ಅಫ್ಘಾನ್ ನಾಗರಿಕರ ಮೇಲಿನ ಆಕ್ರಮಣಗಳು ಎಂದರೆ ಯುದ್ಧದ ಕೃತ್ಯ! India Slams Pakistan UN Council

ಭಾರತದಿಂದ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಖಡಕ್ ಮಾತು!

ನ್ಯೂಯಾರ್ಕ್ (ಅಮೆರಿಕ) – ಅಫ್ಘಾನ್ ನಾಗರಿಕರ ಮೇಲಾಗುತ್ತಿರುವ ಆಕ್ರಮಣಗಳು ಯುದ್ಧದ ಕೃತ್ಯ ಎಂದು ಬಲವಾಗಿ ಹೇಳುತ್ತಾ, ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿತು. ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಉದ್ವಿಗ್ನ ವಾತಾವರಣವಿದೆ. ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿಗಳು ಮತ್ತು ಗಡಿಭಾಗದ ಚೆಕ್‌ಪೋಸ್ಟ್‌ಗಳ ಮೇಲೆ ಆಕ್ರಮಣಗಳನ್ನು ಮಾಡಿದೆ. ಈ ಆಕ್ರಮಣಗಳು ಅಫ್ಘಾನಿಸ್ತಾನದ ಸಾರ್ವಭೌಮತ್ವದ ಮೇಲಿನ ದಾಳಿಗಳಾಗಿವೆ ಎಂದು ಹೇಳುತ್ತಾ, ಅಫ್ಘಾನಿಸ್ತಾನ ಕೂಡ ತಕ್ಕ ಪ್ರತ್ಯುತ್ತರ ನೀಡಿದೆ. ಈ ವಿವಾದವನ್ನು ಬಗೆಹರಿಸಲು ಕತಾರ್ ಮತ್ತು ಟರ್ಕಿ ದೇಶಗಳು ಪ್ರಯತ್ನಿಸಿದವು; ಆದರೆ ಇನ್ನೂ ಎರಡೂ ದೇಶಗಳಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಪಾರ್ವತನೇನಿ ಹರೀಶ್ ಅವರು ಭಾರತದ ನಿಲುವನ್ನು ಮಂಡಿಸಿದರು. ಆಗ ಪಾರ್ವತನೇನಿ ಹರೀಶ್ ಅವರು  ಮುಂದಿನಂತೆ ಹೇಳಿದರು, “ನಾವು ವಿಶ್ವಸಂಸ್ಥೆಯ ನಿಯಮಗಳು ಮತ್ತು ಅಂತರರಾಷ್ಟ್ರೀಯ ಕಾನೂನುಗಳಿಗೆ ಸಂಪೂರ್ಣ ಗೌರವ ನೀಡುವ ಮತ್ತು ನಿರಪರಾಧಿ ನಾಗರಿಕರ ರಕ್ಷಣೆಯ ಬೇಡಿಕೆಗಳನ್ನು ಬೆಂಬಲಿಸುತ್ತೇವೆ. ಇಂತಹ ಕೃತ್ಯಗಳು ವಿಶ್ವ ವ್ಯಾಪಾರ ಸಂಸ್ಥೆಯ (WTO) ನಿಯಮಗಳ ಉಲ್ಲಂಘನೆಯಾಗಿದೆ ಮತ್ತು ಕಠಿಣ ಪರಿಸ್ಥಿತಿಯಲ್ಲಿ ಪುನರ್ನಿರ್ಮಾಣಕ್ಕಾಗಿ ಹೋರಾಡುತ್ತಿರುವ ಅಸುರಕ್ಷಿತ ರಾಷ್ಟ್ರದ ವಿರುದ್ಧ ಬಹಿರಂಗ ಬೆದರಿಕೆಗಳು ಮತ್ತು ಯುದ್ಧದ ಕೃತ್ಯಗಳಾಗಿವೆ.” ಇದರೊಂದಿಗೆ, ಅಫ್ಘಾನಿಸ್ತಾನದ ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯಕ್ಕೆ ನಮ್ಮ ದೃಢ ಬೆಂಬಲ ಇರುತ್ತದೆ.