ರಾಜನಾಥ ಸಿಂಗ್ ಅವರ ‘ಸಿಂಧ್ ನಾಳೆ ಭಾರತಕ್ಕೆ ಮರಳಿ ಬರಬಹುದು’ ಎಂಬ ಹೇಳಿಕೆಗೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸಚಿವ ಸೈಯದ್ ಸರ್ದಾರ್ ಅಲಿ ಶಾ ಅವರ ಬಾಲಿಶ ಹೇಳಿಕೆ

ಕರಾಚಿ (ಪಾಕಿಸ್ತಾನ) – ಗುಜರಾತ್, ಹರಿಯಾಣ ಮತ್ತು ರಾಜಸ್ಥಾನ ನಮ್ಮವು. ನಾವು ಇದನ್ನು ಸಾಬೀತುಪಡಿಸುತ್ತೇವೆ, ಎಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸಚಿವ ಸೈಯದ್ ಸರ್ದಾರ್ ಅಲಿ ಶಾ ಅವರು ಬಾಲಿಶ ಹೇಳಿಕೆ ನೀಡಿದ್ದಾರೆ. ಸಿಂಧ್ ವಿಧಾನಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಿಂಧ್‌ಗೆ ಸಂಬಂಧಿಸಿದ ಹೇಳಿಕೆಗೆ ಅವರ ಪ್ರತಿಕ್ರಿಯೆ ಆಗಿದೆ. ಅಲಿ ಶಾ ಅವರು, ಭಾರತವು ಸಿಂಧ್ ಬಗ್ಗೆ ಟಿಪ್ಪಣಿ ಮಾಡಲು ಸಾಧ್ಯವಾದರೆ, ನಾನು ಕೂಡ ಭಾರತದ ರಾಜ್ಯಗಳ ಮೇಲೆ ಹಕ್ಕು ಸಾಧಿಸಬಹುದು, ಎಂದು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏನು ಹೇಳಿದ್ದರು?
ನವೆಂಬರ್ ೨೩ ರಂದು ದೆಹಲಿಯಲ್ಲಿ ಸಿಂಧಿ ಜನರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಇಂದು ಸಿಂಧ್ ಭೂಮಿ ಭಾರತದ ಭಾಗವಾಗಿಲ್ಲದಿದ್ದರೂ, ನಾಗರಿಕತೆಯ ಪ್ರಕಾರ ಸಿಂಧ್ ಯಾವಾಗಲೂ ಭಾರತದ ಭಾಗವಾಗಿರುತ್ತದೆ. ಭೂಮಿಯ ಬಗ್ಗೆ ಹೇಳುವುದಾದರೆ, ಗಡಿಗಳು ಯಾವಾಗ ಬೇಕಾದರೂ ಬದಲಾಗಬಹುದು. ನಾಳೆ ಬಹುಶಃ ಸಿಂಧ್ ಮತ್ತೆ ಭಾರತಕ್ಕೆ ಮರಳಿ ಬರಬಹುದು ಎಂದು ಹೇಳಿದ್ದರು.
ಸಿಂಗ್ ಅವರ ಹೇಳಿಕೆಯನ್ನು ‘ಜೇ ಸಿಂಧ್ ಮುತ್ತಾಹಿದಾ ಮಹಾಜ್’ ಸಂಸ್ಥೆ ಸ್ವಾಗತಿಸಿದೆ!
ಸಿಂಧ್‌ನ ನಾಯಕ ಶಫಿ ಬರ್ಫತ್ ಅವರ ‘ಜೇ ಸಿಂಧ್ ಮುತ್ತಾಹಿದಾ ಮಹಾಜ್’ ಸಂಸ್ಥೆಯು ಸಿಂಗ್ ಅವರ ಈ ಹೇಳಿಕೆಯನ್ನು ಬಲವಾಗಿ ಸ್ವಾಗತಿಸಿದೆ. ಈ ಹೇಳಿಕೆ ಸಿಂಧಿ ಜನರಿಗೆ ಐತಿಹಾಸಿಕ, ಉತ್ತೇಜಕ ಮತ್ತು ಪ್ರೇರಣಾದಾಯಕವಾಗಿದೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಸಿಂಧ್‌ನ ಸ್ವಾತಂತ್ರ್ಯ ಮತ್ತು ಭವಿಷ್ಯದಲ್ಲಿ ಭಾರತದೊಂದಿಗೆ ಬಲಿಷ್ಠ ಸಂಬಂಧಗಳ ಭರವಸೆಯನ್ನು ಸೃಷ್ಟಿಸುತ್ತದೆ. ಸಿಂಧ್ ಮತ್ತು ಭಾರತದ ನಡುವೆ ಆಳವಾದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಭಾವನಾತ್ಮಕ ಸಂಬಂಧಗಳಿವೆ ಎಂದು ನಾವು ಮೊದಲಿನಿಂದಲೂ ನಂಬಿದ್ದೇವೆ.
ಸಂಪಾದಕೀಯ ನಿಲುವುತನ್ನದೇ ದೇಶವನ್ನು ಒಗ್ಗಟ್ಟಾಗಿ ಇರಿಸಲು ಸಾಧ್ಯವಾಗದ ಪಾಕಿಸ್ತಾನದ ಸಚಿವರ ಈ ಹೇಳಿಕೆ ಹಾಸ್ಯಾಸ್ಪದ ಮತ್ತು ಅವರ ಬೌದ್ಧಿಕ ದಿವಾಳಿತನವನ್ನು ಬಯಲು ಮಾಡುತ್ತದೆ! ಇದು ‘ಎಲುಬಿಲ್ಲದ ನಾಲಿಗೆ ಹೇಗೆ ಬೇಕಾದರೂ ಹೊರಳಿಸಬಹುದು’ ಎಂಬ ರೀತಿಯಾಗಿದೆ! |
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid