ಸಾಮಾಜಿಕ ಮಾಧ್ಯಮಗಳ ಮೂಲಕ ಹಿಂದೂ ದೇವರುಗಳ ಅವಮಾನವನ್ನು ತಡೆಯಲು ‘ಹಿಂದೂ ಆಸ್ಥಾ (ಶ್ರದ್ಧೆ) ಸಂರಕ್ಷಣಾ ಕಾಯ್ದೆ’ ಜಾರಿಗೊಳಿಸಿ! – Hindu Faith Protection Act

ಪುಣೆಯ ಭಾಜಪ ಸಂಸದೆ ಮೇಧಾ ಕುಲಕರ್ಣಿ ಅವರಿಂದ ಲೋಕಸಭೆಯಲ್ಲಿ ಆಗ್ರಹದ ಬೇಡಿಕೆಗಳು

ನವದೆಹಲಿ – ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ದೇವರುಗಳ ವಿರುದ್ಧ ಎಐ ನಿಂದ ರಚಿತವಾದ ಮತ್ತು ಬದಲಾಯಿಸಿದ ಅಶ್ಲೀಲ ಚಿತ್ರಗಳ ವ್ಯಾಪಕ ಬಳಕೆಯಾಗುತ್ತಿದೆ. ಇದು ಸುಸಂಘಟಿತ ಪಿತೂರಿಯಾಗಿದ್ದು, ಇದರ ಉದ್ದೇಶ ಕೇವಲ ಹಿಂದೂಗಳ ಶ್ರದ್ಧೆಗಳನ್ನು ತುಳಿಯುವುದು, ಸಾಂಸ್ಕೃತಿಕ ಏಕತೆಯನ್ನು ದುರ್ಬಲಗೊಳಿಸುವುದು ಮತ್ತು ದೇಶದಲ್ಲಿ ಧಾರ್ಮಿಕ ಉದ್ವಿಗ್ನತೆಯನ್ನು ಸೃಷ್ಟಿಸುವುದು ಆಗಿದೆ. ತಂತ್ರಜ್ಞಾನದ ದುರುಪಯೋಗದಿಂದ ಉಂಟಾದ ಈ ಹೊಸ ಸವಾಲನ್ನು ಎದುರಿಸಲು ಸರಕಾರವು ತಕ್ಷಣವೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪುಣೆಯ ಭಾಜಪ ಸಂಸದೆ ಮೇಧಾ ಕುಲಕರ್ಣಿ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಮಾತನಾಡುತ್ತಾ ಆಗ್ರಹಿಸಿದರು. ಸಂಸದೆ ಕುಲಕರ್ಣಿ ಅವರು ಡಿಜಿಟಲ್ ವೇದಿಕೆಗಳಲ್ಲಿ ಧಾರ್ಮಿಕ ವಿಷಯಗಳನ್ನು ರಚಿಸುವಾಗ ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ‘ಎಐ’ (ಕೃತಕ ಬುದ್ಧಿಮತ್ತೆ) ಮೂಲಕ ನಡೆಯುತ್ತಿರುವ ಧಾರ್ಮಿಕ ಮಾನಹಾನಿಯ ವಿರುದ್ಧ ‘ಹಿಂದೂ ಆಸ್ಥಾ (ಶ್ರದ್ಧೆ) ಸಂರಕ್ಷಣಾ ಕಾಯ್ದೆ’ಯನ್ನು ತಕ್ಷಣವೇ ರೂಪಿಸಬೇಕು ಎಂದು ಸಹ ಬೇಡಿಕೆ ಇಟ್ಟರು.

ಮಾಂಸೇತರ ವಸ್ತುಗಳ ಮೇಲಿನ ಹಲಾಲ್ ಪ್ರಮಾಣೀಕರಣವನ್ನು ತೆಗೆದುಹಾಕಿ! – ಸಂಸದೆ ಮೇಧಾ ಕುಲಕರ್ಣಿ ಅವರ ಬೇಡಿಕೆ

ಮಾಂಸೇತರ ವಸ್ತುಗಳ ಮೇಲಿನ ಹಲಾಲ್ ಪ್ರಮಾಣೀಕರಣವನ್ನು ತೆಗೆದುಹಾಕುವಂತೆ ಸಂಸದೆ ಮೇಧಾ ಕುಲಕರ್ಣಿ ಅವರು ಲೋಕಸಭೆಯಲ್ಲಿ ಆಗ್ರಹಿಸಿದರು. ಅವರು, ‘ಹಲಾಲ್’ ಎಂಬ ಪದವು ನಿರ್ದಿಷ್ಟ ಧರ್ಮ ಮತ್ತು ನಂಬಿಕೆಗೆ ಸಂಬಂಧಿಸಿದ ಒಂದು ಪರಿಕಲ್ಪನೆಯಾಗಿದೆ, ಇದು ಕೇವಲ ಮಾಂಸಾಹಾರಕ್ಕೆ ಸಂಬಂಧಿಸಿದೆ. ಭಾರತವು ಒಂದು ಜಾತ್ಯತೀತ ದೇಶವಾಗಿದೆ. ಭಾರತದಲ್ಲಿ ಹಲಾಲ್‌ನ ವಿರುದ್ಧ ಮತ್ತು ವಿರುದ್ಧವಾದ ನಂಬಿಕೆಗಳನ್ನು ಹೊಂದಿರುವ ಇತರ ಧರ್ಮಗಳ ಜನರು ಸಹ ವಾಸಿಸುತ್ತಾರೆ. ಅಂತಹ ಮಾಂಸಾಹಾರಿಗಳ ಮೇಲೆ ಹಲಾಲ್ ಪ್ರಮಾಣೀಕೃತ ಮಾಂಸಾಹಾರವನ್ನು ಹೇರುವುದು, ಜಾತ್ಯತೀತ ದೇಶದಲ್ಲಿ ಸರಿಯೆನಿಸುವುದಿಲ್ಲ ಮತ್ತು ಇದು ಸಂವಿಧಾನದ ವಿರುದ್ಧವಾಗಿದೆ. ಮಾಂಸೇತರ ಪದಾರ್ಥಗಳಿಗೆ ಹಲಾಲ್ ಪ್ರಮಾಣೀಕರಣದ ಅಗತ್ಯ ಏಕೆ? ಹಾಲು, ಸಕ್ಕರೆ, ಎಣ್ಣೆ ಮುಂತಾದ ಆಹಾರ ಪದಾರ್ಥಗಳು, ಔಷಧಿಗಳು, ಸೌಂದರ್ಯವರ್ಧಕ ಸಾಮಗ್ರಿಗಳಿಗೆ ಪ್ರಮಾಣೀಕರಣದ ಅಗತ್ಯ ಏಕೆ? ಅಷ್ಟೇ ಅಲ್ಲದೆ, ನಿರ್ಮಾಣ ಸಾಮಗ್ರಿಗಳು, ಸಿಮೆಂಟ್, ಸ್ಟೀಲ್, ಪ್ಲಾಸ್ಟಿಕ್ ಮತ್ತು ಖನಿಜ ಸೈಟ್‌ಗಳಿಗೆ ಸಹ ಹಲಾಲ್ ಪ್ರಮಾಣಪತ್ರ ನೀಡುವುದು ತರ್ಕಬಾಹಿರ ಮತ್ತು ಅನುಮಾನಗಳನ್ನು ಹುಟ್ಟುಹಾಕುತ್ತದೆ. ಭಾರತದಲ್ಲಿ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ’ (FSSAI – ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ)ವು ಆಹಾರ ಪ್ರಮಾಣೀಕರಣದ ಅಧಿಕಾರವನ್ನು ಹೊಂದಿದೆ. ಔಷಧಿಗಳಿಗಾಗಿಯೂ ‘FDI’ (ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ – ಆಹಾರ ಮತ್ತು ಔಷಧ ಆಡಳಿತ) ಎಂಬ ಸರಕಾರಿ ಪ್ರಮಾಣೀಕರಣ ವ್ಯವಸ್ಥೆ ಇದೆ. ಇಂತಹ ವ್ಯವಸ್ಥೆಗಳಿರುವಾಗ, ಯಾವುದೇ ಧಾರ್ಮಿಕ ಸಂಸ್ಥೆಗೆ ಅಂತಹ ಅಧಿಕಾರ ಏಕೆ ಇರಬೇಕು? ಹಲಾಲ್ ಇಂಡಿಯಾ ಲಿಮಿಟೆಡ್, ಹಲಾಲ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜಮಿಯತ್ ಉಲೇಮಾ-ಎ-ಹಿಂದ್ ಹಲಾಲ್ ಟ್ರಸ್ಟ್, ಜಮಿಯತ್ ಉಲೇಮಾ-ಎ-ಮಹಾರಾಷ್ಟ್ರ ಮುಂತಾದ ಧಾರ್ಮಿಕ ಸಂಸ್ಥೆಗಳು ಪ್ರಮಾಣೀಕರಣ ನೀಡಿ ಶುಲ್ಕವನ್ನು ತೆಗೆದುಕೊಳ್ಳುತ್ತಿವೆ. ಏಕೆ? ಮತ್ತು ಅವರು ಆಹಾರ ತಜ್ಞರೂ ಅಲ್ಲ. ೭೦ ರಿಂದ ೮೦ ಇಂತಹ ನಕಲಿ ಸಂಸ್ಥೆಗಳು ಪತ್ತೆಯಾಗಿವೆ, ಅವು ಸುಳ್ಳು ಪ್ರಮಾಣಪತ್ರಗಳನ್ನು ನೀಡುತ್ತಿವೆ, ಅವುಗಳ ಮೇಲೆ ಉತ್ತರಪ್ರದೇಶ ರಾಜ್ಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ಸಂಸದೆ ಮೇಧಾ ಕುಲಕರ್ಣಿ ಅವರು ಈ ಸಮಯದಲ್ಲಿ ಇಟ್ಟಿರುವ ಬೇಡಿಕೆಗಳು

೧. ಹಲಾಲ್‌ನಲ್ಲಿ ನಂಬಿಕೆ ಇರುವ ಸಮುದಾಯದ ಅನುಕೂಲಕ್ಕಾಗಿ ಮಾಂಸ ಉತ್ಪನ್ನಗಳ ಮೇಲೆ ಹಲಾಲ್ ಪ್ರಮಾಣಪತ್ರ ನೀಡಬೇಕಿದ್ದರೆ, FSSAI, FDI ಅಡಿಯಲ್ಲಿ ಸರಕಾರಿ ವ್ಯವಸ್ಥೆಯನ್ನು ಸ್ಥಾಪಿಸಬೇಕು ಮತ್ತು ಪ್ರಮಾಣೀಕರಣದ ಶುಲ್ಕವು ಸರಕಾರಿ ಖಜಾನೆಗೆ ಜಮಾ ಆಗಬೇಕು.

೨. ಖಾಸಗಿ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳಿಗೆ ಪ್ರಮಾಣೀಕರಣ ಮಾಡುವ ಅಧಿಕಾರವನ್ನು ತಕ್ಷಣವೇ ರದ್ದುಗೊಳಿಸಬೇಕು.

೩. ಅಗತ್ಯಕ್ಕೆ ಅನುಗುಣವಾಗಿ ಇಸ್ಲಾಂ ಧರ್ಮದ ಒಬ್ಬ ತಜ್ಞ ಸದಸ್ಯರನ್ನು ಸರಕಾರವು ವೇತನ ನೀಡಿ ನೇಮಿಸಬಹುದು, ಅವರು ಸರಕಾರಿ ತಜ್ಞರ ಸಮಿತಿಯೊಂದಿಗೆ ಕೆಲಸ ಮಾಡುತ್ತಾರೆ.

೪. ಈ ಪ್ರಮಾಣೀಕರಣಕ್ಕೆ ಸಂಬಂಧಿಸಿದ ಶುಲ್ಕದ ಮೊತ್ತವು ಸರಕಾರಿ ಖಜಾನೆಗೆ ಜಮಾ ಆಗಬೇಕು.

೫. ನಕಲಿ ಸಂಸ್ಥೆಗಳು, ಹಾಗೆಯೇ ದೇಶದ್ರೋಹಕ್ಕೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕು. ೬. ಮಾಂಸೇತರ ವಸ್ತುಗಳ ಮೇಲಿನ ಹಲಾಲ್ ಪ್ರಮಾಣೀಕರಣವನ್ನು ತೆಗೆದುಹಾಕಬೇಕು.

ಸಂಪಾದಕೀಯ ನಿಲುವು

 ಮೂಲತಃ ಸರಕಾರಕ್ಕೆ ಯಾರೂ ಇದನ್ನು ಹೇಳುವ ಅಗತ್ಯವಿಲ್ಲ, ಹಿಂದೂ ದೇವರುಗಳ ರಕ್ಷಣೆಗಾಗಿ ಸರಕಾರವು ಸ್ವತಃ ಕಾನೂನನ್ನು ಮಾಡುವುದು ನಿರೀಕ್ಷಿತವಾಗಿದೆ!