
ವಾಷಿಂಗ್ಟನ್ (ಅಮೆರಿಕಾ) – ಆಗಸ್ಟ್ ತಿಂಗಳಿನಲ್ಲಿ ಅಮೆರಿಕಾ ಭಾರತದ ಮೇಲೆ ಶೇ. ೫೦ ಆಮದು ಸುಂಕವನ್ನು ವಿಧಿಸಿದರೂ, ಏಪ್ರಿಲ್-ಅಕ್ಟೋಬರ್ ೨೦೨೫ರ ಈ ಎರಡು ತ್ರೈಮಾಸಿಕಗಳನ್ನು ಪರಿಗಣಿಸಿದರೆ ಭಾರತದ ರಫ್ತು ಹೆಚ್ಚಾಗಿದೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಸಚಿವಾಲಯವು ಈ ಮಾಹಿತಿಯನ್ನು ಸಂಸದೀಯ ವಾಣಿಜ್ಯ ಸ್ಥಾಯಿ ಸಮಿತಿಗೆ ನೀಡಿದೆ. ಅಮೆರಿಕಾದ ಆಮದು ಸುಂಕ ಹೆಚ್ಚಳದ ನಂತರ ‘ಭಾರತ-ಅಮೆರಿಕಾ ಸಂಬಂಧಗಳ ಮೇಲೆ ಇದರ ಪರಿಣಾಮವೇನು?’ ಎಂಬುದನ್ನು ಪರಿಶೀಲಿಸಲು ಈ ಸರ್ವಪಕ್ಷೀಯ ಸಮಿತಿಯನ್ನು ರಚಿಸಲಾಗಿದೆ.
ವಾಣಿಜ್ಯ ಸಚಿವಾಲಯವು ಎರಡು ವಾರಗಳೊಳಗೆ ಸ್ಥಾಯಿ ಸಮಿತಿಯ ಮುಂದೆ ವಿವರವಾದ ಲಿಖಿತ ವರದಿಯನ್ನು ಸಲ್ಲಿಸಲಿದೆ. ಅಮೆರಿಕಾದಲ್ಲಿ ಭಾರತದ ರಫ್ತು ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಅಕ್ಟೋಬರ್ ತಿಂಗಳಿನಲ್ಲಿ ಶೇ. ೧೪.೫ ರಷ್ಟು ಹೆಚ್ಚಾಗಿದೆ. ಆಗಸ್ಟ್ ೨೭ ರಂದು ಭಾರತದ ವಿರುದ್ಧ ಅಮೆರಿಕಾ ಸುಂಕವನ್ನು ವಿಧಿಸಿದ ನಂತರ, ಸೆಪ್ಟೆಂಬರ್‌ನಲ್ಲಿ ಅಮೆರಿಕಾಗೆ ರಫ್ತು ಕಡಿಮೆಯಾಯಿತು; ಆದರೆ ಅಕ್ಟೋಬರ್‌ನಲ್ಲಿನ ಹೆಚ್ಚಳವನ್ನು ನೋಡಿದರೆ, ಇದು ದೇಶದ ಆರ್ಥಿಕ ಅಭಿವೃದ್ಧಿಯ ಭವಿಷ್ಯಕ್ಕೆ ಸಕಾರಾತ್ಮಕ ಹೆಜ್ಜೆ ಎಂದು ಹೇಳಲಾಗುತ್ತಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು