ಪಾಕಿಸ್ತಾನಕ್ಕೆ ಸಾಂವಿಧಾನಿಕ ತಿದ್ದುಪಡಿ ಮರುಪರಿಶೀಲಿಸುವಂತೆ ಕರೆ !

ನ್ಯೂಯಾರ್ಕ್ (ಅಮೆರಿಕಾ) – ಪಾಕಿಸ್ತಾನದಲ್ಲಿ ಮಾಡಲಾದ 27ನೇ ಸಾಂವಿಧಾನಿಕ ತಿದ್ದುಪಡಿಯು ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಅಗತ್ಯ ಕಾನೂನು ನಿಯಮಗಳನ್ನು ದುರ್ಬಲಗೊಳಿಸಬಹುದು. ಈ ಬದಲಾವಣೆಗಳು ವ್ಯವಸ್ಥೆಯಲ್ಲಿ ಎಷ್ಟು ದೊಡ್ಡ ಪರಿವರ್ತನೆಗಳನ್ನು ತರುತ್ತವೆಯೆಂದರೆ, ನ್ಯಾಯಾಲಯಗಳ ಮೇಲೆ ರಾಜಕೀಯ ಪ್ರಭಾವ ಬೀರುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯ ಹೈ ಕಮಿಷನರ್ ವೋಲ್ಕರ್ ಟರ್ಕ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ತಿದ್ದುಪಡಿಯಿಂದ ಸೇನೆಯ ಅಧಿಕಾರ ಹೆಚ್ಚಿದ್ದು, ಸರ್ವೋಚ್ಚ ನ್ಯಾಯಾಲಯದ ಅಧಿಕಾರವನ್ನು ಕಡಿಮೆಗೊಳಿಸಲಾಗಿದೆ.
🚨 UN raises alarm on Pakistan
🇺🇳❗ Pakistan’s 27th Constitutional Amendment hands sweeping powers to the Army Chief.
⚠️ Control of the nuclear arsenal now moves from the PM ➜ to Gen. Asim Munir.
🇵🇰💣 A full-blown military power grab in the makingpic.twitter.com/KQxyZL7mN8
— Sanatan Prabhat (@SanatanPrabhat) November 30, 2025
ಟರ್ಕ್ ತಮ್ಮ ಮಾತು ಮುಂದುವರಿಸಿ, ನ್ಯಾಯಾಂಗದ ಸ್ವಾತಂತ್ರ್ಯದ ಒಂದು ಪ್ರಮುಖ ಮಾನದಂಡವೆಂದರೆ ಸರಕಾರದ ಹಸ್ತಕ್ಷೇಪ ಇರಬಾರದು. ಒಂದು ವೇಳೆ ಈ ಸಂರಕ್ಷಣೆ ಇಲ್ಲವಾದರೆ, ನ್ಯಾಯಾಲಯಗಳು ಮಾನವ ಹಕ್ಕುಗಳನ್ನು ರಕ್ಷಿಸಲು ಮತ್ತು ಕಾನೂನನ್ನು ಎಲ್ಲರ ಮೇಲೆ ಸಮಾನವಾಗಿ ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ. ಪಾಕಿಸ್ತಾನವು ಈ ತಿದ್ದುಪಡಿಯನ್ನು ಮರುಪರಿಶೀಲಿಸಬೇಕು ಮತ್ತು ದೇಶದ ಸಂಸ್ಥೆಗಳನ್ನು ದುರ್ಬಲಗೊಳಿಸದೆ ಬಲಪಡಿಸುವಂತಹ ಬದಲಾವಣೆಗಳನ್ನು ಮಾಡಬೇಕು.
ಸಾಂವಿಧಾನಿಕ ತಿದ್ದುಪಡಿಯಿಂದ ಏನಾಯಿತು?
27ನೇ ಸಾಂವಿಧಾನಿಕ ತಿದ್ದುಪಡಿಯಿಂದಾಗಿ, ಪಾಕಿಸ್ತಾನದ ಸೇನಾ ಮುಖ್ಯಸ್ಥರಾದ ಆಸಿಮ್ ಮುನೀರ್ ಅವರು ದೇಶದ ಮೊದಲ ‘ಚೀಫ್ ಆಫ್ ಡಿಫೆನ್ಸ್ ಫೋರ್ಸಸ್’ (ರಕ್ಷಣಾ ಪಡೆಗಳ ಮುಖ್ಯಸ್ಥ) ಆದರು. ಅಲ್ಲದೆ, ಪಾಕಿಸ್ತಾನದ ಪರಮಾಣು ಬಾಂಬ್ ಗಳ ನಿಯಂತ್ರಣವು ಈಗ ಸಂಪೂರ್ಣವಾಗಿ ಸೇನೆಯ, ಅಂದರೆ ಆಸಿಮ್ ಮುನೀರ್ ಅವರ ಕೈಗೆ ಸೇರಿದೆ. ಈ ಹಿಂದೆ, ಈ ನಿಯಂತ್ರಣವು ಪಾಕ್ ಪ್ರಧಾನಮಂತ್ರಿಯವರ ಕೈಯಲ್ಲಿತ್ತು.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !