ವಿವಿಧ ರಾಜ್ಯಗಳ ಗಣ್ಯರಿಗೆ ದೆಹಲಿಯ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಆಮಂತ್ರಣ! : SRSmahotsav Delhi 2025

ಮುಖೇಶ ಟಟವಾಳ: ಎಡಗಡೆಯಿಂದ ಮಹಾಪೌರರಾದ ಶ್ರೀ. ಮುಕೇಶ ಟಟವಾಳ, ಶ್ರೀ. ಶ್ರೀರಾಮ ಕಾಣೆ ಮತ್ತು ಶ್ರೀ. ಸಂಜಯ ಘಾಟಗೆ

ನವದೆಹಲಿ – ದೆಹಲಿಯಲ್ಲಿ ಇದೇ(ಡಿಸೆಂಬರ್?) 13 ಮತ್ತು 14 ರಂದು ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ವಿವಿಧ ರಾಜ್ಯಗಳ ಗಣ್ಯರು ಮತ್ತು ಮಹನೀಯ ವ್ಯಕ್ತಿಗಳು ಹಾಜರಾಗಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರಿಗೆ ಈ ಮಹೋತ್ಸವಕ್ಕೆ ಆಹ್ವಾನ ನೀಡಲಾಗಿದೆ.

ಎಡಗಡೆಯಿಂದ ಶ್ರೀ. ಶ್ರೀರಾಮ ಕಾಣೆ, ಸಚಿವ ವಿಶ್ವಾಸ ಸಾರಂಗ ಮತ್ತು ಜೊತೆಯಲ್ಲಿ ಸೌ. ಸಂಧ್ಯಾ ಆಗರಕರ

 

ಎಡಗಡೆಯಿಂದ ಶ್ರೀಮತಿ ಸರೋಜ ಗುಪ್ತಾ, ನಗರಸೇವಕ ಅನಿಲ ನಾಗರ ಮತ್ತು ಸೌ. ತೃಪ್ತಿ ಜೋಶಿ

 

ಎಡಗಡೆಯಿಂದ ಶ್ರೀ. ರಾಜನ ಕೇಸರಿ ಮತ್ತು ಉದ್ಯಮಿ ನಿಖಿಲ ಅಗ್ರವಾಲ

ಉಜ್ಜಯಿನಿ (ಮಧ್ಯಪ್ರದೇಶ) ನಗರದ ಮಹಾಪೌರರಾದ ಶ್ರೀ. ಮುಕೇಶ ಟಟವಾಳ ಅವರನ್ನು ಭೇಟಿ ಮಾಡಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶ್ರೀರಾಮ ಕಾಣೆ ಮತ್ತು ಶ್ರೀ. ಸಂಜಯ ಘಾಟಗೆ ಅವರು ಮಹೋತ್ಸವಕ್ಕೆ ಆಮಂತ್ರಣ ನೀಡಿದರು. ಮಧ್ಯಪ್ರದೇಶದ ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವರಾದ ಶ್ರೀ.. ವಿಶ್ವಾಸ ಸಾರಂಗ ಅವರಿಗೆ ಶ್ರೀ. ಶ್ರೀರಾಮ ಕಾಣೆ ಮತ್ತು ಸನಾತನ ಸಂಸ್ಥೆಯ ಸೌ. ಸಂಧ್ಯಾ ಆಗರಕರ ಅವರು ಆಮಂತ್ರಣ ನೀಡಿದರು. ಫರಿದಾಬಾದ (ಹರಿಯಾಣ) ಮಹಾನಗರ ಪಾಲಿಕೆಯ ನಗರಸೇವಕ ಶ್ರೀ. ಅನಿಲ ನಾಗರ ಅವರಿಗೆ ಸನಾತನ ಸಂಸ್ಥೆಯ ಶ್ರೀಮತಿ ಸರೋಜ ಗುಪ್ತಾ ಮತ್ತು ಸೌ. ತೃಪ್ತಿ ಜೋಶಿ ಅವರು ಆಮಂತ್ರಣ ನೀಡಿದರು. ವಾರಣಾಸಿ (ಉತ್ತರಪ್ರದೇಶ)ಯಲ್ಲಿನ ‘ರಾಮನಗರ ಇಂಡಸ್ಟ್ರಿಯಲ್’ನ ಉದ್ಯಮಿ ಶ್ರೀ. ನಿಖಿಲ ಅಗ್ರವಾಲ ಅವರಿಗೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರಾಜನ ಕೇಸರಿ ಅವರು ಆಮಂತ್ರಣ ನೀಡಿದರು.