ಜಮೀಯತ್ ಉಲೇಮಾ-ಎ-ಹಿಂದ್ ನ ಅಧ್ಯಕ್ಷ ಮೌಲಾನಾ ಅರ್ಶದ ಮದನಿ ಅವರ ಹೇಳಿಕೆ

ದೇವಬಂದ (ಉತ್ತರಪ್ರದೇಶ): ಪ್ರಾಣ ಬಿಡುತ್ತೇನೆ; ಆದರೆ ‘ವಂದೇ ಮಾತರಂ’ ಹೇಳುವುದಿಲ್ಲ. ನಾವು ಇತರರಿಗೆ ಈ ರಾಷ್ಟ್ರಗೀತೆಯನ್ನು ಓದುವುದಕ್ಕೆ ಅಥವಾ ಹಾಡುವುದಕ್ಕೆ ಆಕ್ಷೇಪಿಸುವುದಿಲ್ಲ; ಆದರೆ ಮುಸಲ್ಮಾನರು ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ, ಎಂದು ಇಲ್ಲಿನ ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಶದ ಮದನಿ ಅವರು ಹೇಳಿಕೆ ನೀಡಿದರು.
ಮದನಿ ಅವರು ಮಂಡಿಸಿದ ಅಂಶಗಳು
೧. ‘ವಂದೇ ಮಾತರಂ’ ಗೀತೆಯ ಕೆಲವು ಭಾಗ ಇಸ್ಲಾಂಗೆ ವಿರುದ್ಧವಿರುವ ನಂಬಿಕೆಗಳನ್ನು ಆಧರಿಸಿದೆ. ಗೀತೆಯ ೪ ಪದ್ಯಗಳಲ್ಲಿ ದೇಶವನ್ನು ದೇವರೆಂದು ಭಾವಿಸಿ, ಅದನ್ನು ದೇವತೆಗೆ ಹೋಲಿಸುವುದು ಮತ್ತು ಪೂಜಿಸುವುದು ಮುಂತಾದ ಪದಗಳನ್ನು ಬಳಸಲಾಗಿದೆ. ಇದು ಮುಸಲ್ಮಾನರ ಮೂಲಭೂತ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿಲ್ಲ.
೨. ದೇಶವನ್ನು ಪ್ರೀತಿಸುವುದು ಒಂದು ವಿಷಯ, ಮತ್ತು ಅದನ್ನು ಪೂಜಿಸುವುದು ಬೇರೆ ವಿಷಯ. ಮುಸಲ್ಮಾನರು ಅಲ್ಲಾನನ್ನು ಮಾತ್ರ ಪ್ರಾರ್ಥಿಸಬಹುದು. ಆದ್ದರಿಂದ ನಮಗೆ ಮರಣ ಸ್ವೀಕಾರವಿದೆ; ಆದರೆ ಅಲ್ಲಾಹನ ಜೊತೆಗೆ ಬೇರೆ ಯಾರಿಗೂ ಸಮಾನ ಸ್ಥಾನ ನೀಡುವುದನ್ನು ಒಪ್ಪಲಾರೆವು.
೩. ‘ವಂದೇ ಮಾತರಂ’ ಎಂದರೆ ‘ಅಮ್ಮಾ, ನಾನು ನಿನ್ನನ್ನು ಪೂಜಿಸುತ್ತೇನೆ’ ಎಂದರ್ಥ. ಇದು ಮುಸಲ್ಮಾನರ ಶ್ರದ್ಧೆಗೆ ಹೊಂದಿಕೆಯಾಗುವುದಿಲ್ಲ. ಅದಕ್ಕಾಗಿಯೇ ಯಾರಿಗೂ ಅವರ ಧರ್ಮಕ್ಕೆ ವಿರುದ್ಧವಾದ ಯಾವುದೇ ಘೋಷಣೆ ಅಥವಾ ಗೀತೆಯನ್ನು ಹೇಳಲು ಒತ್ತಾಯಿಸಲು ಸಾಧ್ಯವಿಲ್ಲ.
೪. ಸಂವಿಧಾನದ ಕಲಂ ೨೫ (ಧಾರ್ಮಿಕ ಸ್ವಾತಂತ್ರ್ಯ) ಮತ್ತು ಕಲಂ ೧೯ (ಅಭಿವ್ಯಕ್ತಿ ಸ್ವಾತಂತ್ರ್ಯ) ರ ಅಡಿಯಲ್ಲಿ, ನಾಗರಿಕರ ಮೇಲೆ ಇಂತಹ ಒತ್ತಡ ಹೇರುವುದು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ.
೫. ಮುಸಲ್ಮಾನರು ತಮ್ಮ ದೇಶಭಕ್ತಿಯ ಯಾವುದೇ ಪ್ರಮಾಣಪತ್ರವನ್ನು ಪಡೆಯುವ ಅಗತ್ಯವಿಲ್ಲ. ಸ್ವಾತಂತ್ರ್ಯದ ಹೋರಾಟದಲ್ಲಿ ಮತ್ತು ದೇಶದ ವಿಭಜನೆಯ ವಿರುದ್ಧ ಜಮೀಯತ್ ಉಲೇಮಾ-ಎ-ಹಿಂದ್ ಈಗಾಗಲೇ ತನ್ನ ನಿಲುವನ್ನು ದಾಖಲಿಸಿದೆ.
೬. ವರ್ಷ ೧೯೩೭ ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ನೆಹರೂ ಅವರಿಗೆ: ‘ವಂದೇ ಮಾತರಂ’ನ ಮೊದಲ ಎರಡು ಪದ್ಯಗಳನ್ನು ಮಾತ್ರ ರಾಷ್ಟ್ರಗೀತೆಯಾಗಿ ಸ್ವೀಕರಿಸಬೇಕು; ಏಕೆಂದರೆ ಉಳಿದ ಭಾಗದ ಬಗ್ಗೆ ಇತರ ಧರ್ಮದವರಿಗೆ ಆಕ್ಷೇಪ ಇರಬಹುದು ಎಂದು ಸಲಹೆ ನೀಡಿದ್ದರು. ಇದೇ ಶಿಫಾರಸ್ಸಿನ ಪ್ರಕಾರ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯು ಮೊದಲ ೨ ಪದ್ಯಗಳಿಗೆ ಸಮ್ಮತಿ ನೀಡಿತ್ತು. ಇಂದು ಟ್ಯಾಗೋರ್ ಅವರ ಹೆಸರಿನಲ್ಲಿ ಸಂಪೂರ್ಣ ಗೀತೆಯನ್ನು ಓದುವ ಬೇಡಿಕೆಯು ಐತಿಹಾಸಿಕ ಸಂಗತಿಗಳ ವಿರುದ್ಧವಾಗಿದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!