ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಹತ್ಯಾಕಾಂಡ ನಡೆಸುತ್ತೇವೆ ! – ‘ಜಮಾತ್-ಎ-ಇಸ್ಲಾಮಿ’ಯ ಬೆದರಿಕೆ : Jamaat E Islami Threat

‘ಜಮಾತ್’ಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳ ನೆರವು!

ಜಮಾತೆ ಇಸ್ಲಾಮಿ ಮುಖ್ಯಸ್ಥ ಶಫೀಕುರ್ ರೆಹಮಾನ್ (ಎಡ)

ಢಾಕಾ (ಬಾಂಗ್ಲಾದೇಶ) – ಮುಂದಿನ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ಹತ್ಯಾಕಾಂಡವನ್ನು ನಡೆಸುತ್ತೇವೆ ಎಂದು ಕಟ್ಟರವಾದಿ ಇಸ್ಲಾಮೀ ಸಂಘಟನೆಯಾದ ‘ಜಮಾತ್-ಎ-ಇಸ್ಲಾಮಿ’ ಬೆದರಿಕೆ ಹಾಕಿದೆ. ‘ಜಮಾತ್-ಎ-ಇಸ್ಲಾಮಿ’ಯ ಮುಖ್ಯಸ್ಥ ಶಫೀಕುರ್ ರಹಮಾನ್ ಅವರು ಮತದಾನದ ದಿನದಂದು ದೊಡ್ಡ ಪ್ರಮಾಣದ ಹಿಂಸಾಚಾರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾದೇಶದ ಸಾಪ್ತಾಹಿಕ ಪತ್ರಿಕೆ ‘ವೀಕ್ಲಿ ಬ್ಲಿಟ್ಜ್’ ನೀಡಿದ ಮಾಹಿತಿಯ ಪ್ರಕಾರ, ಶಫೀಕುರ್ ರಹಮಾನ್ ಅವರು ಚುನಾವಣೆ ಮತ್ತು ಜನಮತಗಣನೆಯನ್ನು ಒಂದೇ ದಿನ ನಡೆಸಿದರೆ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದೆ ಕೈಮೀರಿ ಹೋಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ನರಮೇಧವಾಗಬಹುದು ಎಂದು ಅವರು ಹೇಳಿದ್ದಾರೆ.

ಬಾಂಗ್ಲಾದೇಶದ ಪತ್ರಕರ್ತ ಸಲಾಹುದ್ದೀನ್ ಶೋಯೆಬ್ ಚೌಧರಿ ಅವರು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್ಐ’ (‘ಇಂಟರ್ ಸರ್ವಿಸ್ ಇಂಟೆಲಿಜೆನ್ಸ್’ – ಆಂತರಿಕ ಗುಪ್ತಚರ ಸಂಸ್ಥೆ)ಯ ಚಟುವಟಿಕೆಗಳು ಮತ್ತು ‘ಜಮಾತ್’ ಆಯೋಜಿಸಿದ ಸಮಾವೇಶಗಳಿಂದಾಗಿ ಬಾಂಗ್ಲಾದೇಶದಲ್ಲಿ ಅಶಾಂತಿ ಉಂಟಾಗಬಹುದು ಎಂದು ಹೇಳಿದ್ದಾರೆ. ಮತದಾನದ ಮೊದಲು ಅರಾಜಕತೆ ಹರಡಲು ಹಣ, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಹಂಚಲಾಗುತ್ತಿದೆ. ಐ.ಎಸ್ಐ. ನ ಒಂದು ತಂಡವು ಕೋಸಬಾ ಪ್ರದೇಶದಲ್ಲಿ ಭಾರತದ ಕೆಲವು ಭಯೋತ್ಪಾದಕರನ್ನು ಭೇಟಿಯಾಗಿದೆ ಎಂದು ಹೇಳಲಾಗಿದೆ.

ಮಹಮ್ಮದ್ ಯೂನುಸ್ ಅವರಿಂದ ವಿನಾಯಿತಿ !

ಮುಹಮ್ಮದ್ ಯೂನಸ್

‘ಜಮಾತ್-ಎ-ಇಸ್ಲಾಮಿ’ ಈ ಮೊದಲು ಅನೇಕ ಚುನಾವಣೆಗಳಲ್ಲಿ ಸ್ಪರ್ಧಿಸಿದೆ; ಆದರೆ ಹಿಂಸಾಚಾರದ ಕಾರಣದಿಂದ ಅದರ ಮೇಲೆ ಗಂಭೀರ ಆರೋಪಗಳಾಗಿವೆ. ಆ ಕಾರಣದಿಂದಾಗಿ, ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಅವಧಿಯಲ್ಲಿ ‘ಜಮಾತ್-ಎ-ಇಸ್ಲಾಮಿ’ಯ ಮೇಲೆ ಅನೇಕ ನಿರ್ಬಂಧಗಳಿದ್ದವು. ಇದರಿಂದಾಗಿ ಅವರ ಚಳುವಳಿ ದೊಡ್ಡ ಪ್ರಮಾಣದಲ್ಲಿ ಸೀಮಿತವಾಗಿತ್ತು; ಆದರೆ, ಕಳೆದ ವರ್ಷ ಮಹಮ್ಮದ್ ಯೂನುಸ್ ಅವರ ನೇತೃತ್ವದಲ್ಲಿ ಬಂದ ಮಧ್ಯಂತರ ಸರಕಾರವು ‘ಜಮಾತ್’ ಅನ್ನು ಮತ್ತೆ ನಿರ್ಬಂಧಗಳಿಂದ ಮುಕ್ತಗೊಳಿಸಿತು. ಇದರಿಂದಾಗಿ, ಇತ್ತೀಚಿನ ದಿನಗಳಲ್ಲಿ ಜಮಾತ್ ಸಭೆಗಳನ್ನು ನಡೆಸುವ ಮೂಲಕ ಮತ್ತು ಮೆರವಣಿಗೆಗಳನ್ನು ಮಾಡುವ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಲು ಪ್ರಾರಂಭಿಸಿದೆ.

ಸಂಪಾದಕೀಯ ನಿಲುವು

ಇಂತಹ ಕಟ್ಟರ ಮುಸಲ್ಮಾನರ ಮನಃಸ್ಥಿತಿ ಇಸ್ಲಾಮೀ ರಾಷ್ಟ್ರದ ವಿಷಯದಲ್ಲೇ ಹೀಗಿದ್ದರೆ, ಹಿಂದೂ ಬಹುಸಂಖ್ಯಾತ ಭಾರತದ ವಿಷಯದಲ್ಲಿ ಹೇಗಿರಬಹುದು ಎಂಬುದು ಸ್ಪಷ್ಟವಾಗಿದೆ!