ಪಾಕಿಸ್ತಾನದ ೧ ಸಾವಿರ ೮೧೭ ದೇವಸ್ಥಾನಗಳು ಮತ್ತು ಗುರುದ್ವಾರಗಳಲ್ಲಿ ಕೇವಲ ೩೭ ಸುಸ್ಥಿತಿಯಲ್ಲಿ ! – Pakistan Hindu Temple State

ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ದುರವಸ್ಥೆ

(ಈ ಚಿತ್ರವನ್ನು ಯಾರ ಭಾವನೆಗಳಿಗೂ ನೋವುಂಟು ಮಾಡಲು ಹಾಕಿಲ್ಲ, ಆದರೆ ಸಮಸ್ಯೆಯ ಗಂಭೀರತೆಯನ್ನು ತೋರಿಸಲು ಮಾತ್ರ ಹಾಕಲಾಗಿದೆ)

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸಂಸದೀಯ ಸಮಿತಿಯ ವರದಿಯಿಂದ ಅಲ್ಲಿನ ಹಿಂದೂ ಸಮುದಾಯದ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ಬಯಲಾಗಿದೆ. ಹಿಂದೂ ಮತ್ತು ಸಿಖ್ಖರ ಪೂಜಾ ಸ್ಥಳಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದ್ದು, ಪ್ರಸ್ತುತ ಅಸ್ತಿತ್ವದಲ್ಲಿರುವ ೧ ಸಾವಿರ ೮೧೭ ದೇವಸ್ಥಾನಗಳು ಮತ್ತು ಗುರುದ್ವಾರಗಳಲ್ಲಿ ಕೇವಲ ೩೭ ಮಾತ್ರ ಉತ್ತಮ ಸ್ಥಿತಿಯಲ್ಲಿವೆ. ೧ ಸಾವಿರದ ೮೧೭ ರಲ್ಲಿ ೧ ಸಾವಿರದ ೨೮೫ ದೇವಾಲಯಗಳು ಮತ್ತು ೩೨ ಗುರುದ್ವಾರಗಳಿವೆ. ಸರಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯ ಮತ್ತು ಹಿಂದೂ ಹಾಗೂ ಸಿಖ್ ಸಮುದಾಯದ ನಿರಂತರವಾಗಿ ಕಡಿಮೆಯಾಗುತ್ತಿರುವ ಜನಸಂಖ್ಯೆಯಿಂದಾಗಿ, ಇವುಗಳಲ್ಲಿ ಹಲವು ದೇವಸ್ಥಾನಗಳು ಮತ್ತು ಗುರುದ್ವಾರಗಳು ಬಿದ್ದು ಹೋಗುವ ಸ್ಥಿತಿಯಲ್ಲಿವೆ.

೧. ಈ ಸಂಬಂಧ ಸ್ಥಾಪಿಸಲಾದ ಸಮಿತಿಯ ನೂತನ ಸಂಚಾಲಕ ದಾನಿಶ್ ಕುಮಾರ್ ಅವರು, ‘ನಾವು ಅಲ್ಪಸಂಖ್ಯಾತರ ಸುರಕ್ಷತೆಗೆ ಸಂಬಂಧಿಸಿದ ಸಾಂವಿಧಾನಿಕ ಭರವಸೆಗಳನ್ನು ಪಾಲಿಸಲು ಪ್ರಯತ್ನಿಸುತ್ತೇವೆ’ ಎಂದು ಭರವಸೆ ನೀಡಿದರು.

೨. ಈ ಸಂದರ್ಭದಲ್ಲಿ ಅವರು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಅವರ ಸಾಂವಿಧಾನಿಕ ಹಕ್ಕುಗಳನ್ನು ನೀಡುತ್ತಿಲ್ಲ ಎಂಬುದನ್ನು ಒತ್ತಿ ಹೇಳಿದರು ಮತ್ತು ಸಮಾನ ನ್ಯಾಯಕ್ಕಾಗಿ ನೀತಿ ಸುಧಾರಣೆಗಳನ್ನು ತಕ್ಷಣವೇ ಜಾರಿಗೊಳಿಸುವ ಅಗತ್ಯವನ್ನು ವ್ಯಕ್ತಪಡಿಸಿದರು.

೩. ಸಮಿತಿಯ ಸದಸ್ಯರಾದ ಡಾ. ರಮೇಶ ಕುಮಾರ್ ವಂಕ್ವಾನಿ ಅವರು ‘ಇವ್ಯಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್’ ಅನ್ನು ಕಟುವಾಗಿ ಟೀಕಿಸಿದರು. ಈ ಮಂಡಳಿಯ ಕಾರ್ಯಕ್ಷೇತ್ರದಲ್ಲಿರುವ ದೇವಸ್ಥಾನಗಳು ಮತ್ತು ಗುರುದ್ವಾರಗಳ ನಿರ್ವಹಣೆಯಲ್ಲಿ ಅದು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಹೇಳಿದರು.

೪. ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಈ ವೇದಿಕೆಯಿಂದ ಇನ್ನು ಮುಂದೆ ಆಗುವುದಿಲ್ಲ ಎಂದು ಸಮಿತಿಯ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

  • ಇದಕ್ಕೆ ಭಾರತದಲ್ಲಿನ ಸ್ವಾತಂತ್ರ್ಯಾನಂತರದ ಎಲ್ಲ ಪಕ್ಷದ ಆಡಳಿತಗಾರರು ಹೊಣೆ ! ಕಳೆದ ೭೮ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಅವರ ದೇವಾಲಯಗಳು ನಾಶವಾಗುತ್ತಿದ್ದರೂ, ಯಾವುದೇ ಸರಕಾರವು ಪಾಕಿಸ್ತಾನಕ್ಕೆ ಒಂದು ಮಾತು ಹೇಳುವ ಧೈರ್ಯವನ್ನೂ ತೋರಿಸಿಲ್ಲ ಎಂಬುದನ್ನು ಗಮನಿಸಿ ! ಹಿಂದೂ ರಾಷ್ಟ್ರದಲ್ಲಿ ಯಾರೂ ಹಿಂದೂಗಳು ಮತ್ತು ಅವರ ದೇವಾಲಯಗಳ ಮೇಲೆ ವಕ್ರದೃಷ್ಟಿ ಬೀರುವ ಧೈರ್ಯ ಮಾಡುವುದಿಲ್ಲ, ಅಂತಹ ಭಯ ಇರಲಿದೆ !
  • ಭಾರತದಲ್ಲಿ ಮುಸಲ್ಮಾನರ ಒಂದು ಪ್ರಾರ್ಥನಾ ಸ್ಥಳಕ್ಕೆ ಹಾನಿಯಾದರೂ, ‘ಭಾರತದಲ್ಲಿ ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳು ಅಪಾಯದಲ್ಲಿವೆ’ ಎಂದು ಕೂಗುವವರು, ಈಗ ಪಾಕಿಸ್ತಾನದಲ್ಲಿ ಹಿಂದೂಗಳ ಶ್ರದ್ಧಾ ಕೇಂದ್ರಗಳ ಈ ದುಃಸ್ಥಿತಿಯ ಬಗ್ಗೆ ಮೌನವಾಗಿರುವುದು ಏಕೆ ?