಷ) ಎಂಬ ತಂದೆ-ಮಗ ಗುಂಡು ಹಾರಿಸಿ ಈ ದಾಳಿ ನಡೆಸಿದ್ದಾರೆ. ಪೊಲೀಸರ ಗುಂಡಿಗೆ ಸಾಜಿದ್ ಸಾವನ್ನಪ್ಪಿದ್ದು, ನಾವೀದ್ ಗಾಯಗೊಂಡಿದ್ದಾನೆ. ಇಬ್ಬರೂ ಪಾಕಿಸ್ತಾನಿ ಮೂಲದವರು. ಈ ದಾಳಿಯ ನಂತರ ಮೆಲ್ಬೋರ್ನ್‌ನಲ್ಲಿ ಆಯೋಜಿಸಲಾಗಿದ್ದ ಹನುಕ್ಕಾ ಉತ್ಸವವನ್ನು ರದ್ದುಗೊಳಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಸುಮಾರು 1 ಲಕ್ಷ 20 ಸಾವಿರ ಯಹೂದಿಗಳು ವಾಸಿಸುತ್ತಿದ್ದಾರೆ. ಅವರಲ್ಲಿ ಸುಮಾರು 60 ಸಾವಿರ ಯಹೂದಿಗಳು ಮೆಲ್ಬೋರ್ನ್ ನಗರದಲ್ಲಿ ವಾಸಿಸುತ್ತಿದ್ದಾರೆ.
ಸಾಜಿದ್ 27 ವರ್ಷಗಳ ಹಿಂದೆ ಪಾಕಿಸ್ತಾನದಿಂದ ಆಸ್ಟ್ರೇಲಿಯಾಕ್ಕೆ ಬಂದು ಇಲ್ಲಿ ಬಾಡಿಗೆ ಕೋಣೆಯಲ್ಲಿ ವಾಸಿಸಲು ಪ್ರಾರಂಭಿಸಿದ. ಇಲ್ಲಿ ಅವನು ಮದುವೆಯಾಗಿ ಹಣ್ಣುಗಳನ್ನು ಮಾರುವ ವ್ಯವಹಾರವನ್ನು ಆರಂಭಿಸಿದ. ಅವನ ಮಗ ನಾವೀದ್ ಆಸ್ಟ್ರೇಲಿಯಾದಲ್ಲಿ ಜನಿಸಿದ. ‘ಸಾಜಿದ್ ನು ಯಾವ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದನೇ? ಇದರ ಹಿಂದೆ ಇನ್ನಾರು ಇದ್ದಾರೆ?’ ಮುಂತಾದ ವಿಷಯಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 2019 ರಲ್ಲಿ ಪೊಲೀಸರು ನಾವೀದ್‌ನನ್ನು ಸಂದೇಹದ ಮೇರೆಗೆ 6 ತಿಂಗಳ ಕಾಲ ವಿಚಾರಣೆ ನಡೆಸಿದ್ದರು; ಆದರೆ ಅವನು ಅಪಾಯಕಾರಿ ಅಲ್ಲ ಎಂದು ಪೊಲೀಸರು ಕಂಡುಬಂದಿತ್ತು.
ಪರವಾನಗಿ ಪಡೆದ ಬಂದೂಕಿನಿಂದ ಗುಂಡಿನ ದಾಳಿ
ಪೊಲೀಸರ ಮಾಹಿತಿ ಪ್ರಕಾರ ಸಾಜಿದ್ ಅಕ್ರಂ ಪರವಾನಗಿ ಪಡೆದ ಬಂದೂಕನ್ನು ಹೊಂದಿದ್ದ, ಅದನ್ನು ಅವನು ಬೇಟೆಗಾಗಿ ಬಳಸುತ್ತಿದ್ದ. ಅವನು ಗನ್ ಕ್ಲಬ್‌ನ ಸದಸ್ಯನಾಗಿದ್ದ ಮತ್ತು ರಾಜ್ಯದ ಕಾನೂನಿನ ಪ್ರಕಾರ ಪರವಾನಗಿ ಹೊಂದಿದ್ದ. ಅವನು ಕಾನೂನುಬದ್ಧವಾಗಿ 6 ಬಂದೂಕುಗಳನ್ನು ಹೊಂದಿದ್ದ. ಗುಂಡಿನ ದಾಳಿ ನಡೆಸಲು ಹೊರಡುವ ಮೊದಲು ಇಬ್ಬರೂ ಕುಟುಂಬಕ್ಕೆ ತಾವು ಮೀನು ಹಿಡಿಯಲು ಹೋಗುತ್ತಿದ್ದೇವೆ ಎಂದು ಹೇಳಿದ್ದರು.
ಆಸ್ಟ್ರೇಲಿಯಾ ಸರಕಾರಕ್ಕೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು! – ಇಸ್ರೇಲ್ ಪ್ರಧಾನಿ ನೆತನ್ಯಾಹು

ನೆತನ್ಯಾಹು ಅವರು ತಾವು ಮೊದಲೇ ಎಚ್ಚರಿಕೆ ನೀಡಿದ್ದೆವು; ಆದರೆ ಆಸ್ಟ್ರೇಲಿಯಾ ಸರಕಾರ ಏನೂ ಮಾಡಲಿಲ್ಲ, ಇದರ ಪರಿಣಾಮವಾಗಿ ಈ ಭಯಾನಕ ದಾಳಿ ನಡೆಯಿತು ಎಂದು ಹೇಳಿದರು.
ಆಸ್ಟ್ರೇಲಿಯಾ ಪ್ಯಾಲೆಸ್ತೀನ್‌ಗೆ ಮಾನ್ಯತೆ ನೀಡಿದ ನಂತರ ಆಗಸ್ಟ್ 17 ರಂದು ಪತ್ರ ಬರೆದು ಪ್ರಧಾನಿ ಅಲ್ಬನೀಸ್ ಅವರಿಗೆ ಈ ಮಾಹಿತಿ ನೀಡಲಾಗಿತ್ತು. ಇದರಲ್ಲಿ ‘ಸರಕಾರದ ನೀತಿಗಳು ದೇಶದಲ್ಲಿ ಯಹೂದಿ ವಿರೋಧಿ ಭಾವನೆಗಳನ್ನು ಉತ್ತೇಜಿಸುತ್ತಿವೆ. ಪ್ಯಾಲೆಸ್ತೀನ್‌ಗೆ ಮಾನ್ಯತೆ ನೀಡುವುದು, ಈ ಹೆಜ್ಜೆ ಯಹೂದಿ-ವಿರೋಧಿ ಬೆಂಕಿಗೆ ತುಪ್ಪ ಸುರಿದಂತಿದೆ. ಇದರಿಂದ ಭಯೋತ್ಪಾದಕರಿಗೆ ಪ್ರೋತ್ಸಾಹ ಸಿಗುತ್ತದೆ ಮತ್ತು ಆಸ್ಟ್ರೇಲಿಯಾದಲ್ಲಿ ಯಹೂದಿಗಳ ವಿರುದ್ಧ ದ್ವೇಷ ಹರಡುತ್ತದೆ. ಗಾಜಾ ಯುದ್ಧದ ನಂತರ (ಅಕ್ಟೋಬರ್ 2023 ರಿಂದ) ಆಸ್ಟ್ರೇಲಿಯಾದಲ್ಲಿ ಯಹೂದಿ-ವಿರೋಧಿ ದಾಳಿಗಳು ಹೆಚ್ಚಾದವು; ಆದರೆ ಸರಕಾರ ಅದನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಇದನ್ನು ಅವರು ಸರಕಾರದ ದೌರ್ಬಲ್ಯವೆಂದು ಪರಿಗಣಿಸುತ್ತಾರೆ.’
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation