(ಅಮೆರಿಕದ ರಕ್ಷಣಾ ಇಲಾಖೆಯ ಮುಖ್ಯ ಕಟ್ಟಡವನ್ನು ‘ಪೆಂಟಗಾನ್’ ಎಂದು ಕರೆಯುತ್ತಾರೆ)

ವಾಷಿಂಗ್ಟನ್ (ಅಮೆರಿಕ) – ಪಾಕಿಸ್ತಾನದೊಂದಿಗೆ ಆತ್ಮೀಯ ಸಂಬಂಧಗಳನ್ನು ಇಟ್ಟುಕೊಳ್ಳುವುದರಲ್ಲಿ ಯಾವುದೇ ಕಾರ್ಯತಂತ್ರದ ಅರ್ಥವಿಲ್ಲ. ಭಯೋತ್ಪಾದನೆಯ ವಿಷಯದ ಮೇಲೆ ಅಮೆರಿಕ ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕು; ಏಕೆಂದರೆ ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತದೆ ಮತ್ತು ಅವರನ್ನು ಭಾರತದ ವಿರುದ್ಧ ಬಳಸುತ್ತದೆ. ಅಲ್ಲದೆ, ಅಮೆರಿಕ, ಪಾಕಿಸ್ತಾನದ ಹೊಗಳಿಕೆಯನ್ನು ತಪ್ಪಿಸಬೇಕು. ಪಾಕಿಸ್ತಾನವನ್ನು ‘ಭಯೋತ್ಪಾದನೆಯನ್ನು ಪ್ರಾಯೋಜಿಸುವ ದೇಶ’ ಎಂದು ಘೋಷಿಸುವುದು ಸರಿಯಾದ ಹೆಜ್ಜೆಯಾಗಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರು ಅಮೆರಿಕಕ್ಕೆ ಬಂದರೆ, ಅವರನ್ನು ಗೌರವಿಸದೆ ಬಂಧಿಸಬೇಕು ಎಂದು ಅಮೆರಿಕದ ‘ಪೆಂಟಗಾನ್’ ಮಾಜಿ ಅಧಿಕಾರಿ ಮೈಕಲ್ ರೂಬಿನ್ ಒತ್ತಾಯಿಸಿದ್ದಾರೆ. ಅವರು ಭಾರತೀಯ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
ಅಮೆರಿಕ ಭಾರತದ ಕ್ಷಮೆ ಕೇಳಬೇಕು!
ರೂಬಿನ್ ಅವರು ಮಾತು ಮುಂದುವರೆಸಿ, ಕೆಲವು ನಿರ್ಧಾರಗಳನ್ನು ಶಾಂತಿಯುತವಾಗಿ, ಪರದೆಯ ಹಿಂದೆ ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಅಮೆರಿಕ ಭಾರತದೊಂದಿಗೆ ನಡೆದುಕೊಂಡ ರೀತಿಗಾಗಿ ಬಹಿರಂಗವಾಗಿ ಕ್ಷಮೆಯಾಚಿಸುವುದು ಸಹ ಅಗತ್ಯವಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಷಮೆ ಕೇಳುವ ಮನಸ್ಥಿತಿಯಲ್ಲಿಲ್ಲದಿದ್ದರೂ, ಪ್ರಜಾಪ್ರಭುತ್ವ ಜಗತ್ತಿನ ಹಿತಾಸಕ್ತಿ ಒಬ್ಬ ವ್ಯಕ್ತಿಯ ಅಹಂಕಾರಕ್ಕಿಂತ ದೊಡ್ಡದಾಗಿದೆ.
"No strategic logic for US to embrace Pakistan, should designate them as state sponsor of terrorism": Former Pentagon official
Read@ANI Story | https://t.co/lJJFdoPGwd #US #Pakistan #MichaelRubin pic.twitter.com/H1u0oI32Yu— ANI Digital (@ani_digital) December 6, 2025
ಟ್ರಂಪ್ ಅವರ ವೈಫಲ್ಯದಿಂದ ಭಾರತ ಮತ್ತು ರಷ್ಯಾ ಹತ್ತಿರವಾಗುತ್ತಿವೆ!
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೈಫಲ್ಯದಿಂದಲೇ ಭಾರತ ಮತ್ತು ರಷ್ಯಾ ಹತ್ತಿರವಾಗುತ್ತಿವೆ ಎಂದು ರೂಬಿನ್ ಹೇಳಿದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ನಿರಂತರ ಇಂಧನ ಪೂರೈಕೆ ಮಾಡುವ ಭರವಸೆ ನೀಡಿದ್ದಾರೆ. ಇನ್ನೊಂದೆಡೆ, ಟ್ರಂಪ್ ಅವರ ನೀತಿಗಳಿಂದ ಅಮೆರಿಕದ ನಾಗರಿಕರಿಗೆ ಆಘಾತ ಉಂಟಾಗಿದೆ. ಇದರಿಂದ ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ಸಂಬಂಧಗಳು ಹದಗೆಟ್ಟಿವೆ. ಹಾಗೆಯೇ, ಇದೆಲ್ಲವೂ ಪಾಕಿಸ್ತಾನದ ಓಲೈಕೆಯ (ಸ್ವಾರ್ಥಕ್ಕಾಗಿ ಸುಳ್ಳು ಹೊಗಳಿಕೆ ಮಾಡುವ) ನೀತಿಯಿಂದಲೇ ಆಗಿರಬಹುದೆ? ಎಂದು ರೂಬಿನ್ ಪ್ರಶ್ನಿಸಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation