
ಸನಾತನ ಸಂಸ್ಥೆಯ ‘ಸನಾತನ ರಾಷ್ಟ್ರ: ಚುನೌತಿಯಾಂ ಏವಂ ಚಿಂತನ್’( ಸನಾತನ ರಾಷ್ಟ್ರ: ಸವಾಲುಗಳು ಮತ್ತು ಚಿಂತನೆ) ಹಿಂದಿ ಭಾಷೆಯ ಗ್ರಂಥ ಬಿಡುಗಡೆ.
ಭಾರತ ಮಂಡಪಂ, ದೆಹಲಿ (ಸುದ್ದಿ) – ಕಾಶಿ ಮತ್ತು ಮಥುರಾ ದೇವಸ್ಥಾನಗಳನ್ನು ಮುಕ್ತಗೊಳಿಸಲು ನಡೆಸಿದ ನ್ಯಾಯ ಹೋರಾಟವು ನನಗೆ ಆಧ್ಯಾತ್ಮಿಕ ಪ್ರಯಾಣವೇ ಆಗಿದೆ; ಏಕೆಂದರೆ ಕೇವಲ ದೈವೀ ಕೃಪೆಯಿಂದಲೇ ನಾವು ಈ ಹೋರಾಟವನ್ನು ಗೆಲ್ಲುತ್ತಿದ್ದೇವೆ, ಹೋರಾಡುತ್ತಿದ್ದೇವೆ. ‘ನಿಮಗಿಂತ ನಮ್ಮ ಶ್ರದ್ಧೆ ಮತ್ತು ಶ್ರದ್ಧಾಸ್ಥಾನಗಳು ಶ್ರೇಷ್ಠವಾಗಿವೆ’, ಎಂಬ ಮತಾಂಧರ ಹಿಂದೂ ವಿರೋಧಿ ಮನಸ್ಥಿತಿಯನ್ನು ಬುಡಸಮೇತ ಕಿತ್ತೊಗೆಯಲು ಮಂದಿರ ಮುಕ್ತಿ ಹೋರಾಟವು ವ್ಯಾಪಕವಾಗಬೇಕು. ಹಿಂದೂಗಳ ಮೇಲೆ ಮಾಡಿದ ದಾಳಿಗಳಿಗೆ ನೀಡುವ ತಕ್ಕ ಪ್ರತ್ಯುತ್ತರವೇ ಮಂದಿರ ಮುಕ್ತಿ ಪ್ರಯತ್ನ. ದುರುದ್ದೇಶಪೂರ್ವಕವಾಗಿ ‘ಮಂದಿರ ಮುಕ್ತಿಯಿಂದ ಏನಾಗುತ್ತದೆ?’ ಎಂದು ಕುಚೇಷ್ಟೆಯಿಂದ ಕೇಳುವವರಿಗೆ ಕುಂಭಮೇಳದಲ್ಲಿ ಹಿಂದುಗಳ ವಿಶ್ವದಾಖಲೆ ಉಪಸ್ಥಿತಿಯು ಉತ್ತರ ನೀಡಿದೆ. ಈ ದೇಶವು ಸನಾತನ ರಾಷ್ಟ್ರವಾಗುವವರೆಗೆ, ಹಿಂದುಗಳ ವಶಪಡಿಸಿಕೊಂಡಿರುವ ಪ್ರತಿಯೊಂದು ದೇವಸ್ಥಾನಗಳನ್ನು ಮುಕ್ತಗೊಳಿಸುವ ಸಂಕಲ್ಪವನ್ನು ಇಂದು ನಾವೆಲ್ಲರೂ ಮಾಡೋಣ, ಎಂದು ಕಾಶಿ ಮತ್ತು ಮಥುರಾ ದೇವಸ್ಥಾನಗಳ ಮುಕ್ತಿಗಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿರುವ ನ್ಯಾಯವಾದಿ ವಿಷ್ಣು ಶಂಕರ ಜೈನ್ ಅವರು ಆಹ್ವಾನ ನೀಡಿದರು. ವಕೀಲರಾದ ಜೈನ್ ಅವರು ‘ಹಿಂದು ಫ್ರಂಟ್ ಫಾರ್ ಜಸ್ಟೀಸ್’ನ ವಕ್ತಾರರಾಗಿದ್ದು ಸರ್ವೋಚ್ಚ ನ್ಯಾಯಾಲಯದಲ್ಲಿ ಹಿಂದೂಗಳ ಪರವಾಗಿ ವಾದ ಮಂಡಿಸುತ್ತಾರೆ.

ಜೈನ್ ಅವರು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಮಧ್ಯಾಹ್ನದ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸನಾತನ-ನಿರ್ಮಿತ ‘ಸನಾತನ ರಾಷ್ಟ್ರ: ಚುನೌತಿಯಾಂ ಏವಂ ಚಿಂತನ್’ ಎಂಬ ಹಿಂದಿ ಗ್ರಂಥವನ್ನು ಉಪಸ್ಥಿತರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ನ ಸಂಸ್ಥಾಪಕರಾದ ಮತ್ತು ಮಾಜಿ ಮಾಹಿತಿ ಆಯುಕ್ತರಾದ ಶ್ರೀ. ಉದಯ ಮಾಹೂರಕರ, ‘ಸುದರ್ಶನ ಸುದ್ದಿವಾಹಿನಿ’ಯ ಮುಖ್ಯ ಸಂಪಾದಕರಾದ ಡಾ. ಸುರೇಶ ಚವ್ಹಾಣಕೆ, ಹಿಂದು ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಮತ್ತು ಈ ಗ್ರಂಥದ ಸಹಲೇಖಕರಾದ ಶ್ರೀ. ರಮೇಶ ಶಿಂದೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡ್ಗೀಳ ಉಪಸ್ಥಿತರಿದ್ದರು. ವಕೀಲರಾದ ಜೈನ್ ಅವರು ಮಾತನಾಡಿ, ‘‘ಇಲ್ಲಿಯವರೆಗೆ ನಾವು ನಮ್ಮ ವಿಚಾರಧಾರೆಯ ಜನಪ್ರತಿನಿಧಿಗಳನ್ನು ಚುನಾಯಿಸುತ್ತಾ ಬಂದಿದ್ದೇವೆ. ಈ ಜನಪ್ರತಿನಿಧಿಗಳು ಅನೇಕ ರಾಜ್ಯಗಳಲ್ಲಿ ಈಗ ಆಡಳಿತಾಧಿಕಾರಿಗಳಾಗಿದ್ದಾರೆ. ಈಗ ಈ ಆಡಳಿತಾಧಿಕಾರಿಗಳಿಂದ ನಮಗೆ ಏನು ಬೇಕು, ಎಂಬುದನ್ನು ಕೂಡ ನಾವು ಸ್ಪಷ್ಟಪಡಿಸಬೇಕು. ನೀವು ಅಧಿಕಾರಕ್ಕೆ ಬಂದ ನಂತರ ದೇವಸ್ಥಾನಗಳ ಸರಕಾರೀಕರಣವನ್ನು ರದ್ದುಗೊಳಿಸುವುದು, ‘ಪ್ಲೇಸಸ್ ಆಫ್ ವರ್ಶಿಪ್’ನಂತಹ ಹಿಂದೂ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವುದು, ‘ವಕ್ಫ್’ನಂತಹ ಓಲೈಕೆಯ ಕಾನೂನುಗಳನ್ನು ರದ್ದುಗೊಳಿಸುವುದು, ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂಗಳನ್ನು ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ಳುವುದು ಇತ್ಯಾದಿ ಕೃತಿಗಳನ್ನು ಮಾಡುವವರಿದ್ದರೆ, ನಾವು ನಿಮ್ಮನ್ನು ಚುನಾಯಿಸುತ್ತೇವೆ, ಎಂದು ನಾವು ಸ್ಪಷ್ಟವಾಗಿ ಹೇಳಬೇಕು.
ವಕೀಲರಾದ ಜೈನ್ ಅವರು ತಮ್ಮ ಮನೋಗತದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಗೌರವಪೂರ್ವಕವಾಗಿ ಉಲ್ಲೇಖಿಸಿ, ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಮಾಡುತ್ತಿರುವ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು.
ವಕೀಲ ಜೈನ್ ಅವರು ಶ್ರದ್ಧೆಯಿಂದ ಹೇಳಿದ ಕವಿತೆ !ಸಮಯ್ ತರಾಜೂ ತೋಲ್ ರಹಾ ಹೈ, ಇತಿಹಾಸ ಕೇ ಪನ್ನೇ ಖೋಲ ರಹಾ ಹೈ | |
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