
ಇಂದ್ರಪ್ರಸ್ಥ (ನವದೆಹಲಿ), ಡಿಸೆಂಬರ್ ೧೨ (ಸುದ್ದಿ.) – ಭಾರತದ ಇತಿಹಾಸದಲ್ಲಿನ ‘ಭಕ್ತಿ’ ಮತ್ತು ‘ಶಕ್ತಿ’ಗಳ ಸಂಗಮವನ್ನು ಒಟ್ಟುಗೂಡಿಸುವಂತಹ ಅದ್ವಿತೀಯ ಉತ್ಸವವು ದೇಶದ ರಾಜಧಾನಿಯಾದ ದೆಹಲಿ ಅರ್ಥಾತ್ ಇಂದ್ರಪ್ರಸ್ಥದಲ್ಲಿ ನಡೆಸಲಾಗುತ್ತಿದೆ.

THREAD: What’s Coming to the ‘Sanatan Rashtra Shankhnad Mahotsav’ in Delhi 🔔🇮🇳
🚨 Delhi is about to witness one of the most remarkable heritage showcases in recent history.
For the first time, iconic weapons from India’s struggle and civilisation will be displayed together at… pic.twitter.com/HNPtRFwslj
— Sanatan Prabhat (@SanatanPrabhat) December 12, 2025
🔥 Mangal Pandey’s Rifle Comes to Delhi : First Time Ever
The iconic rifle used by Mangal Pandey, the spark of the 1857 First War of Independence, is being brought to Delhi for public viewing for the first time in history.
A rare chance to see the weapon that ignited India’s… pic.twitter.com/RP8Ugv8mdR
— Sanatan Prabhat (@SanatanPrabhat) December 12, 2025
‘ಸೇವ್ ಕಲ್ಚರ್, ಸೇವ್ ಭಾರತ ಫೌಂಡೇಶನ್’ ಪ್ರಸ್ತುತಪಡಿಸಿದ ಮತ್ತು ‘ಸನಾತನ ಸಂಸ್ಥೆ’ ಆಯೋಜಿಸಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ದಲ್ಲಿ, ೧೮೫೭ ರ ಮೊದಲ ದಂಗೆಯ ಆದ್ಯ ಕ್ರಾಂತಿಕಾರರಾದ ಮಂಗಲ ಪಾಂಡೆ ಅವರು ಉಪಯೋಗಿಸಿದ ಬಂದೂಕು ಮತ್ತು ಮಧ್ಯಪ್ರದೇಶದ ರಾಜಮನೆತನದ ಮಲ್ಹಾರರಾವ್ ಹೋಳಕರ್,

ಅಲ್ಲದೇ ಕ್ರಾಂತಿಸಿಂಹ ನಾನಾ ಪಾಟೀಲ್ ಅವರು ಉಪಯೋಗಿಸಿದ ಬಂದೂಕುಗಳು ಪ್ರಥಮ ಬಾರಿಗೆ ದೆಹಲಿ ನಾಗರಿಕರ ಮುಂದೆ ಪ್ರದರ್ಶಿಸಲಾಗುವುದು. ಅದೇ ರೀತಿ, ಪಾಣಿಪತ್ ಯುದ್ಧದ ತೋಪುಗಳು ಸೇರಿದಂತೆ ೧,೫೦೦ ದುರ್ಲಭ ಶಸ್ತ್ರಾಸ್ತ್ರಗಳು ಸಹ ನೋಡಲು ಸಿಗಲಿವೆ.
ಇದನ್ನು ಓದಿರಿ → ಸಂಪಾದಕೀಯ : ‘ಸನಾತನ ರಾಷ್ಟ್ರ’ದ ಶಂಖನಾದ ಏಕೆ ?
ಈ ಮಹೋತ್ಸವದಲ್ಲಿ ಶೌರ್ಯದ ತೇಜಸ್ವಿ ಇತಿಹಾಸ ಮತ್ತು ಚೈತನ್ಯದಾಯಕ ಆಧ್ಯಾತ್ಮದ ಅದ್ಭುತ ಸಂಯೋಗವನ್ನು ಅನುಭವಿಸಬಹುದು, ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ ಅಭಯ ವರ್ತಕ್ ಅವರು ಮಾಹಿತಿ ನೀಡಿದರು.

