ಪಾಕಿಸ್ತಾನದ ಉಪಪ್ರಧಾನಮಂತ್ರಿ ಇಶಾಕ್ ಡಾರ್ ಅವರ ಹೇಳಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನವು ಅಪಾರ ನಷ್ಟವನ್ನು ಎದುರಿಸಿದೆ. ಕಳೆದ ೪ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ೪ ಸಾವಿರ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು ೨೦ ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ನೆಲವನ್ನು ಪಾಕಿಸ್ತಾನದ ವಿರುದ್ಧ ಬಳಸಬಾರದು ಎಂಬುದು ಪಾಕಿಸ್ತಾನದ ನೀತಿಯಾಗಿದೆ. ಇದಕ್ಕಾಗಿ ತಾಲಿಬಾನ್ ಜೊತೆ ನಿರಂತರ ಮಾತುಕತೆ ನಡೆಸಲಾಯಿತು; ಆದರೆ ಇಲ್ಲಿಯವರೆಗೆ ಸಕಾರಾತ್ಮಕ ಫಲಿತಾಂಶಗಳು ಸಿಕ್ಕಿಲ್ಲ ಎಂದು ಪಾಕಿಸ್ತಾನದ ಉಪಪ್ರಧಾನಮಂತ್ರಿ ಇಶಾಕ್ ಡಾರ್ ಹೇಳಿಕೆ ನೀಡಿದರು. ಅವರು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಾಲಿಬಾನ್‌ಗೆ ಮನವಿ ಮಾಡಿದರು.
೧. ಡಾರ್ ಅವರು ಮಾತು ಮುಂದುವರೆಸಿ, ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯನ್ನು ಮುಚ್ಚಿದ್ದಕ್ಕೆ ನಮಗೆ ಸಂತೋಷವಿಲ್ಲ; ಆದರೆ ಇದು ಭದ್ರತಾ ಕಾರಣಗಳಿಂದಾಗಿ ಮಾಡಲಾಗಿದೆ. ಹೆಚ್ಚಿನ ತಾಲಿಬಾನ್ ಸದಸ್ಯರು ಶಾಂತಿಯನ್ನು ಬಯಸುತ್ತಾರೆ, ಆದರೆ ಕೆಲವರು ಇದನ್ನು ಒಪ್ಪುವುದಿಲ್ಲ. ಇತ್ತೀಚೆಗೆ ತಾಲಿಬಾನ್ ಸರಕಾರವು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ ನೂರಾರು ಭಯೋತ್ಪಾದಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ, ಎಂದು ಹೇಳಿದರು.
೨. ಗಾಜಾದಲ್ಲಿ ಅಂತರರಾಷ್ಟ್ರೀಯ ಪಡೆಗಳಿಗೆ ನೆರವು ನೀಡಲು ಪಾಕಿಸ್ತಾನದ ಸೈನ್ಯವು ಸಿದ್ಧವಾಗಿದೆ ಎಂದು ಡಾರ್ ಹೇಳಿದರು. ಆದಾಗ್ಯೂ, ಇದಕ್ಕಾಗಿ ಮೊದಲು ಪಾತ್ರ, ನಿಯಮಗಳು ಮತ್ತು ಅಧಿಕಾರಗಳು ಸ್ಪಷ್ಟವಾಗಿರಬೇಕು. ಹಮಾಸ್ ಅನ್ನು ಶಸ್ತ್ರಾಸ್ತ್ರಗಳಿಂದ ಬೇರ್ಪಡಿಸುವುದು ಪ್ಯಾಲೆಸ್ಟೀನ್ ಕಾನೂನಿನ ಕೆಲಸವಾಗಿದೆ, ಪಾಕಿಸ್ತಾನ ಮತ್ತು ಇತರ ದೇಶಗಳು ಇದರಲ್ಲಿ ಮಧ್ಯಪ್ರವೇಶಿಸಬಾರದು.
ಸಂಪಾದಕೀಯ ನಿಲುವು
|
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !