‘ಸನ್‌ಬರ್ನ್ ಫೆಸ್ಟಿವಲ್’ ವಿರುದ್ಧ ‘ನಶಾ ವಿರೋಧಿ ಸಂಘರ್ಷ ಅಭಿಯಾನ’ದ ಜಾಗೃತಿ ಅಭಿಯಾನ ಆರಂಭ !

ಭಾಂಡೂಪ್ (ಮುಂಬಯಿ) – ‘ಸನ್‌ಬರ್ನ್ ಫೆಸ್ಟಿವಲ್’ ವಿರುದ್ಧ ಭಾಂಡೂಪ್ ಪಶ್ಚಿಮದ ಶಿವಸೇನೆ ಶಾಸಕರಾದ ಅಶೋಕ ಪಾಟೀಲ್ ಅವರಿಗೆ ‘ನಶಾ ವಿರೋಧಿ ಸಂಘರ್ಷ ಅಭಿಯಾನ’ದ ವತಿಯಿಂದ ಸತೀಶ ಸೋನಾರ್ ಅವರು ಮನವಿ ಸಲ್ಲಿಸಿದರು. “ಸಮಯ ಸಿಕ್ಕರೆ, ನಾನು ನನ್ನ ಕೆಲವು ಸಹೋದ್ಯೋಗಿಗಳ ಸಹಾಯದಿಂದ ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಪ್ರಯತ್ನಿಸುತ್ತೇನೆ,” ಎಂದು ಪಾಟೀಲ್ ಅವರು ಭರವಸೆ ನೀಡಿದರು.
ಭಾಜಪ ಶಾಸಕರಾದ ಮಿಹೀರ್ ಕೋಟೆಚಾ ಅವರಿಗೂ ಈ ಕುರಿತು ಮನವಿ
ಶಿವಾಡಿಯಲ್ಲಿ ಡಿಸೆಂಬರ್ ೧೯ ರಿಂದ ೨೧ ರವರೆಗೆ ನಡೆಯಲಿರುವ ‘ಸನ್‌ಬರ್ನ್ ಫೆಸ್ಟಿವಲ್’ ವಿರುದ್ಧ ‘ನಶಾ ವಿರೋಧಿ ಸಂಘರ್ಷ ಅಭಿಯಾನ’ದಡಿಯಲ್ಲಿ ಸರಕಾರಿ ಕಚೇರಿಗಳು, ಜನಪ್ರತಿನಿಧಿಗಳು ಮತ್ತು ಸಾಮಾಜಿಕ ಸಂಸ್ಥೆಗಳಿಗೆ ಮನವಿಗಳನ್ನು ಸಲ್ಲಿಸಲಾಗುತ್ತಿದೆ. ಈ ಅಭಿಯಾನದ ಕಾರ್ಯಕರ್ತರು ಕಾಲೇಜುಗಳು, ಶಾಲೆಗಳು, ಟ್ಯೂಷನ್ ತರಗತಿಗಳು, ದೇವಸ್ಥಾನಗಳು, ಸಾರ್ವಜನಿಕ ಮಂಡಳಿಗಳು ಮತ್ತು ವಸತಿ ಸಂಕೀರ್ಣಗಳಿಗೆ ಭೇಟಿ ನೀಡಿ ಯುವಕರು ಮತ್ತು ಅವರ ಪೋಷಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
‘ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ದ ಕಾರ್ಯದರ್ಶಿಗಳಾದ ಲಕ್ಷ್ಮಣ್ ರಾವತ್ (ಎಡಭಾಗದಲ್ಲಿ) ಮತ್ತು ಉಪ ಕಾರ್ಯದರ್ಶಿಗಳಾದ ಸೌ. ವಂದನಾ ಜೈನ್ ಅವರಿಗೂ ಮನವಿ ಸಲ್ಲಿಸಲಾಯಿತು. ಸೌ. ಧನಶ್ರೀ ಕೇಳ್ಶಿಕರ್, ಸತೀಶ್ ಸೋನಾರ್ ಮತ್ತು ರವೀಂದ್ರ ದಸಾರಿ ಅವರು ಮನವಿ ಸಲ್ಲಿಸಿದರು.

೧. ‘ಫೆಸ್ಟಿವಲ್’ ಹೆಸರಿನಲ್ಲಿ ಮಾದಕ ವಸ್ತುಗಳು ಮತ್ತು ಅಶ್ಲೀಲತೆ ಹರಡುವ ಮೂಲಕ ಯುವಕರ ಜೀವನವನ್ನು ನಾಶಪಡಿಸುವ ಮತ್ತು ಸರಕಾರದ ಕೋಟ್ಯಂತರ ರೂಪಾಯಿಗಳ ತೆರಿಗೆಯನ್ನು ತಪ್ಪಿಸುವ ಉದ್ದೇಶ ಹೊಂದಿರುವ ಈ ‘ಸನ್‌ಬರ್ನ್ ಫೆಸ್ಟಿವಲ್’ ಅನ್ನು ಈ ವರ್ಷ ಮುಂಬಯಿನಲ್ಲಿ ಆಯೋಜಿಸಲಾಗುತ್ತಿದೆ.
೨. ಮಾದಕ ವಸ್ತುಗಳ ಬಳಕೆ, ಅಶ್ಲೀಲತೆ ಮತ್ತು ತೆರಿಗೆ ವಂಚನೆಯಂತಹ ವಿವಾದಾತ್ಮಕ ಇತಿಹಾಸವಿದ್ದರೂ, “ಇಂತಹ ಕಾರ್ಯಕ್ರಮಗಳಿಗೆ ಅನುಮತಿ ಸಿಗುವುದು ಹೇಗೆ?” ಎಂಬುದು ಪ್ರಶ್ನೆಯಾಗಿದೆ.
೩. ದೇಶದ ಯುವಶಕ್ತಿ ಮತ್ತು ಸಂಸ್ಕೃತಿಯನ್ನು ನಾಶಪಡಿಸಲು ಪ್ರಯತ್ನಿಸುತ್ತಿರುವ ಮತ್ತು ಕೋಟ್ಯಂತರ ರೂಪಾಯಿಗಳ ತೆರಿಗೆ ವಂಚನೆ ಮಾಡುವಂತಹ ಈ ಕಾರ್ಯಕ್ರಮಕ್ಕೆ ಸಮಾಜದಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ‘ನಶಾ ವಿರೋಧಿ ಸಂಘರ್ಷ ಅಭಿಯಾನ’ದ ಕಾರ್ಯಕರ್ತರ ಅಭಿಪ್ರಾಯವಾಗಿದೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !