
ನವದೆಹಲಿ – ಮಂದಿರದ ನಿಧಿಯನ್ನು ತೊಂದರೆಯಲ್ಲಿರುವ ಸಹಕಾರಿ ಬ್ಯಾಂಕಿನಲ್ಲಿ ಠೇವಣಿಯಾಗಿ ಇರಿಸಿ ಬ್ಯಾಂಕಿಗೆ ಆಧಾರ ನೀಡುವುದು ಸರಿಯಲ್ಲ. ಈ ನಿಧಿಯು ಸುರಕ್ಷಿತವಾಗಿ, ಸಂರಕ್ಷಿತವಾಗಿರಬೇಕು ಮತ್ತು ಮಂದಿರದ ಹಿತಾಸಕ್ತಿಗಾಗಿ ಮಾತ್ರ ಬಳಸಬೇಕು. ಸಹಕಾರಿ ಬ್ಯಾಂಕಿನ ಆದಾಯದ ಅಥವಾ ಬ್ಯಾಂಕ್ ಆದಾಯ ಉಳಿಸುವ ದೃಷ್ಟಿಯಿಂದ ಮಂದಿರದ ನಿಧಿ ಉಪಯೋಗವಾಗಬಾರದೆಂದು ಸರ್ವೋಚ್ಚ ನ್ಯಾಯಾಲಯ ಒಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ ಸ್ಪಷ್ಟಪಡಿಸಿತು.
🔥Supreme Court Draws Lakshman Rekha on Temple Money 🔥
🛑 Supreme Court on Thirunelly Temple Deposits
🛕"Temple money belongs to the deity – it cannot be used to support cooperative banks."
🔹 Funds must stay safe & be used only for temple purposes
🔹 Diverting deposits to… pic.twitter.com/kBH3heOOIx
— Sanatan Prabhat (@SanatanPrabhat) December 5, 2025
೧. ಕೇರಳದ ತಿರುನೆಲ್ಲಿ ಮಂದಿರ ದೇವಸ್ಥಾನದಲ್ಲಿ ಇರಿಸಿದ್ದ ಮುದ್ದತ್ ಠೇವಣಿಗಳನ್ನು ಹಿಂತಿರುಗಿಸುವಂತೆ ಕೇರಳ ಹೈಕೋರ್ಟ್ ನೀಡಿದ್ದ ಆದೇಶವನ್ನು ಅಲ್ಲಿನ ಕೆಲವು ಸಹಕಾರಿ ಬ್ಯಾಂಕುಗಳು ಸರ್ವೋಚ್ಚ ನ್ಯಾಯಾಲಯನಲ್ಲಿ ಪ್ರಶ್ನಿಸಿದ್ದವು. ಈ ಸಂಬಂಧಿತ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯಾ ಬಾಗ್ಚಿ ಅವರ ಪೀಠವು ನಡೆಸಿತು. ವಿಚಾರಣೆಯ ವೇಳೆ ನ್ಯಾಯಾಲಯವು ಈ ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ‘ಹೈಕೋರ್ಟ್ ನೀಡಿರುವ ನಿರ್ದೇಶನದಲ್ಲಿ ಏನು ತಪ್ಪಾಗಿದೆ?’ ಎಂಬ ಪ್ರಶ್ನೆಯನ್ನು ಎತ್ತಿತು.
೨. ಗ್ರಾಹಕರನ್ನು ಆಕರ್ಷಿಸುವಲ್ಲಿ ವಿಫಲವಾದರೆ ಅದು ಬ್ಯಾಂಕಿನ ಸಮಸ್ಯೆ!
ಸಹಕಾರಿ ಬ್ಯಾಂಕುಗಳ ಪರವಾಗಿ ವಕೀಲ ಮನು ಕೃಷ್ಣನ್ ಅವರು, ಹೈಕೋರ್ಟ್ ಎರಡು ತಿಂಗಳೊಳಗೆ ಠೇವಣಿಗಳನ್ನು ಇದ್ದಕ್ಕಿದ್ದಂತೆ ಹಿಂತಿರುಗಿಸುವಂತೆ ನೀಡಿದ ಆದೇಶವು ಕಷ್ಟವಾಗುತ್ತಿದೆ ಎಂದು ವಾದಿಸಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು, ‘ಜನರ ವಿಶ್ವಾಸವನ್ನು ಗಳಿಸುವುದು ಬ್ಯಾಂಕುಗಳ ಜವಾಬ್ದಾರಿಯಾಗಿದೆ. ಗ್ರಾಹಕರು ಮತ್ತು ಠೇವಣಿಗಳನ್ನು ಆಕರ್ಷಿಸುವಲ್ಲಿ ವಿಫಲವಾದರೆ, ಅದು ಬ್ಯಾಂಕಿನ ಸಮಸ್ಯೆಯಾಗಿದೆ,’ ಎಂದು ಹೇಳಿದರು.
ನ್ಯಾಯಮೂರ್ತಿ ಬಾಗ್ಚಿ ಅವರು ಮಾತನಾಡಿ, ‘ಮುದ್ದತ್ತು ಮುಗಿದ ನಂತರ ತಕ್ಷಣವೇ ಅದನ್ನು ಹಿಂತಿರುಗಿಸುವುದು ಬ್ಯಾಂಕಿನ ಕರ್ತವ್ಯವಾಗಿದೆ,’ ಎಂದು ಹೇಳಿದರು.
ನ್ಯಾಯಪೀಠವು ಸಹಕಾರಿ ಬ್ಯಾಂಕುಗಳ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿತು ಮತ್ತು ಅಗತ್ಯವಿದ್ದಲ್ಲಿ, ಮರುಪಾವತಿಗಾಗಿ ಗಡುವು ವಿಸ್ತರಣೆ ಪಡೆಯಲು ಹೈಕೋರ್ಟ್‌ಗೆ ಹೋಗಲು ಅರ್ಜಿದಾರರಿಗೆ ಅನುಮತಿ ನೀಡಿತು. ಮನಂಥವಾಡಿ ಕೋ-ಆಪರೇಟಿವ್ ಅರ್ಬನ್ ಸೊಸೈಟಿ ಮತ್ತು ತಿರುನೆಲ್ಲಿ ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್ ಈ ಅರ್ಜಿಗಳನ್ನು ಸಲ್ಲಿಸಿದ್ದವು.
ಸಂಪಾದಕೀಯ ನಿಲುವುಸರ್ವೋಚ್ಚ ನ್ಯಾಯಾಲಯನ ಈ ಆದೇಶವನ್ನು ಮೀರಿ, ಮಂದಿರಗಳ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಾರದು, ಹಾಗೆಯೇ ಮಂದಿರದ ಹೊರತಾದ ಯಾವುದೇ ಇತರೆ ಕೆಲಸಗಳಿಗೆ ಬಳಸಬಾರದೆಂಬ ಆದೇಶವನ್ನು ಸಹ ನೀಡುವುದು ಅವಶ್ಯಕವಾಗಿದೆ, ಎಂದು ಹಿಂದೂಗಳು ಭಾವಿಸುತ್ತಾರೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!