Shankhnad Mahotsav Delhi : ದೆಹಲಿಯಲ್ಲಿ ಭಾರತೀಯ ಶಸ್ತ್ರಾಸ್ತ್ರ ಸಂಪ್ರದಾಯಕ್ಕಾಗಿ ಭವ್ಯ ವಸ್ತುಸಂಗ್ರಹಾಲಯ ನಿರ್ಮಾಣ – ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ.

  • ಶಿವಾಜಿ ಕಾಲದ ಐತಿಹಾಸಿಕ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ಉದ್ಘಾಟಿಸಿದ ದೆಹಲಿ ಸಚಿವ ಕಪಿಲ್ ಮಿಶ್ರಾ !

  • ರಾಷ್ಟ್ರೀಯ ಗೀತೆಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆ; ಕೇಂದ್ರ ಸರ್ಕಾರದಿಂದ ‘ವಂದೇ ಮಾತರಂ’ ವಿಶೇಷ ಪ್ರದರ್ಶನ

ನವದೆಹಲಿ, ಡಿಸೆಂಬರ್ 13 (ವರದಿಗಾರಿಕೆ) – ನವದೆಹಲಿಯಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ನಿಮಿತ್ತವಾಗಿ ಭಾರತ ಮಂಟಪದಲ್ಲಿ ಆಯೋಜಿಸಲಾಗಿದ್ದ ಶಿವಾಜಿ ಕಾಲದ ಐತಿಹಾಸಿಕ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ದೆಹಲಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಕಪಿಲ್ ಮಿಶ್ರಾ ಅವರು ಡಿಸೆಂಬರ್ 13 ರಂದು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ‘ಸುದರ್ಶನ’ ವಾಹಿನಿಯ ಸಂಸ್ಥಾಪಕ ಮತ್ತು ಮುಖ್ಯ ಸಂಪಾದಕ ಡಾ. ಸುರೇಶ್ ಚವ್ಹಾಣ್ಕೆ, ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಉದಯ್ ಮಾಹುರ್ಕರ್, ವಿಶ್ವದ ಮೊದಲ ಹಿಂದೂ ಒಟಿಟಿ ವಾಹಿನಿಯಾದ ‘ಪ್ರಾಚ್ಯಂ’ ಸಂಸ್ಥಾಪಕ ಮುಖ್ಯಸ್ಥರಾದ ಕ್ಯಾ. ಪ್ರವೀಣ್ ಚತುರ್ವೇದಿ, ಪ್ರಸಿದ್ಧ ಲೇಖಕಿ ಶಫಾಲಿ ವೈದ್ಯ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ್ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗ್‌ಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡ್ಗೀಳ್ ಉಪಸ್ಥಿತರಿದ್ದರು.

ಶಿವಾಜಿ ಮಹಾರಾಜರ ಕಾಲದ ಆಯುಧ ಪ್ರದರ್ಶನ

ಈ ಶಸ್ತ್ರಾಸ್ತ್ರಗಳ ಸಂಗ್ರಾಹಕ ಶ್ರೀ ರಾಕೇಶ್ ಧಾವಡೆ ಅವರು ಶ್ರೀ ಕಪಿಲ್ ಮಿಶ್ರಾ ಅವರಿಗೆ, ‘ಶಿವಾಜಿ ಮಹಾರಾಜರ ಕಾಲದ ಶಸ್ತ್ರಾಸ್ತ್ರಗಳ ಸಂಗ್ರಹಾಲಯವು ದೇಶದಲ್ಲೆಲ್ಲೂ ಇಲ್ಲ, ಇಂತಹ ಸಂಗ್ರಹಾಲಯವನ್ನು ನೀವು ನಿರ್ಮಿಸಲು ಸಾಧ್ಯವೇ?’ ಎಂದು ವಿನಂತಿಸಿದರು. ಆಗ ಶ್ರೀ ಕಪಿಲ್ ಮಿಶ್ರಾ ಅವರು ‘ದೆಹಲಿಯ ಮಧ್ಯದಲ್ಲಿ ಭಾರತೀಯ ಶಸ್ತ್ರಾಸ್ತ್ರ ಸಂಪ್ರದಾಯ ಮತ್ತು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಗಾಗಿ ಭವ್ಯ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ನ 150 ನೇ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಆಯೋಜಿಸಿರುವ ಪ್ರದರ್ಶನ.

ಶಿವಾಜಿ ಕಾಲದ ಶಸ್ತ್ರಾಸ್ತ್ರಗಳ ಪ್ರದರ್ಶನದ ಬಗ್ಗೆ ಫಲಕಗಳ ಮೂಲಕ ನವದೆಹಲಿಯಲ್ಲಿ ವ್ಯಾಪಕವಾಗಿ ಜಾಹೀರಾತು ಮಾಡಲಾಗಿತ್ತು. ಹಾಗಾಗಿ ದೆಹಲಿಯ ಜನರು ಈ ಪ್ರದರ್ಶನದ ಬಗ್ಗೆ ಕುತೂಹಲ ಹೊಂದಿದ್ದಾರೆ. ಈ ಪ್ರದರ್ಶನದಲ್ಲಿ ಶಸ್ತ್ರಾಸ್ತ್ರಗಳ ಪ್ರದರ್ಶನದ ಜೊತೆಗೆ, ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಗೆ ನೂರೈವತ್ತು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ವಿಶೇಷ ಪ್ರದರ್ಶನವನ್ನೂ ಸಹ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಬಂದಂತಹ ಗಣ್ಯರು ಶಿವಾಜಿ ಕಾಲದ ಶಸ್ತ್ರಾಸ್ತ್ರಗಳ ಪ್ರದರ್ಶನ, ‘ವಂದೇ ಮಾತರಂ’ ಕುರಿತ ಪ್ರದರ್ಶನ ಮತ್ತು ದಿವ್ಯ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶಗಳ ದರ್ಶನ ಪಡೆದರು. ಅದೇ ರೀತಿ ಸನಾತನ ಸಂಸ್ಥೆಯ ಸಾತ್ವಿಕ ಗ್ರಂಥಗಳು ಮತ್ತು ಸಾತ್ವಿಕ ಸಾಹಿತ್ಯದ ಪ್ರದರ್ಶನದ ಪ್ರಯೋಜನವನ್ನೂ ಸಹ ಪಡೆಯಬಹುದಾಗಿದೆ.

ದೈವಿಕ ಸೋಮನಾಥ ಜ್ಯೋತಿರ್ಲಿಂಗದ ದೈವಿಕ ಅಂಶಗಳ ನೋಟ

 

ಸನಾತನ ಸಂಸ್ಥೆಯ ಸಾತ್ವಿಕ ಪುಸ್ತಕಗಳ ಪ್ರದರ್ಶನ

 

ಸನಾತನ ಸಂಸ್ಥೆಯ ಸಾತ್ವಿಕ ಸಾಹಿತ್ಯ ಪ್ರದರ್ಶನ

 

ಪ್ರದರ್ಶನದ ಉದ್ಘಾಟನೆಯ ಮೊದಲೇ ಸಾರ್ವಜನಿಕರು ಮತ್ತು ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆ:

ಪ್ರದರ್ಶನದ ಅಧಿಕೃತ ಉದ್ಘಾಟನೆಯ ಮೊದಲೇ ಅನೇಕ ವೀಕ್ಷಕರು ಕುಟುಂಬ ಸಮೇತ ಬಂದು ಪ್ರದರ್ಶನವನ್ನು ವೀಕ್ಷಿಸುತ್ತಿದ್ದರು. ‘ದೆಹಲಿಯಲ್ಲಿ ಇಂತಹ ಪ್ರದರ್ಶನವನ್ನು ಮೊದಲ ಬಾರಿಗೆ ಆಯೋಜಿಸಲಾಗಿರುವುದರಿಂದ ಇದನ್ನು ನೋಡಲು ಬಂದಿದ್ದೇವೆ’ ಎಂಬ ಭಾವನೆ ಜನರಲ್ಲಿತ್ತು.

ಸಾಮಾನ್ಯ ಜನರ ಜೊತೆಗೆ, ಮಾಧ್ಯಮ ಪ್ರತಿನಿಧಿಗಳು ಕೂಡ ಪ್ರದರ್ಶನದ ಸಂಪೂರ್ಣ ಚಿತ್ರೀಕರಣವನ್ನು ಮಾಡಿದರು. ಪ್ರದರ್ಶನದಲ್ಲಿನಡಲಾದ ವಿಧದ ಶಸ್ತ್ರಾಸ್ತ್ರಗಳ ಸಂಗ್ರಹದ ವಿವರಗಳೊಂದಿಗೆ ಪ್ರತಿ ಶಸ್ತ್ರಾಸ್ತ್ರದ ಚಿತ್ರೀಕರಣವನ್ನು ಮಾಡಿದರು.

ಶಿವಾಜಿ ಮಹಾರಾಜರ ಕಾಲದ  ಈ ಅಪರೂಪದ ಶಸ್ತ್ರಾಸ್ತ್ರಗಳ ಸಂಗ್ರಹಕರಾದ ಶ್ರೀ ರಾಕೇಶ್ ಧಾವಡೆ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ಶಸ್ತ್ರಾಸ್ತ್ರಗಳ ತಯಾರಿಕೆ, ಬಳಕೆ ಮತ್ತು ಅದಕ್ಕೆ ಬೇಕಾದ ಲೋಹದ ಬಗ್ಗೆ ಆಳವಾದ ಮಾಹಿತಿಯನ್ನು ನೀಡಿದರು. ಸಂಗ್ರಹಕರಾದ ಶ್ರೀ ರಾಕೇಶ್ ಧಾವಡೆ ಅವರು ಸ್ವತಃ ಛತ್ರಪತಿ ಶಿವಾಜಿ ಮಹಾರಾಜರ ಅಂಗರಕ್ಷಕರ ವಂಶಸ್ಥರ 13ನೇ ತಲೆಮಾರಿನವರಾಗಿದ್ದಾರೆ.

ನೂರಾರು ಶಸ್ತ್ರಾಸ್ತ್ರಗಳ ಅಪರೂಪದ ಪ್ರದರ್ಶನ:


ಈ ಶಸ್ತ್ರಾಸ್ತ್ರಗಳ ಪ್ರದರ್ಶನದಲ್ಲಿ ಅನೇಕ ವಿಶಿಷ್ಟ ಶಸ್ತ್ರಾಸ್ತ್ರಗಳಿವೆ. ಅವುಗಳಲ್ಲಿ ಶಿವಾಜಿ ಮಹಾರಾಜರ ಕಾಲದ ಖಡ್ಗಗಳು, ಭರ್ಜಿಗಳು, ಭೋಪಾಳ ಖಡ್ಗ, ಖಂಜರ್, ಹುಲಿಯ ಉಗುರುಗಳು (ವಾಗ್ ನಖ್), ಕಠಾರಿ, ರೈತ ಸೈನಿಕರು ಹೋರಾಡಿದ ಕೃಷಿ ಉಪಕರಣಗಳಲ್ಲಿನ ಸಾಂಪ್ರದಾಯಿಕ ಕುಡಗೋಲು, ಕೊಡಲಿ ಮುಂತಾದ ಶಸ್ತ್ರಾಸ್ತ್ರಗಳಿವೆ.

ಕ್ರಾಂತಿಕಾರಿ ಮತ್ತು 1857 ರ ಬ್ರಿಟಿಷರ ವಿರುದ್ಧದ ಮೊದಲ ದಂಗೆಗೆ ಕಾರಣವಾದ ಸಿಪಾಯಿ ಮಂಗಲ ಪಾಂಡೆ ಬಳಸಿದ ಬಂದೂಕು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಂಗರಕ್ಷಕರ ಖಡ್ಗ, ಶಿವಾಜಿ ಮಹಾರಾಜರ ಕಾಲದ ಫಿರಂಗಿಗಳು ಮತ್ತು ಫಿರಂಗಿ ಗುಂಡುಗಳು ಮುಂತಾದ ನೂರಾರು ಶಸ್ತ್ರಾಸ್ತ್ರಗಳ ಪ್ರದರ್ಶನದ ಪ್ರಯೋಜನವನ್ನು ದೆಹಲಿಯ ಜನರು ಪಡೆದರು.

ಶ್ರೀ ರಾಕೇಶ್ ಧಾವಡೆ ಅವರ ಬಳಿ ಒಟ್ಟು 40,000 ಶಿವಾಜಿ ಕಾಲದ ಶಸ್ತ್ರಾಸ್ತ್ರಗಳಿದ್ದು, ಅವರು ಶಿವಾಜಿ ಕಾಲದ ಯುದ್ಧ ಕಲೆ ಮತ್ತು ಶಸ್ತ್ರಾಸ್ತ್ರಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಈ ಶಸ್ತ್ರಾಸ್ತ್ರಗಳ ಪ್ರದರ್ಶನ ಅತ್ಯಂತ ಅದ್ಭುತವಾಗಿದೆ! – ಕಪಿಲ್ ಮಿಶ್ರಾ

ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಈ ಮರಾಠಾ ಶಸ್ತ್ರಾಸ್ತ್ರ ಸಂಪ್ರದಾಯದ ಶಸ್ತ್ರಾಸ್ತ್ರಗಳು ಅತ್ಯಂತ ಅದ್ಭುತವಾದ ಪ್ರದರ್ಶನವಾಗಿದೆ. ಭಾರತದ ಜ್ಞಾನ ಸಂಪ್ರದಾಯ, ಶಸ್ತ್ರಾಸ್ತ್ರ ಸಂಪ್ರದಾಯದ ಇತಿಹಾಸವು ಬಹಳ ದೊಡ್ಡದಾಗಿದೆ. ಭಾರತದ ವೀರರ ಶೌರ್ಯ ಸಾಹಸ ಎಲ್ಲರಿಗೂ ತಿಳಿಯಬೇಕು. ಇಲ್ಲಿಯವರೆಗೆ ಪಠ್ಯಕ್ರಮದಲ್ಲಿ ಮೊಗಲರ ಇತಿಹಾಸವನ್ನೇ ಹೇಳಲಾಗುತ್ತಿತ್ತು. ವಾಸ್ತವವಾಗಿ ಮರಾಠರ ಅನುಮತಿಯಿಲ್ಲದೆ ಮೊಗಲರು ಕೆಂಪು ಕೋಟೆಯ ಹೊರಗೆ ಹೋಗಲು ಸಾಧ್ಯವಿರಲಿಲ್ಲ. ಬ್ರಿಟಿಷರು ದೆಹಲಿಯನ್ನು ಮೊಗಲರಿಂದ ಪಡೆದಿಲ್ಲ, ಮರಾಠರಿಂದ ಪಡೆದಿದ್ದಾರೆ. ದೆಹಲಿಯ ನಿಜವಾದ ಇತಿಹಾಸವು ಗುಲಾಮಗಿರಿಯ ಇತಿಹಾಸವಲ್ಲ, ಅದು ಶೌರ್ಯ ಮತ್ತು ಪರಾಕ್ರಮದ ಇತಿಹಾಸ, ಅದನ್ನು ಇಲ್ಲಿಯವರೆಗೆ ಮರೆಮಾಚಲಾಗಿದೆ ಎಂದು ಮಿಶ್ರಾ ಹೇಳಿದರು.

ಪ್ರದರ್ಶನ ಸ್ಥಳದಲ್ಲಿ ನೆಲೆಸಿದ ಶಿವಶಾಹಿ !

ಭಾರತ ಮಂಟಪದಲ್ಲಿ ಅನೇಕ ರೀತಿಯ ಪ್ರದರ್ಶನಗಳು ನಡೆಯುತ್ತವೆ; ಆದರೆ ಶಸ್ತ್ರಾಸ್ತ್ರಗಳ ಪ್ರದರ್ಶನ ದೆಹಲಿಯಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವುದರಿಂದ ದೆಹಲಿಯ ಜನರು ಕುತೂಹಲದಿಂದ ಈ ಪ್ರದರ್ಶನ ನೋಡಲು ಆಗಮಿಸುತ್ತಿದ್ದಾರೆ. ಈ ಶಸ್ತ್ರಾಸ್ತ್ರಗಳ ಪ್ರದರ್ಶನದ ಜೊತೆಗೆ, ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ, ಬಾಜಿಪ್ರಭು ದೇಶಪಾಂಡೆ, ಮಹಾರಾಷ್ಟ್ರದ ಮಾವಳಗಳ ಕಟೌಟ್‌ಗಳನ್ನು ಹಾಕಲಾಗಿದೆ. ಡಿಜಿಟಲ್ ಫಲಕಗಳ ಮೂಲಕ ಮರಾಠರ ಶೌರ್ಯದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಈ ವಾತಾವರಣದಿಂದಾಗಿ ಪ್ರದರ್ಶನ ಸ್ಥಳದಲ್ಲಿ ಸಾಕ್ಷಾತ್ ಶಿವಶಾಹಿಯೇ ನೆಲೆಸಿದ್ದಾರೆಂಬ ಭಾಸವಾಗುತ್ತಿದೆ.

ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಿದ ‘ವಂದೇ ಮಾತರಂ’ !

ಕೇಂದ್ರ ಸರ್ಕಾರದ ವತಿಯಿಂದ ‘ವಂದೇ ಮಾತರಂ’ ಗೀತೆಯ ಇತಿಹಾಸ, ರಚನೆ, ಇತಿಹಾಸದಲ್ಲಿ ಈ ಗೀತೆ ನಡೆದು ಬಂದ ದಾರಿಯ ಬಗ್ಗೆ ಮಾಹಿತಿ ಫಲಕಗಳನ್ನು ಪ್ರದರ್ಶನ ಸ್ಥಳದಲ್ಲಿ ಹಾಕಲಾಗಿದೆ. ವಿವಿಧ ದೇಶಗಳಲ್ಲಿ ನಡೆದ ‘ವಂದೇ ಮಾತರಂ’ ಗೀತೆಯ ಧ್ವನಿಮುದ್ರಣದ ಗ್ರಾಂಫೋನ್ ಧ್ವನಿತಟ್ಟೆಗಳನ್ನು ಇಟ್ಟಿರುವುದರಿಂದ, ಪ್ರದರ್ಶನ ಸ್ಥಳದಲ್ಲಿ ‘ವಂದೇ ಮಾತರಂ’ ನ ಒಂದು ವಿಶೇಷ ವಾತಾವರಣವೇ ಸೃಷ್ಟಿಯಾಗಿದೆ. ಈ ಪ್ರದರ್ಶನ ಸ್ಥಳದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಾಧಕರು ‘150 ವರ್ಷ ವಂದೇ ಮಾತರಂ’ ಎಂಬ ಫಲಕಗಳನ್ನು ಹಿಡಿದು ವಿಶಿಷ್ಟ ರಚನೆಯನ್ನು ಮಾಡಿದರು.