
‘ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ೮೩ ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ೧೭ ರಿಂದ ೧೯ ಮೇ ೨೦೨೫ ರ ಅವಧಿಯಲ್ಲಿ ಗೋವಾದ ಫೋಂಡಾದಲ್ಲಿನ ಫಾರ್ಮಾಗುಡಿಯಲ್ಲಿನ ಇಂಜನಿಯರಿಂಗ್ ವಿಶ್ವವಿದ್ಯಾಲಯದ ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ನೇರವೇರಿತು. ಈ ಸಮಯದಲ್ಲಿ ಕರ್ನಾಟಕ ರಾಜ್ಯದಿಂದ ಬಂದ ಸಾಧಕರಿಗೆ ಅರಿವಾದ ಅಂಶಗಳು ಮತ್ತು ಬಂದ ಅನುಭೂತಿಗಳನ್ನು ಇಲ್ಲಿ ಕೊಡಲಾಗಿದೆ.
೧. ಶ್ರೀಮತಿ ಗೀತಾ ಮಹಾಲೆ, ಕುಮಟಾ, ಉತ್ತರ ಕನ್ನಡ.
೧ ಅ. ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಭಾಗವಹಿಸಿದ ನಂತರ ಜೀವನದಲ್ಲಿನ ಅನೇಕ ಸಂಕಟಗಳ ನಿವಾರಣೆಯಾಗುವುದು : ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಭಾಗವಹಿಸುವ ಅವಕಾಶ ಸಿಗುವುದು, ಇದು ನನ್ನ ಹಿಂದಿನ ಜನ್ಮಗಳಲ್ಲಿನ ಪುಣ್ಯದ ಫಲವೇ ಆಗಿದೆ. ಪ.ಪೂ. ಗುರುದೇವರ ಕೃಪೆಯಿಂದ ನನಗೆ ಧನ್ವಂತರಿ ಯಾಗವನ್ನು ನೋಡುವ ಭಾಗ್ಯ ಸಿಕ್ಕಿತು. ಈ ಯಾಗಕ್ಕಾಗಿ ಭಾರತದ ಅನೇಕ ತೀರ್ಥಕ್ಷೇತ್ರಗಳಿಂದ ಸಾಧುಸಂತರು ಉಪಸ್ಥಿತರಿದ್ದರು. ಘೋರ ಅಂಧಃಕಾರವು ಕೇವಲ ಒಂದು ದೀಪವನ್ನು ಹಚ್ಚಿ ಹೇಗೆ ದೂರವಾಗುತ್ತದೆಯೋ, ಹಾಗೆಯೇ ಗುರುದೇವರ ಅಪಾರ ಕೃಪೆಯಿಂದ ನಮ್ಮ ಜೀವನದಲ್ಲಿನ ಅನೇಕ ಸಂಕಟಗಳ ನಿವಾರಣೆಯಾಗಿ ನಮಗೆ ಗುರುದೇವರು ಶಾಂತಿಯ ಅನುಭೂತಿಯನ್ನು ನೀಡಿದರು.
೧ ಆ. ‘ಸನಾತನ ಧರ್ಮ’ವು ಮಹಾನವಾಗಿದ್ದು ಈ ಧರ್ಮದಲ್ಲಿ ಜನ್ಮ ಪಡೆಯುವುದು’, ಭಾಗ್ಯದ ವಿಷಯವಾಗಿದೆ : ನಾವು ಭವ್ಯ ಧ್ವಜಾರೋಹಣ ಸಮಾರಂಭದ ಸಾಕ್ಷಿದಾರರಾದೆವು. ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ನಾವು ಅನೇಕ ಸಂತರ ಮತ್ತು ಸದ್ಗುರುಗಳ ಮಾರ್ಗದರ್ಶನವನ್ನು ಕೇಳಿದೆವು. ಆಗ ‘ಸನಾತನ ಧರ್ಮ’ವು ಎಷ್ಟು ಶ್ರೇಷ್ಠವಾಗಿದೆ ಮತ್ತು ಈ ಧರ್ಮದಲ್ಲಿ ಜನ್ಮ ಪಡೆಯುವುದೆಂದರೆ ಎಷ್ಟು ಭಾಗ್ಯದ ವಿಷಯವಾಗಿದೆ !’, ಎಂಬುದು ನಮ್ಮ ಗಮನಕ್ಕೆ ಬಂದಿತು.’
೨. ಕು. ಚಿತ್ರ ತಾಂಡೆಳ, ಹೊನ್ನಾವರ, ಉತ್ತರ ಕನ್ನಡ
೨ ಅ. ‘ದುರ್ಗಾದೇವಿಯು ಧರ್ಮಯುದ್ಧ ಮಾಡಿ ಹಿಂದೂ ರಾಷ್ಟ್ರದ ರಕ್ಷಣೆ ಮಾಡಲು ಅವತರಿಸಿದ್ದಾಳೆ’, ಎಂದು ಅರಿವಾಗುವುದು ಮತ್ತು ‘ಹಿಂದೂ ರಾಷ್ಟ್ರ ಹಾಗೂ ಧರ್ಮದ ರಕ್ಷಣೆಗಾಗಿ ಮಾಡಲಾದ ಒಂದು ‘ದಿವ್ಯ ಮಹಾಯಾಗ’ವಾಗಿದೆ ಎಂದು ಅನಿಸುವುದು : ‘ಶತಚಂಡಿ ಯಾಗದ ಸ್ಥಳದಲ್ಲಿ ನನಗೆ ಶ್ರೀ ದುರ್ಗಾದೇವಿಯ ದರ್ಶನವಾಯಿತು. ಆ ಸಮಯದಲ್ಲಿ ನನಗೆ ದೇವಿಯ ಮಸ್ತಕದ ಮೇಲೆ ತ್ರಿಶೂಲ, ಕಮಲ ಮತ್ತು ಆಮೆ ಕಾಣಿಸಿತು. ಆಗ ‘ದುರ್ಗಾದೇವಿಯು ಧರ್ಮಯುದ್ಧವನ್ನು ಮಾಡಿ ಹಿಂದೂ ರಾಷ್ಟ್ರದ ರಕ್ಷಣೆಗಾಗಿ ಅವತರಿಸಿದ್ದಾಳೆ’, ಎಂದು ಅರಿವಾಯಿತು. ಈ ಅನಭೂತಿಯಿಂದ ‘ಈ ಶತಚಂಡಿಯಾಗವು ಕೇವಲ ಒಂದು ಸಾಮಾನ್ಯ ಯಾಗವಾಗಿರದೇ, ‘ಹಿಂದೂ ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಮಾಡಲಾದ ಒಂದು ‘ದಿವ್ಯ ಮಹಾಯಾಗ’ ವಾಗಿತ್ತು’, ಎಂಬುದು ನನ್ನ ಗಮನಕ್ಕೆ ಬಂದಿತು.
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಡಾ. ನರೇಂದ್ರ ದಾತೆ ಅವರಿಂದ ಹಂತಹಂತವಾಗಿ ಸಾಧನೆಯನ್ನು ಮಾಡಿಸಿಕೊಂಡ ಪ.ಪೂ ಭಕ್ತರಾಜ ಮಹಾರಾಜರು !
ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿವಿಧ ಪ್ರವಚನಗಳು ಮತ್ತು ಗ್ರಂಥ ಪ್ರದರ್ಶನಗಳಿಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ !
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಂಗಳೂರಿನಲ್ಲಿ ಭಾವಪೂರ್ಣ ವಾತಾವರಣದಲ್ಲಿ ಜರುಗಿದ ‘ಈಶ್ವರಪ್ರಾಪ್ತಿಗಾಗಿ ಸಂಗೀತ-ಸಾಧನಾ ಶಿಬಿರ’ !