ಈ ಮಹೋತ್ಸವದಲ್ಲಿನ ‘ಸ್ವರಾಜ್ಯದ ಶೌರ್ಯನಾದ’ ಪ್ರದರ್ಶನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಾಲದ ೧,೫೦೦ ಕ್ಕಿಂತಲೂ ಹೆಚ್ಚು ಐತಿಹಾಸಿಕ ಶಸ್ತ್ರಾಸ್ತ್ರಗಳ ಭವ್ಯ ಸಂಗ್ರಹವು ಪ್ರಥಮ ಬಾರಿಗೆ ದೆಹಲಿಯವರ ಮುಂದೆ ಸಾದರ ಪಡಿಸಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರು ಸ್ವತಃ ಸ್ಪರ್ಶಿಸಿದ ಶಸ್ತ್ರಾಸ್ತ್ರಗಳೊಂದಿಗೆ, ಮಹಾರಾಣಾ ಪ್ರತಾಪ ಮತ್ತು ವಿಜಯನಗರ ಸಾಮ್ರಾಜ್ಯ ಕಾಲದ ಶಸ್ತ್ರಾಸ್ತ್ರಗಳನ್ನು ಸಹ ಇಲ್ಲಿ ನೋಡಬಹುದು. ಇದು ಕೇವಲ ಶಸ್ತ್ರಾಸ್ತ್ರಗಳ ಪ್ರದರ್ಶನ ಮಾತ್ರವಲ್ಲ, ಆದರೆ ಈ ಪ್ರದರ್ಶನದ ವಿಶೇಷತೆಯೆಂದರೆ ಚಿಕ್ಕ ಮಕ್ಕಳಿಗೆ ಇದರಿಂದ ಪ್ರೇರಣೆ ದೊರೆಯಬೇಕು ಎನ್ನುವ ಉದ್ದೇಶದಿಂದ ಕೆಲವು ಶಸ್ತ್ರಾಸ್ತ್ರಗಳನ್ನು ಕೈಯಲ್ಲಿ ಹಿಡಿದು ಅನುಭವ ಪಡೆಯಲು ಅವಕಾಶ ನೀಡಲಾಗುವುದು,.. ತೋಪನ್ನು ಹೇಗೆ ಹಾರಿಸಲಾಗುತ್ತದೆ ಎಂಬುದರ ಪ್ರಾಯೋಗಿಕ ಪ್ರದರ್ಶನವನ್ನು ಸಹ ತೋರಿಸಲಾಗುವುದು. ಈ ಶಸ್ತ್ರಾಸ್ತ್ರ ಪ್ರದರ್ಶನವು ಭಾರತ ಮಂಟಪಂನ ಸಭಾಂಗಣ ಸಂಖ್ಯೆ ೧೨ ರಲ್ಲಿ ಬೆಳಿಗ್ಗೆ ೧೦ ರಿಂದ ರಾತ್ರಿ ೮ ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.
*फॉर्म्युला -*
ದುರ್ಲಭ ಸೋಮನಾಥ ಜ್ಯೋತಿರ್ಲಿಂಗದ ದರ್ಶನದ ಅವಕಾಶ!

೧೦೦೦ ವರ್ಷಗಳಿಗಿಂತಲೂ ಹೆಚ್ಚು ಕಾಲ ಸಂರಕ್ಷಿಸಿ ಇಡಲಾದ ಮೂಲ ಸೋಮನಾಥ ಜ್ಯೋತಿರ್ಲಿಂಗದ ಅವಶೇಷಗಳ ದರ್ಶನವು ದೆಹಲಿಯಲ್ಲಿ ಪ್ರಥಮ ಬಾರಿಗೆ ಎಲ್ಲರಿಗೂ ಲಭ್ಯವಾಗಲಿದೆ. ಮಹಮದ್ ಘಜನಿ ನಾಶಗೊಳಿದ ಈ ಪವಿತ್ರ ಅವಶೇಷಗಳನ್ನು ಅರ್ಚಕರ ಕುಟುಂಬವು ತಮಿಳುನಾಡಿನಲ್ಲಿ ಸುರಕ್ಷಿತವಾಗಿಟ್ಟಿದ್ದು, ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯರ ಮಾರ್ಗದರ್ಶನದಲ್ಲಿ ಸನಾತನ ಸಂಸ್ಥೆಯ ಸಹಭಾಗದ ಮೂಲಕ ಈ ಜ್ಯೋತಿರ್ಲಿಂಗದ ಅವಶೇಷಗಳನ್ನು ಭಕ್ತರಿಗೆ ನೋಡಲು ಸಿಗಲಿವೆ. ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಮಾಧ್ಯಮದಿಂದ ರಾಷ್ಟ್ರರಕ್ಷಣೆ, ಸಂಸ್ಕೃತಿ, ಶೌರ್ಯ ಮತ್ತು ಹಿಂದವೀ ಸ್ವರಾಜ್ಯದ ತೇಜಸ್ಸನ್ನು ಜಾಗೃತಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !