ಖಟಿಮಾ (ಉತ್ತರಾಖಂಡ) ದಲ್ಲಿ ಮತಾಂಧ ಮುಸಲ್ಮಾನರಿಂದ ಹಿಂದೂ ಯುವಕನ ಹತ್ಯೆ – Uttarakhand Muslim Kills Hindu Youth

ಹಿಂದೂಗಳಿಂದ ರಸ್ತೆಗಳಲ್ಲಿ ಪ್ರತಿಭಟನೆ

ಖಟಿಮಾ (ಉತ್ತರಾಖಂಡ) – ಇಲ್ಲಿ ಡಿಸೆಂಬರ್ ೧೨ ರಂದು ಪೂರ್ವ ದ್ವೇಷದ ಹಿನ್ನೆಲೆಯಲ್ಲಿ, ಮುಸಲ್ಮಾನನಾದ ಹಾಶಿಮ್, ತನ್ನ ೫ ಸಹಚರರ ಸಹಾಯದಿಂದ ಹಿಂದೂ ಯುವಕ ತುಷಾರ್ ಶರ್ಮಾ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಕೊಲೆಯ ನಂತರ ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕೋಪಗೊಂಡ ನಾಗರಿಕರು ರಸ್ತೆಗಿಳಿದು ತೀವ್ರ ಪ್ರತಿಭಟನೆ ನಡೆಸಿದರು. ಪೊಲೀಸರು ಮುಖ್ಯ ಆರೋಪಿ ಹಾಶಿಮ್‌ನನ್ನು ಎನ್‌ಕೌಂಟರ್ ಮೂಲಕ ಬಂಧಿಸಿದರು. ಅವನ ಕಾಲಿಗೆ ಗುಂಡು ತಗುಲಿದೆ. ಈ ಘಟನೆಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ತುಷಾರ್ ಅವರು ಹಿಂದೂ ಆಗಿದ್ದರಿಂದಲೇ ಅವರ ಕೊಲೆ ಮಾಡಲಾಗಿದೆ ಎಂದು ಸ್ಥಳೀಯ ನಾಗರಿಕರು ಹೇಳುತ್ತಿದ್ದಾರೆ. ತುಷಾರ್ ಅವರನ್ನು ಕೊಲ್ಲುವಾಗ ಮತಾಂಧ ಮುಸಲ್ಮಾನರು ‘ಇವನು ಹಿಂದೂ, ಇವನನ್ನು ಚಾಕುವಿನಿಂದ ಇರಿ’ ಎಂದು ಹೇಳುತ್ತಿದ್ದರು.

೧. ರಾತ್ರಿ ಸುಮಾರು ೯.೩೦ ಗಂಟೆಗೆ ತುಷಾರ್, ಸಲ್ಮಾನ್ ಮತ್ತು ಅಭಯ್ ಎಂಬ ಮೂವರು ಬಸ್ ನಿಲ್ದಾಣದ ಸಮೀಪದ ಚಹಾ ಅಂಗಡಿಯಲ್ಲಿ ನಿಂತಿದ್ದರು.

೨. ಆ ಸಮಯದಲ್ಲಿ ಗೋತಿಯಾ ಇಸ್ಲಾಮನಗರದಿಂದ ಬಂದ ಹಾಶಿಮ್ ಮತ್ತು ಕೆಲವು ಯುವಕರೊಂದಿಗೆ ತುಷಾರ್ ಅವರಿಗೆ ವಾಗ್ವಾದ ನಡೆಯಿತು. ಕೆಲವೇ ಕ್ಷಣಗಳಲ್ಲಿ ಎರಡೂ ಗುಂಪುಗಳ ನಡುವೆ ಹೊಡೆದಾಟ ಆರಂಭವಾಯಿತು.

೩. ಇದ್ದಕ್ಕಿದ್ದಂತೆ ಹಾಶಿಮ್ ತುಷಾರ್ ಅವರ ಮೇಲೆ ಚಾಕುವಿನಿಂದ ಇರಿದನು. ಈ ದಾಳಿಯಲ್ಲಿ ಸಲ್ಮಾನ್ ಮತ್ತು ಅಭಯ್ ಗಂಭೀರವಾಗಿ ಗಾಯಗೊಂಡರು.

೪. ಮೂವರನ್ನೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ತುಷಾರ್ ಅವರನ್ನು ಮೃತ ಎಂದು ಘೋಷಿಸಿದರು ಮತ್ತು ಇತರ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಮಟ್ಟದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ಎರಡೂ ಗುಂಪುಗಳ ನಡುವೆ ಮೊದಲಿನಿಂದಲೂ ವೈರತ್ವವಿತ್ತು ಎಂಬ ವಿಷಯವೂ ಬೆಳಕಿಗೆ ಬಂದಿದೆ.

  • ಗಲ್ಲು ಶಿಕ್ಷೆ ನೀಡಿ! – ಪತ್ನಿಯ ಬೇಡಿಕೆ ತುಷಾರ್ ಅವರ ಹತ್ಯೆಯ ನಂತರ ಅವರ ಪತ್ನಿ, “ತುಷಾರ್ ಅವರ ಕೈಗಳನ್ನು ಹಿಂದೆ ಕಟ್ಟಿ, ಅವರ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಮನೆಯಲ್ಲಿ ೬೦ ವರ್ಷದ ಮಾವ ಇದ್ದಾರೆ. ಸರ್ಕಾರವು ನಮಗೆ ಪರಿಹಾರ ಮತ್ತು ಉದ್ಯೋಗ ನೀಡಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಗಲ್ಲು ಶಿಕ್ಷೆ ವಿಧಿಸಬೇಕು” ಎಂದು ಹೇಳಿದರು.
  • ಆರೋಪಿಯ ತಂದೆಯ ಚಹಾ ಅಂಗಡಿಗೆ ಬೆಂಕಿ! ಡಿಸೆಂಬರ್ ೧೪, ೨೦೨೫ ರಂದು ನಾಗರಿಕರು ಮೆರವಣಿಗೆ ನಡೆಸಿ ಇತರ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು. ಈ ಘಟನೆಯನ್ನು ವಿರೋಧಿಸಿ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿದರು. ಉದ್ವಿಗ್ನ ಪರಿಸ್ಥಿತಿಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ವರದಿಗಳ ಪ್ರಕಾರ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಸೇರಿದಂತೆ ನೂರಾರು ನಾಗರಿಕರು ಘಟನಾ ಸ್ಥಳದ ಸಮೀಪದ ಚಹಾ ಅಂಗಡಿಗೆ ಬೆಂಕಿ ಹಚ್ಚಿದರು. ಈ ಅಂಗಡಿ ಆರೋಪಿ ಹಾಶಿಮ್‌ನ ತಂದೆಯದು ಎಂದು ಹೇಳಲಾಗಿದೆ. ಸುತ್ತಮುತ್ತಲಿನ ಅಂಗಡಿಗಳನ್ನೂ ಧ್ವಂಸಗೊಳಿಸಲಾಯಿತು. ಗುಂಪು ಖಟಿಮಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿತು.