ಟ್ರಂಪ್ ಹೇಳಿಕೆ: ಮೋದಿಯವರು ‘ನಾವು ಕೆಲಸ ಮುಗಿಸಿದ್ದೇವೆ, ಯುದ್ಧ ಇಲ್ಲ’ ಎಂದಿದ್ದಾರೆ!

‘ಆಪರೇಷನ್ ಸಿಂಧೂರ್’ ಬಗ್ಗೆ ಟ್ರಂಪ್ ಮತ್ತೊಮ್ಮೆ ಹೇಳಿಕೆ!

ವಾಷಿಂಗ್ಟನ್ (ಅಮೆರಿಕ) – ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. “ನನಗೆ ಮೊದಲು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರಿಂದ ಕರೆ ಬಂದಿತ್ತು.

ಅವರು ನನಗೆ ಧನ್ಯವಾದ ಹೇಳಿದರು ಮತ್ತು ನಾನು ಲಕ್ಷಾಂತರ ಜನರ ಜೀವ ಉಳಿಸಿದ್ದೇನೆ ಎಂದು ಹೇಳಿದರು. ಆನಂತರ ನನಗೆ ಪ್ರಧಾನಿ ಮೋದಿ ಅವರಿಂದ ಕರೆ ಬಂದಿತು. ಮೋದಿ ಅವರು, ‘ನಾವು ನಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ನಾವು ಯುದ್ಧ ಮಾಡುವುದಿಲ್ಲ’, ಎಂದು ಭರವಸೆ ನೀಡಿದರು ಎಂದು ಟ್ರಂಪ್ ಹೇಳಿದರು. ಅಮೆರಿಕ-ಸೌದಿ ಅರೇಬಿಯಾ ನಡುವಿನ ಹೂಡಿಕೆ ಕಾರ್ಯಕ್ರಮದಲ್ಲಿ ಟ್ರಂಪ್ ಮಾತನಾಡುತ್ತಿದ್ದರು.

ಸಂಪಾದಕೀಯ ನಿಲುವು

ಟ್ರಂಪ್ ಈವರೆಗೆ ಹಲವು ಬಾರಿ ನೀಡಿದ ಇಂತಹ ಹೇಳಿಕೆಗಳನ್ನು ನೀಡಿರುವುದರಿಂದ ಈ ಮಾತನ್ನು ಯಾರು ನಂಬುತ್ತಾರೆ?