ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ಬಂದಿದ್ದ 3 ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ತರಗತಿಯಿಂದ ಹೊರಹಾಕಿದರು : Ayyappa Mala Row

ಚಿಕ್ಕಮಗಳೂರು ಎಂ.ಇ.ಎಸ್. ಕಾಲೇಜಿನಲ್ಲಿ ನಡೆದ ಘಟನೆ

ಚಿಕ್ಕಮಗಳೂರು – ಶಬರಿಮಲೆ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ಕಾಲೇಜಿಗೆ ಬಂದಿದ್ದ ಮೂವರು ವಿದ್ಯಾರ್ಥಿಗಳನ್ನು ಇಲ್ಲಿನ ಎಂ.ಇ.ಎಸ್. (ಮೈಸೂರು ಎಜುಕೇಶನ್ ಸೊಸೈಟಿ) ಕಾಲೇಜಿನ ಪ್ರಾಂಶುಪಾಲರು ಹೊರಹಾಕಿದ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಹಿಂದೂ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ಹಿಂದೂ ಸಂಘಟನೆಯ ಮುಖಂಡರು ಕಾಲೇಜಿಗೆ ಭೇಟಿ ನೀಡಿ, ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿದ ವಿದ್ಯಾರ್ಥಿಗಳನ್ನು ಹೊರಹಾಕಿದ ಬಗ್ಗೆ ಪ್ರಶ್ನಿಸಿದರು. ಈ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಸಮವಸ್ತ್ರದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಕಾರಣ ನೀಡಿದರು. ಈ ವಿಚಾರವಾಗಿ ಹಿಂದೂ ಸಂಘಟನೆಯ ಮುಖಂಡರು ಮತ್ತು ಕಾಲೇಜು ಆಡಳಿತ ಮಂಡಳಿಯ ನಡುವೆ ವಾಗ್ವಾದ ನಡೆಯಿತು.

ಸಂಪಾದಕೀಯ ನಿಲುವು

ಕಂಠದಲ್ಲಿ ಧರಿಸುವ ಮಾಲೆಯಿಂದ ಕಾಲೇಜಿಗೆ ಏನು ತೊಂದರೆ ಆಗಿದೆ ? ದೇಶದ ಕಾನ್ವೆಂಟ್ ಶಾಲೆಗಳಲ್ಲಿ ಕುಂಕುಮ ಹಚ್ಚುವುದು, ಬಳೆಗಳನ್ನು ಹಾಕುವುದು, ಮೆಹಂದಿ ಬಿಡಿಸುವುದು ಮುಂತಾದ ಆಚರಣೆಗಳನ್ನು ನಿಷೇಧಿಸಲಾಗುತ್ತದೆ. ಈ ಘಟನೆಗಳನ್ನು ಗಮನಿಸಿದರೆ, ದೇಶದಲ್ಲಿ ಹಿಂದೂಗಳ ಧಾರ್ಮಿಕ ಆಚರಣೆಯನ್ನು ವಿರೋಧಿಸುವುದನ್ನು ಅಪರಾಧವೆಂದು ಪರಿಗಣಿಸುವ ಕಾನೂನು ಮಾಡುವುದು ಅವಶ್ಯಕವಾಗಿದೆ ಎಂದೆನಿಸುತ್ತದೆ!