ದೆಹಲಿ ಪೊಲೀಸರಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆದಾರರ ಬಂಧನ – Arms Smugglers Arrested by Delhi Police

  • 10ವಿದೇಶಿ ನಿರ್ಮಿತ ಪಿಸ್ತೂಲ್ ಗಳು ವಶ

  • ಪಾಕಿಸ್ತಾನದಿಂದ ಡ್ರೋನ್ ಮೂಲಕ ಕಳುಹಿಸಲಾಗುತ್ತಿದ್ದ ಶಸ್ತ್ರಾಸ್ತ್ರಗಳು ಲಾರೆನ್ಸ್ ಬಿಷ್ಣೋಯ್ ನಂತಹ ಗೂಂಡಾ ಗುಂಪುಗಳಿಗೆ ಮಾರಾಟ ಮಾಡಲಾಗುತ್ತಿತ್ತು!

ನವದೆಹಲಿ – ದೆಹಲಿ ಪೊಲೀಸರು ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದಿದ್ದಾರೆ. ಪೊಲೀಸರು ನಾಲ್ವರು ಕಳ್ಳಸಾಗಣೆದಾರರನ್ನು ಬಂಧಿಸಿ ಅವರಿಂದ 10ವಿದೇಶಿ ಪಿಸ್ತೂಲ್ಗಳು ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

1. ಪೊಲೀಸರು ಹೇಳಿರುವುದೇನೆಂದರೆ, ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಗುಣಮಟ್ಟ ಮತ್ತು ಜಾಲದ ವ್ಯಾಪ್ತಿಯನ್ನು ಗಮನಿಸಿದರೆ, ಇದು ಸಂಘಟಿತ ಮತ್ತು ಹೆಚ್ಚಿನ ಹಣಕಾಸಿನ ನೆರವು ಹೊಂದಿರುವ ಕಳ್ಳಸಾಗಣೆ ಗುಂಪು ಎಂಬುದು ಸ್ಪಷ್ಟವಾಗುತ್ತದೆ. ಈ ಜಾಲವು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿತ್ತು. ಶಸ್ತ್ರಾಸ್ತ್ರಗಳನ್ನು ಮೊದಲು ಟರ್ಕಿ ಮತ್ತು ಚೀನಾದಿಂದ ಪಾಕಿಸ್ತಾನಕ್ಕೆ ಸಾಗಿಸಲಾಗುತ್ತಿತ್ತು. ನಂತರ ಈ ಶಸ್ತ್ರಾಸ್ತ್ರಗಳನ್ನು ಡ್ರೋನ್ ಗಳ ಮೂಲಕ ಪಂಜಾಬಿನಲ್ಲಿ ಬಿಡಲಾಗುತ್ತಿತ್ತು.ಬಳಿಕ, ಈ ಶಸ್ತ್ರಾಸ್ತ್ರಗಳನ್ನು ಉತ್ತರ ಪ್ರದೇಶ ಮತ್ತು ಪಂಜಾಬಿನ ಕಳ್ಳಸಾಗಣೆದಾರರ ಸಹಾಯದಿಂದ ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಿಗೆ ಸಾಗಿಸಲಾಗುತ್ತಿತ್ತು.ಅಲ್ಲಿಂದ ಈ ಶಸ್ತ್ರಾಸ್ತ್ರಗಳನ್ನು ಲಾರೆನ್ಸ್ ಬಿಷ್ಣೋಯ್, ಬಂಬಿಹಾ, ಗೋಗಿ ಮತ್ತು ಹಿಮಾಂಶು ಮುಂತಾದ ಪ್ರಮುಖ ಗೂಂಡಾ ಗುಂಪುಗಳಿಗೆ ತಲುಪಿಸಲಾಗುತ್ತಿತ್ತು.

2. ಬಂಧಿತ ಆರೋಪಿಗಳು ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಸೇರಿದವರಾಗಿದ್ದು, ಅವರ ಹೆಸರುಗಳು ಮನದೀಪ್, ಅಜಯ್, ದಲ್ವಿಂದರ್ ಮತ್ತು ರೋಹನ ಎಂದು ತಿಳಿದುಬಂದಿದೆ. ಇಲ್ಲಿಯ ವರೆಗೆ ಭಾರತಕ್ಕೆ ಎಷ್ಟು ಬಾರಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾಗಿದೆ ಮತ್ತು ಯಾವ ಗುಂಪುಗಳಿಗೆ ಅವುಗಳನ್ನು ಮಾರಾಟ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ

ಸಂಪಾದಕೀಯ ನಿಲುವು

ಜಪ್ತಿ ಮಾಡಲಾದ ಪಿಸ್ತೂಲ್ ಗಳೇ ಇಷ್ಟೊಂದು ಇದ್ದರೆ, ಜಪ್ತಿ ಮಾಡದೇ ಇರುವವು ಎಷ್ಟು ಇರಬಹುದು? ಮತ್ತು ಮುಂದೆ ಅವು ಭಾರತಕ್ಕೆ ಬರುವುದಿಲ್ಲ ಎಂದು ಪೊಲೀಸರು ಖಾತರಿ ನೀಡಬಲ್ಲರೇ?