|

ದೆಹಲಿ – ಸನಾತನ ಧರ್ಮದ ತತ್ವಶಾಸ್ತ್ರ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅದರ ಕೊಡುಗೆಯ ಕುರಿತಾದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಶೀಘ್ರದಲ್ಲೇ ದೆಹಲಿಯಲ್ಲಿ ನಡೆಯಲಿರುವಾಗ, ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತ ಯುವಾ ಚಲನಚಿತ್ರ ನಿರ್ಮಾಪಕ ಓಂ ಭಾರದ್ವಾಜ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿಶೇಷ ಮನವಿ ಮಾಡಿದ್ದಾರೆ. ಭಾರದ್ವಾಜ್ ಅವರ ಮುಂಬರುವ ಸಾಕ್ಷ್ಯಚಿತ್ರದ ಹೆಸರು ‘ಹಿಂದೂ ರಾಷ್ಟ್ರ ಮತ್ತು ಭಾರತದ ಯುವಕರು’ ಎಂದಿದ್ದು, ಮಹೋತ್ಸವದಂತಹ ಬೃಹತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಅದರ ಚಿತ್ರೀಕರಣ ಮಾಡಲು ಅನುಮತಿ ನೀಡುವಂತೆ ಅವರು ಆಯೋಜಕರಲ್ಲಿ ವಿನಂತಿಸಿದ್ದಾರೆ. ಭಾರದ್ವಾಜ್ ಅವರ ಈ ವಿಶೇಷ ಬೇಡಿಕೆಯು ಮಹೋತ್ಸವದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ಉತ್ಸವವು ರಾಷ್ಟ್ರ-ಧರ್ಮದ ವಿಚಾರಗಳನ್ನು ಕಲಾತ್ಮಕ ಮತ್ತು ಪರಿಣಾಮಕಾರಿ ಮಾಧ್ಯಮಗಳ ಮೂಲಕ ಯುವ ಪೀಳಿಗೆಗೆ ತಲುಪಿಸಲು ಹೊಸ ದಿಕ್ಕನ್ನು ನೀಡಲಿದೆ.
ನವದೆಹಲಿಯ ನಿವಾಸಿಯಾಗಿರುವ ಭಾರದ್ವಾಜ್ ಅವರ ಕಿರುಚಿತ್ರವು ಇತ್ತೀಚೆಗೆ ‘ಭಾಸ್ಕರ’ ದಿನಪತ್ರಿಕೆಯ ‘ಜೆ.ಎಫ್.ಎಫ್. ಫಿಲ್ಮ್ ಫೆಸ್ಟಿವಲ್’ನಲ್ಲಿ ಉಪವಿಜೇತವಾಗಿ ಹೊರಹೊಮ್ಮಿದೆ. ಪ್ರಶಸ್ತಿ ಪಡೆದ ನಂತರ, ಅವರು ‘ಸನಾತನ ಧರ್ಮದ ನಿಜ ಸ್ವರೂಪ, ಸಂರಕ್ಷಣೆ ಮತ್ತು ಪ್ರಚಾರ’ ಮಾಡುವ ಗುರಿಯನ್ನು ಸ್ವೀಕರಿಸಿದರು. ಇದೀಗ ಭಾರದ್ವಾಜ್ ಅವರು ‘ಹಿಂದೂ ರಾಷ್ಟ್ರ ಮತ್ತು ಭಾರತದ ಯುವಕರು’ ಎಂಬ ವಿಷಯದ ಮೇಲೆ ಸಾಕ್ಷ್ಯಚಿತ್ರವನ್ನು (ಡಾಕ್ಯುಮೆಂಟರಿ) ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ.
‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನನ್ನ ಸಾಕ್ಷ್ಯಚಿತ್ರದ ನಿರ್ಮಾಣಕ್ಕೆ ನಿರ್ಣಾಯಕವಾಗಲಿದೆ! – ಓಂ ಭಾರದ್ವಾಜ್
ಭಾರದ್ವಾಜ್ ಅವರು ಮಾತನಾಡಿ, ಈ ರಾಷ್ಟ್ರದ ಯುವಕನಾಗಿ, ನಮ್ಮ ಧಾರ್ಮಿಕ ಸಂಪ್ರದಾಯಗಳನ್ನು ಪ್ರಾಮಾಣಿಕವಾಗಿ ಮತ್ತು ಗೌರವದಿಂದ ಅರ್ಥಮಾಡಿಕೊಳ್ಳುವುದು, ಅನುಭವಿಸುವುದು ಮತ್ತು ಅವುಗಳನ್ನು ಪ್ರತಿನಿಧಿಸುವುದು ನನ್ನ ನೈತಿಕ ಜವಾಬ್ದಾರಿಯಾಗಿದೆ. ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಕೇವಲ ಒಂದು ಉತ್ಸವವಲ್ಲ, ಇದು ಸನಾತನ ಸಂಪ್ರದಾಯದ ಮೂಲ ಮೌಲ್ಯಗಳನ್ನು ‘ಶಂಖನಾದ’ ಮಾಡುವ ವೇದಿಕೆಯಾಗಿದೆ. ಈ ಮಹೋತ್ಸವವು ನನ್ನ ಸಾಕ್ಷ್ಯಚಿತ್ರದ ನಿರ್ಮಾಣಕ್ಕೆ ನಿರ್ಣಾಯಕವಾಗಲಿದೆ ಮತ್ತು ನನ್ನ ಕೆಲಸದ ಮೂಲಕ ನಿಮ್ಮ ಪ್ರಯತ್ನಗಳಿಗೆ ಸರಿಯಾದ ಗೌರವ ಮತ್ತು ಆದರವನ್ನು ಕಾಪಾಡುತ್ತೇನೆ ಎಂದು ನಾನು ನಿಮಗೆ ವಚನ ನೀಡುತ್ತೇನೆ, ಎಂದು ಹೇಳಿದರು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!