ಭಾರತ ವಿರೋಧಿ ಚಟುವಟಿಕೆಗಳಿಗಾಗಿ ಟರ್ಕಿಯಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಹಣ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆ. Turkey Anti India Activities

ನವದೆಹಲಿ – ಕಳೆದ ಕೆಲವು ವರ್ಷಗಳಿಂದ ಭಾರತವು ಭಯೋತ್ಪಾದನೆಯ ವಿರುದ್ಧ ದೃಢ ನಿಲುವು ತೆಗೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಕಾಶ್ಮೀರದ ಪಹಲ್ಗಾಮ್ ನಲ್ಲಿ ಮತ್ತು ದೆಹಲಿಯ ಕೆಂಪು ಕೋಟೆಯ ಬಳಿ ಭಯೋತ್ಪಾದಕ ದಾಳಿಗಳು ನಡೆದಿವೆ. ಈಗ ಗುಪ್ತ ಮೂಲಗಳ ಪ್ರಕಾರ, ಇಸ್ಲಾಮಿಕ್ ದೇಶವಾದ ಟರ್ಕಿಯು ಭಾರತ ವಿರೋಧಿ ಚಟುವಟಿಕೆಗಳಿಗಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

1. ಟರ್ಕಿ ಕಳೆದ ಕೆಲವು ದಿನಗಳಿಂದ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಸರಕಾರ ಪತನವಾದ ನಂತರ, ಈಗ ಬಾಂಗ್ಲಾದೇಶವೂ ಭಾರತದ ವಿರುದ್ಧ ನಿಲುವು ತೆಗೆದುಕೊಳ್ಳುತ್ತಿದೆ.

2. ಗುಪ್ತ ಮೂಲಗಳ ಮಾಹಿತಿಯ ಪ್ರಕಾರ, ಟರ್ಕಿ ಬಾಂಗ್ಲಾದೇಶದ ಇಸ್ಲಾಮಿಕ್ ಕಟ್ಟರವಾದಿ ಸಂಘಟನೆ ‘ಜಮಾತ್-ಎ-ಇಸ್ಲಾಮಿ’ಗೆ ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ನೆರವು ನೀಡುತ್ತಿದೆ. ಹಾಗೆಯೇ, ಬಾಂಗ್ಲಾದೇಶದ ಢಾಕಾದ ಮೊಘಬಜಾರ್ನಲ್ಲಿ ಜಮಾತ್-ಎ-ಇಸ್ಲಾಮಿಯ ಹೊಸ ಕಚೇರಿಯನ್ನು ಪ್ರಾರಂಭಿಸುವ ಜವಾಬ್ದಾರಿಯನ್ನು ಟರ್ಕಿಯ ಗುಪ್ತಚರ ಸಂಸ್ಥೆ ಹೊತ್ತುಕೊಂಡಿದೆ.

3. ಟರ್ಕಿಯ ಅಧ್ಯಕ್ಷರಾದ ತಯ್ಯಿಪ್ ಎರ್ಡೋಗನ್ ಅವರು ದಕ್ಷಿಣ ಏಷ್ಯಾದಲ್ಲಿ ಇಸ್ಲಾಮಿಕ್ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಟರ್ಕಿಯಿಂದ ಇಸ್ಲಾಮಿಕ್ ಸಂಘಟನೆಗಳಿಗೆ ದೊಡ್ಡ ಆರ್ಥಿಕ ನೆರವು ಪಡೆಯಲು ಬಾಂಗ್ಲಾದೇಶದ ʻಹೂಡಿಕೆ ಅಭಿವೃದ್ಧಿ ಪ್ರಾಧಿಕಾರʼ ಮುಖ್ಯಸ್ಥರಾದ ಆಶಿಕ್ ಚೌಧರಿ ಅವರು ಟರ್ಕಿಗೆ ಹೋಗಿದ್ದರು. ಅಲ್ಲಿ ಅವರು ಶಸ್ತ್ರಾಸ್ತ್ರ ಕಾರ್ಖಾನೆಗೆ ಭೇಟಿ ನೀಡಿದರು. ಅಲ್ಲಿ ಅವರ ಕೆಲವು ಸಭೆಗಳೂ ನಡೆದವು. ಟರ್ಕಿ ಮೂಲಭೂತವಾದಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ರೀತಿ ನೋಡಿದರೆ, ಇದು ಭಾರತದ ತ್ರಿಪುರಾ, ಮಿಜೋರಾಂ ಮತ್ತು ಮೇಘಾಲಯ ರಾಜ್ಯಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಗುಪ್ತ ಮಾಹಿತಿಯ ಪ್ರಕಾರ, ಟರ್ಕಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ – ಅಂತರಸೇವಾ ಗುಪ್ತಚರ ಸಂಸ್ಥೆ) ಗೆ ಹಣ ಪೂರೈಸುತ್ತಿದೆ.

4. ಟರ್ಕಿಯು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಮತ್ತು ವಿದ್ಯಾರ್ಥಿವೇತನ ನೀಡುವ ಹೆಸರಿನಲ್ಲಿ ಮೂಲಭೂತವಾದವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಬಾಂಗ್ಲಾದೇಶದ ವಿದ್ಯಾರ್ಥಿ ಸಂಘಟನೆಯ ನಾಯಕ ಸಾದಿಕ್ ಕೈಯ್ಯಮ್ ಕೂಡ ಟರ್ಕಿಗೆ ಭೇಟಿ ನೀಡಿದ್ದರು. ಬಾಂಗ್ಲಾದೇಶವನ್ನು ಬಳಸಿಕೊಂಡು ಭಾರತದಲ್ಲಿ ಭಯೋತ್ಪಾದನೆಯನ್ನು ಹರಡಲು ಟರ್ಕಿ ಪ್ರಯತ್ನಿಸುತ್ತಿದೆ. ಟರ್ಕಿಯ ಈ ಪಿತೂರಿ ಭಾರತೀಯ ಗುಪ್ತಚರ ಸಂಸ್ಥೆಗೆ ತಿಳಿದಿದ್ದು, ಭಾರತವು ಎಚ್ಚರಿಕೆಯ ನಿಲುವು ತೆಗೆದುಕೊಳ್ಳುತ್ತಿದೆ.

ಸಂಪಾದಕೀಯ ನಿಲುವು

ಭಾರತವು ಟರ್ಕಿಯ ವಿರುದ್ಧ ಕೇವಲ ಎಚ್ಚರಿಕೆಯ ನಿಲುವು ತೆಗೆದುಕೊಳ್ಳದೆ, ಅದಕ್ಕೂ ಸಹ ಪಾಠ ಕಲಿಸಬೇಕು!