
ಇಸ್ಲಾಮಾಬಾದ್ (ಪಾಕಿಸ್ತಾನ) – ಚೀನಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಸಂಬಂಧಿಸಿದ ಪ್ರತಿಯೊಂದು ಸೂತ್ರದಲ್ಲೂ ಪಾಕಿಸ್ತಾನವು ಚೀನಾಕ್ಕೆ ನಿರಂತರವಾಗಿ ಬೆಂಬಲಿಸುತ್ತದೆ, ಹೀಗೆ ಹೇಳುವ ಮೂಲಕ ಪಾಕಿಸ್ತಾನವು ಮತ್ತೊಮ್ಮೆ ಅರುಣಾಚಲ ಪ್ರದೇಶದ ಮೇಲಿನ ಚೀನಾದ ಹಕ್ಕಿಗೆ ಬಹಿರಂಗವಾಗಿ ಬೆಂಬಲ ನೀಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಾಹೀರ್ ಅಂದ್ರಾಬಿ ಅವರು ಡಿಸೆಂಬರ್ ೫ ರಂದು ಪತ್ರಿಕಾಗೋಷ್ಠಿಯಲ್ಲಿ ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಈ ಹೇಳಿಕೆ ನೀಡಿದರು.
🇵🇰🤝🇨🇳 Pakistan Backs China’s Claim on Arunachal Pradesh
In response to this hostile duo, many Indians believe it’s time for India to correct Nehru’s historic blunder and tell the world loud and clear:
🇹🇧 “China swallowed Tibet – it must be freed from Beijing’s grip.”🔎 This… pic.twitter.com/98E0nqMqDy
— Sanatan Prabhat (@SanatanPrabhat) December 6, 2025
ಅರುಣಾಚಲ ಪ್ರದೇಶದ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯವು ನೀಡಿದ ಹೇಳಿಕೆಗಳ ಕುರಿತು ಅಂದ್ರಾಬಿಯವರಿಗೆ ಪ್ರಶ್ನೆ ಕೇಳಲಾಗಿತ್ತು. ಚೀನಾವು ನವೆಂಬರ್ ೨೫ ರಂದು ಅರುಣಾಚಲ ಪ್ರದೇಶವು ತನ್ನ ಭಾಗ ಎಂದು ಹೇಳಿತ್ತು. ಇದಕ್ಕೆ ಭಾರತದ ವಿದೇಶಾಂಗ ಸಚಿವಾಲಯವು ‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ಚೀನಾವು ಎಷ್ಟೇ ನಿರಾಕರಿಸಿದರೂ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ಪ್ರತ್ಯುತ್ತರ ನೀಡಿತ್ತು.
ಸಂಪಾದಕೀಯ ನಿಲುವುಪಾಕಿಸ್ತಾನ ಮತ್ತು ಚೀನಾ ಈ ಜೋಡಿಗೆ ಪ್ರತ್ಯುತ್ತರ ನೀಡುವುದಕ್ಕಾಗಿ ಭಾರತವು ಈಗ ನೆಹರೂ ಅವರ ತಪ್ಪನ್ನು ಸರಿಪಡಿಸಬೇಕು ಮತ್ತು ‘ಚೀನಾವು ಟಿಬೆಟ್ ಅನ್ನು ನುಂಗಿರುವುದರಿಂದ ಅದನ್ನು ಚೀನಾದ ಹಿಡಿತದಿಂದ ಬಿಡಿಸಿ’ ಎಂದು ಜಗತ್ತಿಗೆ ಕರೆ ನೀಡಬೇಕು ಮತ್ತು ಈ ಸೂತ್ರವನ್ನು ನಿರಂತರವಾಗಿ ಮಂಡಿಸಬೇಕು! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara