Shankhnad Mahotsav Delhi : ಹಿಂದೂ ಧರ್ಮದ ಮೇಲಿನ ದಾಳಿಗಳ ವಿರುದ್ಧ ಹೋರಾಡಲು ವಿವಿಧ ಸಂಘಟನೆಗಳು ಒಗ್ಗೂಡುವುದು ಅವಶ್ಯಕ – ವಿಚಾರ ಸಂಕಿರಣದಲ್ಲಿ ಹಿಂದುತ್ವನಿಷ್ಠರು.

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ‘ಸನಾತನ ಸಂಸ್ಕೃತಿಯ ರಕ್ಷಣೆ’ ವಿಚಾರ ಸಂಕಿರಣ

ಎಡದಿಂದ ಶ್ರೀ. ಕುರು ತಾಯಿ, ವಕೀಲ ಅರುಣ್ ಗುಪ್ತಾ, ಡಾ. ಸುರೇಶ್ ಚವ್ಹಾಣಕೆ, ಕ್ಯಾಪ್ಟನ್ ಪ್ರವೀಣ ಚತುರ್ವೇದಿ (ನಿವೃತ್ತ) ಮತ್ತು ಶ್ರೀ ಪ್ರಬಲ ಪ್ರತಾಪ್ ಸಿಂಹ ಜುದೇವ್

ಭಾರತ ಮಂಡಪಮ್‌, ಇಂದ್ರಪ್ರಸ್ಥ (ನವ ದೆಹಲಿ) – ಅನೇಕ ಹಿಂದೂಗಳು ವಿವಿಧ ಕ್ಷೇತ್ರಗಳಲ್ಲಿ ಅಂದರೆ ಮತಾಂತರ, ಲವ್ ಜಿಹಾದ್, ಭೂಮಿ ಜಿಹಾದ್ ತಡೆಯುವುದು, ಸಂಸ್ಕೃತಿ ರಕ್ಷಣೆ ಮತ್ತು ಘರವಾಪಸಿ (ಮರಳಿ ಹಿಂದೂ ಧರ್ಮಕ್ಕೆ) ಗಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಿದರೆ ಹಿಂದೂ ಧರ್ಮದ ಮೇಲಿನ ದಾಳಿಗಳ ವಿರುದ್ಧ ಹೋರಾಡಲು ಸಾಧ್ಯ. ಹಾಗಿದ್ದರೂ, ಸನಾತನ ರಾಷ್ಟ್ರದ ಸ್ಥಾಪನೆಯಾದ ನಂತರವೇ ಸನಾತನ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ನಿಜವಾದ ಅರ್ಥದಲ್ಲಿ ಆಗಲಿದೆ, ಎಂಬ ದಿಶೆಯು ಡಿಸೆಂಬರ್ ೧೩ ರಂದು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ನಡೆದ ‘ಸನಾತನ ಸಂಸ್ಕೃತಿಯ ರಕ್ಷಣೆ’ ಎಂಬ ವಿಷಯದ ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದ ಹಿಂದುತ್ವನಿಷ್ಠರಿಗೆ ಮತ್ತು ಧರ್ಮಪ್ರೇಮಿಗಳಿಗೆ ದೊರಕಿತು. ಈ ವಿಚಾರ ಸಂಕಿರಣದಲ್ಲಿ ಛತ್ತೀಸ್‌ಗಢದ ಬಿಜೆಪಿ ನಾಯಕ ಶ್ರೀ. ಪ್ರಬಲ ಪ್ರತಾಪ್ ಸಿಂಹ ಜುದೇವ್, ‘ಪ್ರಾಚ್ಯಂ’ ಒಟಿಟಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕ್ಯಾಪ್ಟನ್ ಪ್ರವೀಣ್ ಚತುರ್ವೇದಿ (ನಿವೃತ್ತ), ಅರುಣಾಚಲ ಪ್ರದೇಶದ ಬಿದಿರು ಸಂಪನ್ಮೂಲ ಮತ್ತು ಅಭಿವೃದ್ಧಿ ಸಂಸ್ಥೆಯ ಉಪನಿರ್ದೇಶಕ ಶ್ರೀ. ಕುರು ತಾಯಿ ಮತ್ತು ‘ಗಂಗಾಮಿತ್ರ’ ಎಂದು ಗುರುತಿಸಲ್ಪಡುವ ಉತ್ತರ ಪ್ರದೇಶದ ಉಚ್ಚ ನ್ಯಾಯಾಲಯದ ವಕೀಲ ಅರುಣ್ ಗುಪ್ತಾ ಅವರು ಭಾಗವಹಿಸಿದ್ದರು. ವಿಚಾರ ಸಂಕಿರಣವನ್ನು ‘ಸುದರ್ಶನ್ ನ್ಯೂಸ್ ನೆಟ್‌ವರ್ಕ್’ನ ಮುಖ್ಯ ಸಂಪಾದಕ ಡಾ. ಸುರೇಶ ಚವ್ಹಾಣಕೆ ಅವರು ನಡೆಸಿಕೊಟ್ಟರು.

ಜನವರಿ ೨೦೨೬ ರೊಳಗೆ ಅರುಣಾಚಲ ಪ್ರದೇಶದಿಂದ ನುಸುಳುಕೋರರನ್ನು ಓಡಿಸೋಣ! – ಶ್ರೀ. ಕುರು ತಾಯಿ, ಉಪನಿರ್ದೇಶಕರು, ಬಿದಿರು ಸಂಪನ್ಮೂಲ ಮತ್ತು ಅಭಿವೃದ್ಧಿ ಸಂಸ್ಥೆ, ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶದಲ್ಲಿ ಮತಾಂತರ, ಭೂಮಿ ಜಿಹಾದ್ ಮತ್ತು ಅಕ್ರಮ ಒಳನುಗ್ಗುವಿಕೆಯ ವಿರುದ್ಧ ಯುವಕರು ಒಗ್ಗೂಡಿದ್ದಾರೆ. ಇದರಿಂದ ಜನವರಿ ೨೦೨೬ರೊಳಗೆ ಅಲ್ಲಿನ ಎಲ್ಲಾ ಅನಧಿಕೃತ ಭೂಮಿ ಅತಿಕ್ರಮಣದಿಂದ ಮುಕ್ತಗೊಂಡು ಭೂಮಿ ಜಿಹಾದ್ ಅಂತ್ಯಗೊಳ್ಳಲಿದೆ, ಮತ್ತು ಅರುಣಾಚಲ ಪ್ರದೇಶದಲ್ಲಿ ವಾಸಿಸುತ್ತಿರುವ ಅಕ್ರಮ ನುಸುಳುಕೊರರನ್ನು ಓಡಿಸಲು ಈ ಯುವಕರು ಸಾಕಾಗಿದ್ದಾರೆ. ಇದರೊಂದಿಗೆ, ಮುಂದಿನ ೫ ವರ್ಷಗಳಲ್ಲಿ ನಾವು ಬಲವಂತದ ಮತಾಂತರವನ್ನು ಸಹ ತಡೆಯಲಿದ್ದೇವೆ.

ಕೇಂದ್ರ ಸರಕಾರವು ಗಂಗಾಜಲದ ಮೇಲೆ ವೈದ್ಯಕೀಯ ಸಂಶೋಧನೆ ಮಾಡಿ ಅದರ ಲಾಭವನ್ನು ಜನರಿಗೆ ತಲುಪಿಸಬೇಕು! – ವಕೀಲ ಅರುಣ್ ಗುಪ್ತಾ, ಉಚ್ಚ ನ್ಯಾಯಾಲಯ ಮತ್ತು ‘ಗಂಗಾಮಿತ್ರ’

ಇಡೀ ವಿಶ್ವದಲ್ಲಿ ಕೇವಲ ಭಾರತದ ಋಷಿಮುನಿಗಳು ನದಿಯಲ್ಲಿ ಸ್ನಾನ ಮಾಡುವ ಸಂಪ್ರದಾಯವನ್ನು ಪ್ರಾರಂಭಿಸಿದರು. ಗಂಗಾಜಲವು ವೈಜ್ಞಾನಿಕವಾಗಿದ್ದು, ಅದು ಅನೇಕ ಜೀವಿಗಳನ್ನು ರಕ್ಷಿಸುತ್ತದೆ. ಗಂಗಾ ನದಿಯ ಕುರಿತು ನ್ಯಾಯಾಲಯದಲ್ಲಿ ವೈಜ್ಞಾನಿಕ ಪುರಾವೆಗಳನ್ನು ಸಲ್ಲಿಸಿದ್ದರಿಂದ ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ೧೨೫ ಆದೇಶಗಳು (ತೀರ್ಪುಗಳು) ದೊರೆತಿವೆ. ಗಂಗಾಜಲದಿಂದ ಅನೇಕ ರೋಗಗಳು ಗುಣವಾಗಬಹುದು. ಆದ್ದರಿಂದ ಕೇಂದ್ರ ಸರಕಾರವು ಅದರ ಮೇಲೆ ವೈದ್ಯಕೀಯ ಸಂಶೋಧನೆ ಮಾಡಿ ಅದರ ಲಾಭವನ್ನು ಜನರಿಗೆ ಮಾಡಿಕೊಡಬೇಕು.

ನಿಜವಾದ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ತರಲು ‘ಪ್ರಾಚ್ಯಂ ಒಟಿಟಿ’ ಸ್ಥಾಪನೆ! – ಕ್ಯಾಪ್ಟನ್ ಪ್ರವೀಣ್ ಚತುರ್ವೇದಿ (ನಿವೃತ್ತ), ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ‘ಪ್ರಾಚ್ಯಂ’ ಒಟಿಟಿ

ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿಯ ವಿರುದ್ಧ ಅನೇಕ ಸ್ತರಗಳಲ್ಲಿ ಯುದ್ಧ ನಡೆಯುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಆಯಾ ಕ್ಷೇತ್ರದಲ್ಲಿ ಹೋರಾಡಬೇಕು. ಪಾಶ್ಚಾತ್ಯರ ಮನಸ್ಸಿನಲ್ಲಿ ಹಿಂದೂ ಧರ್ಮದ ಕುರಿತು ಅನೇಕ ತಪ್ಪು ಕಲ್ಪನೆಗಳಿದ್ದವು. ಹಾಗಾಗಿ ಅವರು ಮಾಧ್ಯಮಗಳ ಮೂಲಕ ಭಾರತ, ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ವಿರೋಧಿಸುತ್ತಿದ್ದರು. ಜಗತ್ತಿಗೆ ವಾಸ್ತವ ತಿಳಿಯಲಿ ಎಂದು ನಾನು ‘ಪ್ರಾಚ್ಯಂ’ ಎಂಬ ‘ಒಟಿಟಿ ಪ್ಲಾಟ್‌ಫಾರ್ಮ್’ ಅನ್ನು ಪ್ರಾರಂಭಿಸಿದೆ. ಇದರೊಂದಿಗೆ, ಭಾರತೀಯರನ್ನು ೧ ಸಾವಿರ ವರ್ಷಗಳ ನಿಜವಾದ ಇತಿಹಾಸದಿಂದ ವಂಚಿತರನ್ನಾಗಿಸಲಾಗಿದೆ. ಇತಿಹಾಸ ಗೊತ್ತಿಲ್ಲದವರಿಗೆ ಶತ್ರು ಯಾರು ಎಂದು ಗೊತ್ತಾಗುವುದಿಲ್ಲ, ಎಂಬುದನ್ನು ಮನಗಂಡು ಭಾರತೀಯರಿಗೆ ನಿಜವಾದ ಇತಿಹಾಸದ ಪರಿಚಯವಾಗಲಿ ಎಂಬುದು ಸಹ ‘ಪ್ರಾಚ್ಯಂ’ ನ ಉದ್ದೇಶವಾಗಿದೆ.

ಕ್ರೈಸ್ತರಿಂದಾಗುವ ಮತಾಂತರವನ್ನು ತಡೆಯಲು ಛತ್ತೀಸ್‌ಗಢದಲ್ಲಿ ಕಠಿಣ ಕಾನೂನು ಜಾರಿಗೊಳಿಸುತ್ತೇವೆ! – ಪ್ರಬಲ್ ಪ್ರತಾಪ್ ಸಿಂಹ ಜುದೇವ್, ಬಿಜೆಪಿ ನಾಯಕ, ಛತ್ತೀಸ್‌ಗಢ

ಒಂದು ಮತಾಂತರವಾದರೆ, ಒಬ್ಬ ಶತ್ರು ಹೆಚ್ಚುತ್ತಾನೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಛತ್ತೀಸ್‌ಗಢದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮತಾಂತರವಾಯಿತು, ಹಾಗೆಯೇ ನಕ್ಸಲ್ ಚಟುವಟಿಕೆಗಳು ಹೆಚ್ಚಿದವು. ಈಗ ಬಿಜೆಪಿ ಮುಖ್ಯಮಂತ್ರಿ ಶ್ರೀ. ವಿಷ್ಣು ದೇವ ಸಾಯ್ ಅವರ ಸರಕಾರದ ಅವಧಿಯಲ್ಲಿ ಆದಿವಾಸಿ ಸಂಸ್ಕೃತಿಯ ರಕ್ಷಣೆಯಾಗುತ್ತಿದ್ದು, ಜನರು ಮುಖ್ಯವಾಹಿನಿಗೆ ಸೇರಿಕೊಳ್ಳುತ್ತಿದ್ದಾರೆ, ಮತ್ತು ನಕ್ಸಲ್ ಚಟುವಟಿಕೆಗಳು ಸಹ ನಾಶವಾಗುತ್ತಿವೆ.

