
ದಾವಣಗೆರೆ – ರಾಮಾಯಣದಲ್ಲಿ ಶ್ರೀರಾಮ, ಲಕ್ಷ್ಮಣ ಮತ್ತು ರಾವಣ ಅವರು ಆದರ್ಶ ವ್ಯಕ್ತಿಗಳಲ್ಲ, ಅವರು ಕ್ರೂರಿಗಳು ಎಂದು ಸಾಹಿತಿ ಬಿ.ಟಿ. ಲಲಿತಾ ನಾಯಕ್ ಹೇಳಿಕೆ ನೀಡಿದ್ದಾರೆ. ನಗರದ ಎ.ವಿ.ಕೆ. ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನವೆಂಬರ್ 23 ರಂದು ನಡೆದ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡುತ್ತಿದ್ದರು.
ಲಲಿತಾ ನಾಯಕ್ ನೀಡಿರುವ ಹಿಂದೂ ದ್ರೋಹಿ ಹೇಳಿಕೆಗಳು!
ಎಲ್ಲರನ್ನು ಭಕ್ತಿಯ ಹೆಸರಿನಲ್ಲಿ ಆದರ್ಶ ವ್ಯಕ್ತಿಗಳೆಂದು ಚಿತ್ರಿಸಲಾಗಿದೆ!
ಯಾರನ್ನು ಎಲ್ಲರೂ ಪೂಜಿಸುತ್ತಾರೋ, ಆ ಶ್ರೀರಾಮನು ತನ್ನ ಪತ್ನಿಯ ಮೇಲೆ ಸಂದೇಹಗೊಂಡು, ಅವಳನ್ನು ಕಾಡಿನಲ್ಲಿ ಬಿಟ್ಟು ಬರುವಂತೆ ಸಹೋದರ ಲಕ್ಷ್ಮಣನಿಗೆ ಹೇಳಿದನು. ಆಕೆ ಕ್ರೂರ ಪ್ರಾಣಿಗಳಿಗೆ ಆಹಾರವಾಗಲಿ ಎಂಬುದು ರಾಮನ ಬಯಕೆಯಾಗಿತ್ತು; ಆದರೆ ಲಕ್ಷ್ಮಣನಾದರೂ ‘ಇದು ತಪ್ಪು’ ಎಂದು ಹೇಳಬೇಕಿತ್ತು; ಆದರೆ ಅವನು ಹಾಗೆ ಮಾಡಲಿಲ್ಲ. ಲಕ್ಷ್ಮಣನಿಗೆ ಮೂಗು ಕತ್ತರಿಸುವ ಅಭ್ಯಾಸವಿತ್ತು; ಅದಕ್ಕಾಗಿಯೇ ಅವನು ಶೂರ್ಪನಖಿಯ ಮೂಗನ್ನು ಕತ್ತರಿಸಿದನು. ಮಹಾ ಪರಾಕ್ರಮಿ ಎಂದು ಕರೆಯಲ್ಪಡುವ ರಾವಣನು ಕಳ್ಳತನದಿಂದ ಇನ್ನೊಬ್ಬರ ಹೆಂಡತಿಯನ್ನು ಅಪಹರಿಸಿದನು; ಆದರೆ ಇವರೆಲ್ಲರನ್ನೂ ಭಕ್ತಿಯ ಹೆಸರಿನಲ್ಲಿ ಆದರ್ಶ ವ್ಯಕ್ತಿಗಳೆಂದು ಚಿತ್ರಿಸಲಾಗಿದೆ. (ನಾಲಿಗೆಗೆ ಎಲುಬು ಇಲ್ಲ ಎಂದು ಏನೇನೋ ಮಾತನಾಡುವ ಲಲಿತಾ ನಾಯಕ್! ಇತರ ಧರ್ಮೀಯರ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡಿದ್ದರೆ, ಇಷ್ಟೊತ್ತಿಗೆ ಅವರಿಗೆ ‘ಸರ್ ತನ್ ಸೇ ಜುದಾ’ (ಶಿರಚ್ಛೇದನದ) ಬೆದರಿಕೆಗಳು ಬಂದಿರುತ್ತಿದ್ದವು! – ಸಂಪಾದಕರು)
ಗಾಂಧಿಯವರ ಕೈಯಲ್ಲಿ ಕೇವಲ ಚರಕ!
ಶಾಂತಿಯ ಪ್ರತೀಕವಾದ ಬುದ್ಧನ ಕೈಯಲ್ಲಿ ಯಾವುದೇ ಕತ್ತಿ, ಗುರಾಣಿ ಅಥವಾ ಖಡ್ಗವಿಲ್ಲ. ಮ. ಗಾಂಧಿಯವರ ಕೈಯಲ್ಲಿ ಕೇವಲ ಚರಕ ಇದೆ; ಆದರೆ ಇತ್ತೀಚೆಗೆ ಶ್ರೀರಾಮನ ಕೈಗೆ ಬಿಲ್ಲು ಮತ್ತು ಬಾಣಗಳನ್ನು ನೀಡಲಾಗಿದೆ. (‘ಇತ್ತೀಚೆಗೆ’ ಎಂಬ ಪದ ಬಳಸುವ ನಾಯಕ್ ಅವರಿಗೆ ಇತಿಹಾಸ ತಿಳಿದಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ಇದು ಉದ್ದೇಶಪೂರ್ವಕವಾಗಿ ಹಿಂದೂಗಳ ಬ್ರೈನ್ ವಾಶ್ ಮಾಡುವ ಪ್ರಯತ್ನವಾಗಿದೆ! – ಸಂಪಾದಕರು)
ದೇವಸ್ಥಾನಗಳು ಜನರನ್ನು ಮೂಢನಂಬಿಕೆಗಳ ಕಡೆಗೆ ತಳ್ಳುತ್ತಿವೆ!
ದೇವಸ್ಥಾನಗಳು ಜನರನ್ನು ಮೂಢನಂಬಿಕೆಗಳ ಕಡೆಗೆ ತಳ್ಳುತ್ತಿವೆ. ಮೂಢನಂಬಿಕೆಯಿಂದ ಹೊರಬರಲು ಶಿಕ್ಷಣವೇ ಏಕೈಕ ಪರಿಹಾರವಾಗಿದೆ. (ಮಸೀದಿಗಳು, ಮದರಸಾಗಳಲ್ಲಿ ಭಯೋತ್ಪಾದಕರು ಸಿಗುತ್ತಾರೆ ಎಂಬುದರ ಬಗ್ಗೆ ನಾಯಕ್ ಮಾತನಾಡಲು ಸಾಧ್ಯವೇ? ಅಲ್ಲಿ ಯಾವ ‘ಶ್ರದ್ಧೆ’ಯನ್ನು ಕಲಿಸಲಾಗುತ್ತದೆ ಎಂಬುದನ್ನು ಅವರು ಹೇಳಲು ಸಾಧ್ಯವೇ? – ಸಂಪಾದಕರು)
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!