ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025

ದೆಹಲಿ – ಹನುಮಂತನು ತನ್ನ ಶಕ್ತಿಯನ್ನು ಮರೆತಿದ್ದನು. ಅದೇ ರೀತಿ ಹಿಂದೂ ಸಮಾಜದ್ದಾಗಿದೆ. ಹಿಂದೂ ಸಮಾಜವು ಜಾಗೃತಗೊಂಡಾಗ, ರಾಕ್ಷಸಿಯರಾದ ತಾಟಕ, ಶೂರ್ಪನಖ, ಮಾರೀಚ ಇತ್ಯಾದಿ ದುಷ್ಟ ಪ್ರವೃತ್ತಿಗಳನ್ನು ನಿಷ್ಪ್ರಭ ಮಾಡಲಾಗುತ್ತಿತ್ತು. ಅದೇ ರೀತಿ, ಹಿಂದೂಗಳೇ, ಇದು ಪಲಾಯನ ಮಾಡುವ ಸಮಯವಲ್ಲ ಎಂದು ಭಾಜಪದ ರಾಷ್ಟ್ರೀಯ ವಕ್ತಾರರಾದ ಶ್ರೀ. ಸುಧಾಂಶು ತ್ರಿವೇದಿ ಅವರು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ. ಸುಧಾಂಶು ತ್ರಿವೇದಿ ಅವರು ಮಾತನಾಡುತ್ತಾ,…

೧. ಭಾರತವು ಜ್ಞಾನ, ಸಮೃದ್ಧಿ ಮತ್ತು ಶೌರ್ಯವನ್ನು ಜಾಗೃತಗೊಳಿಸಬೇಕು. ಯಾವುದೇ ಭೇದವಿದ್ದರೂ, ನಮ್ಮ ತಾಯಿ ಭಾರತಾಂಬೆಯೇ ಎಂದು ಹಿಂದೂಗಳು ನೆನಪಿನಲ್ಲಿಡಬೇಕು.

೨. ಈಗ ಭಾರತದ ಸಮಯ ಬಂದಿದೆ. ‘ಯಹಿ ಸಮಯ ಹೈ, ಸಹಿ ಸಮಯ ಹೈ’ (ಇದೇ ಸಮಯ, ಸರಿಯಾದ ಸಮಯ) ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ಹೇಳಿದ್ದಾರೆ. ಯಾರ ಮೇಲೂ ಅಧಿಕಾರ ನಡೆಸಲು ಅಲ್ಲ, ಬದಲಾಗಿ ವಿಶ್ವಕ್ಕೆ ಮಾರ್ಗದರ್ಶನ ನೀಡಲು ಭಾರತವು ವಿಶ್ವಗುರು ಆಗಲಿದೆ.

೩. ವಿಶ್ವವು ನಿಧಾನವಾಗಿ ಸನಾತನ ಸಂಸ್ಕೃತಿಯತ್ತ ವಾಲುತ್ತಿದೆ. ಹಿಂದೆ ಅಮೆರಿಕದಲ್ಲಿ ಸಸ್ಯಾಹಾರಿ ಆಹಾರ ಸಿಗುತ್ತಿರಲಿಲ್ಲ. ಈಗ ಅಲ್ಲಿ ಸಸ್ಯಾಹಾರಿ ಆಹಾರವನ್ನು ನೀಡಲಾಗುತ್ತದೆ. ಹಿಂದೆ ಜನರು ಅಲೋಪತಿ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರು; ಆದರೆ ಈಗ ಅವರು ಆಯುರ್ವೇದದತ್ತ ವಾಲುತ್ತಿದ್ದಾರೆ. ರಾಸಾಯನಿಕ ಕೃಷಿಗೆ ಬದಲಾಗಿ ಸಾವಯವ ಕೃಷಿಯತ್ತ ವಾಲುತ್ತಿದ್ದಾರೆ.

೪. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಯೋಗ ದಿನದ ನಿರ್ಣಯಕ್ಕೆ ೧೭೭ ದೇಶಗಳು ವಿಶ್ವಸಂಸ್ಥೆಯಲ್ಲಿ ಅನುಮೋದನೆ ನೀಡಿದ್ದಾರೆ, ಅಂದರೆ ದೇಶದ ೧೭೭ ದೇಶಗಳಲ್ಲಿ ‘ಯೋಗ’ ಮಾಡಲಾಗುತ್ತಿದೆ. ಇದರ ಅರ್ಥ ವಿಶ್ವವು ಸನಾತನ ಸಂಸ್ಕೃತಿಯತ್ತ ವಾಲುತ್ತಿದೆ ಎಂದೇ ಆಗಿದೆ. ಮೋಜು ಮಸ್ತಿಯಲ್ಲಿರುವ ಯುರೋಪಿನ ದೇಶಗಳು ಕುಂಭಮೇಳಕ್ಕೆ ಬರುತ್ತಿವೆ. ಇದು ಸನಾತನ ಸಂಸ್ಕೃತಿಯ ಪ್ರಭಾವವೇ ಆಗಿದೆ.
ಸನಾತನ ಸಂಸ್ಥೆಯಿಂದ ಸುಧಾಂಶು ತ್ರಿವೇದಿ ಅವರಿಗೆ ಸನ್ಮಾನ

ದೆಹಲಿ – ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಅಭಯ ವರ್ತಕ್, ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ ಮತ್ತು ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳ ಸಮನ್ವಯಕ ಶ್ರೀ. ವಿಶ್ವನಾಥ ಕುಲಕರ್ಣಿ ಅವರು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಭಾಜಪದ ರಾಷ್ಟ್ರೀಯ ವಕ್ತಾರರಾದ ಶ್ರೀ. ಸುಧಾಂಶು ತ್ರಿವೇದಿ ಅವರನ್ನು ಸನ್ಮಾನಿಸಿದರು. ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಜೀವನಚರಿತ್ರೆಯನ್ನು ಶ್ರೀ. ಸುಧಾಂಶು ತ್ರಿವೇದಿ ಅವರಿಗೆ ಉಡುಗೋರೆಯಾಗಿ ನೀಡಲಾಯಿತು.

ಸುದರ್ಶನ ಸುದ್ದಿವಾಹಿನಿಯ ಮುಖ್ಯ ಸಂಪಾದಕರಾದ ಶ್ರೀ. ಸುರೇಶ್ ಚವ್ಹಾಣಕೆ ಅವರು ಸಹ ಶ್ರೀ. ಸುಧಾಂಶು ತ್ರಿವೇದಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಉಪಸ್ಥಿತರಿದ್ದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”