ಮುಂಬರುವ ಅಧಿವೇಶನದಲ್ಲಿ ಛತ್ತೀಸ್‌ಗಢ ಸರಕಾರವು ಮತಾಂತರದ ವಿರುದ್ಧ ಕಠಿಣ ಕಾನೂನನ್ನು ತರುತ್ತಿದೆ. ಒಬ್ಬ ರಾಜನಾಗಿದ್ದರೂ ನನ್ನ ತಂದೆ ದಿವಂಗತ ದಿಲೀಪ್ ಸಿಂಹ ಜುದೇವ್ ಅವರು ದಲಿತ ಬಂಧುಗಳ ಕಾಲು ತೊಳೆದು ಲಕ್ಷಾಂತರ ಮತಾಂತರಗೊಂಡವರನ್ನು ಹಿಂದೂ ಧರ್ಮಕ್ಕೆ ಮರಳಿ ತರುವ ಕೆಲಸ ಮಾಡಿದರು. ಅದೇ ಮಾದರಿಯಲ್ಲಿ ನಾವು ಕೂಡ ಸಾವಿರಾರು ಆದಿವಾಸಿ ಜನರನ್ನು ಸ್ವಧರ್ಮಕ್ಕೆ ಮರಳಿ ತರಲು ಪ್ರಯತ್ನಿಸುತ್ತಿದ್ದೇವೆ.

ಕ್ಷಣಚಿತ್ರಗಳು

1. ವಿಚಾರ ಸಂಕಿರಣದ ವೇಳೆ ‘ಪ್ರಾಚ್ಯಂ ಒಟಿಟಿ ಪ್ಲಾಟ್‌ಫಾರ್ಮ್’ನ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ೨. ‘ಈಶಾನ್ಯ ರಾಜ್ಯಗಳಲ್ಲಿ ಯಾರು ಪತ್ರಕರ್ತರಾಗಲು ಬಯಸುತ್ತಾರೋ, ಅವರಿಗೆ ಉಚಿತ ಪತ್ರಿಕೋದ್ಯಮ ಕಲಿಸಿ ಪದವಿ ನೀಡಲಾಗುವುದು’, ಎಂದು ‘ಸುದರ್ಶನ್ ನ್ಯೂಸ್ ನೆಟ್‌ವರ್ಕ್’ನ ಮುಖ್ಯ ಸಂಪಾದಕ ಡಾ. ಸುರೇಶ್ ಚವ್ಹಾಣ್ಕೆ ಅವರು ವಿಚಾರ ಸಂಕಿರಣದ ವೇಳೆ ಘೋಷಿಸಿದರು. ಅರುಣಾಚಲ ಪ್ರದೇಶದಲ್ಲಿ ಶ್ರೀ ಶ್ರೀ ೧೦೦೮ ಮಹಾಮಂಡಲೇಶ್ವರ ಸ್ವಾಮಿ ಶಾಂತಿಗಿರಿಜಿ ಮಹಾರಾಜ್, ಜಯ ಬಾಬಾಜಿ ಪರಿವಾರದ ಆಶ್ರಮವನ್ನು ತೆರೆಯಲಾಗುವುದು ಎಂದು ಸಹ ಅವರು ಹೇಳಿದರು.

2. ಉಪಸ್ಥಿತರಿದ್ದ ೧ ಸಾವಿರ ಹಿಂದುತ್ವನಿಷ್ಠರು ಪರವಾಗಿ ಭೂಮಿ ಜಿಹಾದ್ ಮತ್ತು ಬಾಂಗ್ಲಾದೇಶಿ ನುಸುಳುವವರ ವಿರುದ್ಧ ಹೋರಾಡುತ್ತಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಬೆಂಬಲ ಘೋಷಿಸಲಾಯಿತು.