ಶ್ರೀರಾಮ ಮಂದಿರದ ಧ್ವಜಾರೋಹಣಕ್ಕೆ ಪಾಕಿಸ್ತಾನದ ತೀವ್ರ ಆಕ್ರೋಶ!

ಇಸ್ಲಾಮಾಬಾದ್ (ಪಾಕಿಸ್ತಾನ) – ಯಲ್ಲಿ ಶ್ರೀರಾಮಮಂದಿರದ ನಿರ್ಮಾಣ ಮತ್ತು ಧ್ವಜಾರೋಹಣವು ಭಾರತದಲ್ಲಿ ಅಲ್ಪಸಂಖ್ಯಾತರನ್ನು ದಮನ ಮಾಡುವ ಭಾಗವಾಗಿದೆ ಮತ್ತು ಮುಸಲ್ಮಾನರ ಧಾರ್ಮಿಕ ಸ್ಥಳಗಳನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುವ ಪ್ರಯತ್ನವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಾಬರಿಯನ್ನು ಕೆಡವಿದ ಘಟನೆಯನ್ನು ಉಲ್ಲೇಖಿಸಿ, ಬಾಬರಿ ಒಂದು ‘ಐತಿಹಾಸಿಕ ಪ್ರಾರ್ಥನಾ ಸ್ಥಳ’ ಎಂದು ಹೇಳಿಕೆ ನೀಡಿದೆ.
Tantrum from Across the Border 🇵🇰➡️🇮🇳
Pakistan fumes over the Dhwajarohan at Shri Ram Mandir, calling it “suppression of minorities”!
India doesn’t need approval from a failed state. Instead of crying over Babri, Pakistan should answer for the crumbling condition of Hindu… https://t.co/4PcKgOlD4l pic.twitter.com/MfYsKfDXZv
— Sanatan Prabhat (@SanatanPrabhat) November 26, 2025
ಸಂಯುಕ್ತ ರಾಷ್ಟ್ರಗಳಿಗೆ ಕರೆ
ಭಾರತದಲ್ಲಿನ ತಥಾಕಥಿತ ಇಸ್ಲಾಮೋಫೋಬಿಯಾ (ಇಸ್ಲಾಂ ಬಗ್ಗೆ ದ್ವೇಷ), ಆಕ್ಷೇಪಾರ್ಹ ಹೇಳಿಕೆಗಳು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಉಲ್ಲೇಖಿಸಿ, ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಮಧ್ಯಪ್ರವೇಶಿಸಬೇಕು ಎಂದು ಪಾಕಿಸ್ತಾನ ಆಗ್ರಹಿಸಿದೆ. ಭಾರತದಲ್ಲಿ ಮಸೀದಿಗಳು ಮತ್ತು ಇಸ್ಲಾಮಿಕ್ ಸಾಂಸ್ಕೃತಿಕ ಪರಂಪರೆಯನ್ನು ಸುರಕ್ಷಿತವಾಗಿಡಲು ಜವಾಬ್ದಾರಿ ತೆಗೆದುಕೊಳ್ಳುವಂತೆ ಸಹ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಕರೆ ನೀಡಿದೆ. (ಬೆದರು ಗೊಂಬೆಯಂತಿರುವ ವಿಶ್ವಸಂಸ್ಥೆಯು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವ ಪ್ರಯತ್ನ ಮಾಡಬಾರದು ಮತ್ತು ಮಾಡಿದರೆ, ಭಾರತದಿಂದ ಕಠಿಣ ಉತ್ತರವನ್ನು ನೀಡಲಾಗುತ್ತದೆ ಎಂಬುದನ್ನು ಪಾಕಿಸ್ತಾನ ನೆನಪಿನಲ್ಲಿಡಬೇಕು! ಪಾಕಿಸ್ತಾನದಲ್ಲಿರುವ ಹಿಂದೂ ದೇವಸ್ಥಾನಗಳು, ಅಹ್ಮದಿಯಾ ಪಂಥದ ಮುಸಲ್ಮಾನರ ಮಸೀದಿಗಳ ವಿಷಯದಲ್ಲಿ ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಬೇಕು ಎಂದು ಭಾರತವು ಆಗ್ರಹಿಸುತ್ತದೆ! – ಸಂಪಾದಕರು)
ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನಗಳ ದುರವಸ್ಥೆ!
ಬಾಬರಿಯ ಬಗ್ಗೆ ಪಾಕಿಸ್ತಾನ ಕಣ್ಣೀರು ಹಾಕುತ್ತಾ ಕುಳಿತುಕೊಂಡಿರುವಾಗ, ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳು ವರ್ಷಾನುಗಟ್ಟಲೆ ದುರವಸ್ಥೆಗೆ ತಲುಪಿದ್ದರೂ ಅದು ಮೌನ ವಹಿಸಿದೆ. ಪಾಕಿಸ್ತಾನದಲ್ಲಿರುವ ಶಾರದಾ ಪೀಠ, ಕರಾಚಿಯಲ್ಲಿರುವ 150 ವರ್ಷಗಳ ಹಳೆಯ ಜಗನ್ನಾಥ ಮಂದಿರ, ರಾವಲ್ಪಿಂಡಿಯಲ್ಲಿ ೧೯೩೦ ರಲ್ಲಿ ನಿರ್ಮಿಸಲಾದ ಮೋಹನ್ ಮಂದಿರ ಹೀಗೆ ಹಲವು ಹಿಂದೂ ದೇವಸ್ಥಾನಗಳನ್ನು ಮುಸಲ್ಮಾನರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಈ ದೇವಸ್ಥಾನಗಳು ಸಂಪೂರ್ಣವಾಗಿ ನಾಶವಾಗುವ ಹಾದಿಯಲ್ಲಿವೆ. ಈ ಎಲ್ಲದರ ಬಗ್ಗೆ ಪಾಕಿಸ್ತಾನ ಸರಕಾರ ಎಂದಿಗೂ ದನಿ ಎತ್ತಲಿಲ್ಲ; ಆದರೆ ‘ಭಾರತದಲ್ಲಿ ಮಸೀದಿಗಳಿಗೆ ಅಪಾಯವಿದೆ’ ಎಂದು ಹೇಳುತ್ತಿದೆ.
ಸಂಪಾದಕೀಯ ನಿಲುವುಪಾಕಿಸ್ತಾನದ ಈ ಆಕ್ರೋಶಕ್ಕೆ ಭಾರತ ಕಿಂಚಿತ್ತೂ ಗಮನ ಕೊಡುವುದಿಲ್ಲ! ಬಾಬರಿ ಮಸೀದಿಯ ಬಗ್ಗೆ ಎದೆ ಬಡಿದುಕೊಳ್ಳುವ ಬದಲು ಪಾಕಿಸ್ತಾನದಲ್ಲಿರುವ ಹಿಂದೂ ದೇವಸ್ಥಾನಗಳ ದುರವಸ್ಥೆಯ ಬಗ್ಗೆ ಪಾಕಿಸ್ತಾನ ಮಾತನಾಡಬೇಕು! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers