|

ವಾಷಿಂಗ್ಟನ್ (ಅಮೆರಿಕ) – ಭಾರತವು ಪಹಲ್ಗಾಮ್ ನಲ್ಲಿ ಜಿಹಾದಿ ಭಯೋತ್ಪಾದಕರ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ನಡೆಸಿದ ‘ಆಪರೇಷನ್ ಸಿಂದೂರ್’ ಮೂಲಕ ಪಾಕ್ ಗೆ ತಕ್ಕ ಪಾಠ ಕಲಿಸಿದೆ ಎಂಬುದನ್ನು ಇಡೀ ಜಗತ್ತು ನೋಡಿದ್ದರೂ, ಭಾರತ-ದ್ವೇಷಿ ಅಮೆರಿಕದ ‘ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗ’ (ಯು.ಎಸ್.ಸಿ.ಸಿ.) ಎಂಬ ಸಂಸ್ಥೆಯು, ಈ ಯುದ್ಧದಲ್ಲಿ ಪಾಕಿಸ್ತಾನವೇ ಗೆದ್ದಿದೆ ಎಂದು ಪ್ರತಿಪಾದಿಸುವ 800 ಪುಟಗಳ ವರದಿಯನ್ನು ಪ್ರಕಟಿಸಿದೆ. ಅಷ್ಟೇ ಅಲ್ಲದೆ, ‘ಪಹಲ್ಗಾಮ್ನಲ್ಲಿ ನಡೆದದ್ದು ಭಯೋತ್ಪಾದಕ ದಾಳಿಯಲ್ಲ, ಅದು ಬಂಡುಕೋರರ ಆಕ್ರಮಣವಾಗಿತ್ತು’ ಎಂದೂ ಸಹ ಇದರಲ್ಲಿ ಹೇಳಲಾಗಿದೆ. ಈ ಕುರಿತು ಭಾರತ ಸರಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
🔥 US Report’s Absurd Claim: ‘Pakistan Defeated India in Operation Sindoor’?! 🇮🇳😡
A US Congress report now claims the Pahalgam attack wasn’t by terrorists but by “insurgents/rebels”!
This shows America isn’t just backing Pakistan – it’s glorifying it to provoke India.
India… pic.twitter.com/BSfHepU8X9
— Sanatan Prabhat (@SanatanPrabhat) November 21, 2025
ವರದಿಯಲ್ಲಿನ ಇತರ ಪ್ರತಿಪಾದನೆಗಳು
1. ಭಾರತದ 3 ವಿಮಾನಗಳನ್ನು ಹೊಡೆದುರುಳಿಸಲಾಗಿದೆ !
ವರದಿಯಲ್ಲಿ ಪಾಕಿಸ್ತಾನವು ರಾಫೆಲ್ ವಿಮಾನಗಳು ಸೇರಿದಂತೆ ಕನಿಷ್ಠ 6 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಲಾಗಿದೆ, ಇದರಿಂದ ರಾಫೆಲ್ನ ವರ್ಚಸ್ಸಿಗೆ ಹಾನಿಯುಂಟು ಮಾಡಿತು; ಆದರೆ ವಾಸ್ತವದಲ್ಲಿ ಕೇವಲ 3 ಭಾರತೀಯ ವಿಮಾನಗಳನ್ನು ಮಾತ್ರ ಹೊಡೆದುರುಳಿಸಲಾಗಿದೆ ಎಂದು ವರದಿಯು ಹೇಳುತ್ತದೆ.
2. ಪಾಕ್ ಗೆ ಚೀನಾದಿಂದ ದೊರೆತ ರಹಸ್ಯ ಮಾಹಿತಿ !
ಪಾಕಿಸ್ತಾನವು ಈ ಯುದ್ಧದಲ್ಲಿ ಚೀನಾ ಒದಗಿಸಿದ ಶಸ್ತ್ರಾಸ್ತ್ರಗಳನ್ನು ಬಳಸಿದೆ. ಪಾಕ್, ಚೀನಾದ ಎಚ್.ಕ್ಯೂ-9 ವಾಯು ರಕ್ಷಣಾ ವ್ಯವಸ್ಥೆ, ಪಿ.ಎಲ್.-15 ಕ್ಷಿಪಣಿಗಳು ಮತ್ತು ಜೆ-10 ಯುದ್ಧ ವಿಮಾನಗಳನ್ನು ಬಳಸಿಕೊಂಡಿದೆ.
ಚೀನಾವು ಈ ಯುದ್ಧವನ್ನು, ನೇರ ಯುದ್ಧದಲ್ಲಿ ತನ್ನ ಆಧುನಿಕ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಲು ಮತ್ತು ಅವುಗಳನ್ನು ಜಗತ್ತಿಗೆ ಪ್ರದರ್ಶಿಸಲು ಬಳಸಿಕೊಂಡಿತು. ಈ ಯುದ್ಧದ ನಂತರ, ವಿಶ್ವಾದ್ಯಂತ ಇರುವ ಚೀನಾದ ರಾಯಭಾರ ಕಚೇರಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಶ್ಲಾಘಿಸಿ, ಪಾಕಿಸ್ತಾನವು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲು ಅವುಗಳನ್ನು ಬಳಸಿದೆ ಎಂದು ಹೇಳಿಕೊಂಡವು. ಈ ಯುದ್ಧದ 5 ತಿಂಗಳ ನಂತರ, ಚೀನಾವು ಇಂಡೋನೇಷ್ಯಾಕ್ಕೆ 42 ಜೆ-10ಸಿ ಯುದ್ಧ ವಿಮಾನಗಳನ್ನು 75 ಸಾವಿರ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವ ಒಪ್ಪಂದವನ್ನು ಮಾಡಿಕೊಂಡಿತ್ತು.
ವರದಿಯ ಬಗ್ಗೆ ಚೀನಾದ ಪ್ರಶ್ನಾರ್ಥಕ ಚಿಹ್ನೆ
ಚೀನಾ ಸರಕಾರದ ಮುಖವಾಣಿಯಾದ ‘ಗ್ಲೋಬಲ್ ಟೈಮ್ಸ್’ ಈ ವರದಿಯ ಬಗ್ಗೆ ಪ್ರಶ್ನಿಸಿ ಅಭಿಪ್ರಾಯ ವ್ಯಕ್ತಪಡಿಸಿದೆ. ಇದರಲ್ಲಿ, ಯು.ಎಸ್ಸಿ.ಸಿ.ಯು ಮತ್ತೊಮ್ಮೆ ಚೀನಾದ ಆರ್ಥಿಕ, ತಾಂತ್ರಿಕ ಮತ್ತು ಭದ್ರತಾ ಪ್ರಗತಿಯನ್ನು ಜಗತ್ತಿಗೆ ಅಪಾಯ ಎಂದು ಬಿಂಬಿಸಿದೆ. ಈ ವರದಿಯನ್ನು ರಾಜಕೀಯ ಉದ್ದೇಶಗಳಿಗಾಗಿ ಬರೆಯಲಾಗಿದ್ದು, ಇದರಲ್ಲಿ ವಾಸ್ತವಾಂಶಗಳ ಸಂಪೂರ್ಣ ನಿಷ್ಪಕ್ಷಪಾತ ವಿಶ್ಲೇಷಣೆ ನೀಡಿಲ್ಲ. ಆಯೋಗವು ಚೀನಾದ ಬಗ್ಗೆ ಆಳವಾದ ತಪ್ಪು ಕಲ್ಪನೆಗಳು ಮತ್ತು ಅಹಂಕಾರವನ್ನು ಹೊಂದಿದೆ. ಅಮೆರಿಕವು ಚೀನಾವನ್ನು ಹೆಚ್ಚು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಬರೆಯಲಾಗಿದೆ.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation