
ಇತಿಹಾಸವು ರಾಷ್ಟ್ರದ ಅಡಿಪಾಯವಾಗಿದೆ. ಇತಿಹಾಸದಿಂದಲೇ ರಾಷ್ಟ್ರದ ರಕ್ಷಣೆ ಮತ್ತು ಸಂವರ್ಧನೆ ಸಾಧ್ಯ. ಸನಾತನ ರಾಷ್ಟ್ರದ ಸಂಕಲ್ಪನೆಯು ಇತಿಹಾಸದಿಂದ ನಿರ್ಮಾಣವಾಯಿತು. ಇತಿಹಾಸವು ರಾಷ್ಟ್ರದ ವ್ಯಕ್ತಿತ್ವವಾಗಿರುತ್ತದೆ. ವಿಶ್ವ ನಿರ್ಮಿತಿಯ ಕಾರ್ಯದಲ್ಲಿ ಸನಾತನದ ಸಂತ-ಮಹಾತ್ಮರ ಕೊಡುಗೆ ಬಹಳ ದೊಡ್ಡದಾಗಿದೆ. ಸನಾತನ ಧರ್ಮದ ಈ ಕೊಡುಗೆಯನ್ನು ಇಂದಿನ ಪೀಳಿಗೆಗೆ ಕಲಿಸಲಾಗುತ್ತಿಲ್ಲ. ಕಾಲಕ್ರಮವಿಲ್ಲದ ಇತಿಹಾಸದ ಬರಹವು ಅಪೂರ್ಣವಾಗಿದೆ. ಇಂದಿನ ಇತಿಹಾಸದಲ್ಲಿ ವೇದ, ರಾಮಾಯಣ, ಮಹಾಭಾರತ, ಪುರಾಣಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ಭಗವಾನ್ ಶ್ರೀರಾಮನ ಚರಿತ್ರೆಯನ್ನು ಭಾರತೀಯ ಇತಿಹಾಸದಲ್ಲಿ ಸೇರಿಸಬೇಕು. ಶ್ರೀರಾಮನು ಸ್ಥಾಪಿಸಿದ ಆದರ್ಶಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ಕಲಿಸಬೇಕು. ಕಾಲಗಣನೆಯ ಆಧಾರದ ಮೇಲೆ ಇತಿಹಾಸವನ್ನು ಸ್ಥಾಪಿಸುವುದರಿಂದ ಮಾತ್ರ ಸನಾತನ ರಾಷ್ಟ್ರದ ನಿರ್ಮಾಣ ಸಾಧ್ಯವಿದೆ. ಭಾರತೀಯ ಪರಂಪರೆಯಲ್ಲಿ ಜ್ಞಾನ, ವಿಜ್ಞಾನ, ತತ್ವಶಾಸ್ತ್ರಗಳ ಸಾಧನೆಯು ಸೇರಿಸಲಾಗಿದೆ. ವೇದಗಳಿಂದ ಮಹಾಭಾರತದವರೆಗೆ ನಡೆದ ಘಟನೆಗಳು ಖಗೋಳಶಾಸ್ತ್ರವನ್ನು ಆಧರಿಸಿವೆ. ನಾವು ನಮ್ಮ ಗ್ರಂಥಗಳಿಂದ, ಸಂಸ್ಕೃತಿಯಿಂದ ದೂರವಾಗಿದ್ದೇವೆ. ಭಾರತ ಭೂಮಿಯೇ ಪ್ರಥಮ ಸಂಸ್ಕೃತಿಯ ಉಗಮಸ್ಥಾನವಾಗಿದೆ. ಇಂಡೋ-ಯುರೋಪಿಯನ್ ಸಂಸ್ಕೃತಿಯ ಉಗಮಸ್ಥಾನ ಭಾರತವಾಗಿದೆ. ಇತಿಹಾಸದ ಕಾಲಕ್ರಮವನ್ನು ಸ್ಥಾಪಿಸಿ, ಅದರ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಇತಿಹಾಸ, ಬಾಹ್ಯಾಕಾಶ ವಿಜ್ಞಾನ, ಗಣಿತ, ವಿಜ್ಞಾನವನ್ನು ಕಲಿಸಬೇಕು. ಖಗೋಳಶಾಸ್ತ್ರ ಮತ್ತು ಕೃಷಿ ಆಧಾರಿತ ಸಮಾಜದ ನಿರ್ಮಾಣವು ಪ್ರಥಮವಾಗಿ ಭಾರತದಲ್ಲಾಯಿತು. ಭಾರತದ ಈ ಗತ ವೈಭವವನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು ಮತ್ತು ಆ ಮೂಲಕವೇ ಸನಾತನ ರಾಷ್ಟ್ರದ ನಿರ್ಮಾಣದ ಕಾರ್ಯವು ನಡೆಯಲಿದೆ ಎಂದು ಡಾ. ವೇದವೀರ ಆರ್ಯ ಅವರು ಹೇಳಿದರು.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !