|

ಕೋಲಕಾತಾ (ಪಶ್ಚಿಮ ಬಂಗಾಳ) – ವಿಶೇಷ ಆಳವಾದ ಪರಿಶೀಲನೆ ಪ್ರಕ್ರಿಯೆ ಪಶ್ಚಿಮ ಬಂಗಾಳಕ್ಕೆ ಅಪಾಯಕಾರಿ ಎಂದು ಹೇಳಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಈ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಪ್ರಕ್ರಿಯೆಯನ್ನು ರಾಜ್ಯದಲ್ಲಿ ಬಲವಂತವಾಗಿ ಜಾರಿಗೊಳಿಸಲಾಗುತ್ತಿದ್ದು, ಇದರಲ್ಲಿ ಅನೇಕ ಗಂಭೀರ ದೋಷಗಳಿವೆ ಎಂದೂ ಅವರು ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ.
🔥 Mamata’s Fear of SIR Exposed 🔥
Bengal CM Mamata Banerjee – long accused of shielding Bangladeshi infiltrators, calls the Special Intensive Revision (SIR) “dangerous for Bengal” and demands it be stopped.
But the truth is simple 👇
🗳️ SIR = Voter Verification
💥 Voter… pic.twitter.com/dUcW53fw90— Sanatan Prabhat (@SanatanPrabhat) November 22, 2025
ಈ ಪ್ರಕ್ರಿಯೆಗಾಗಿ ಚುನಾವಣಾ ಆಯೋಗದ ಸಿಬ್ಬಂದಿಗೆ ಸಾಕಷ್ಟು ತರಬೇತಿ ನೀಡಿಲ್ಲ, ಮಾರ್ಗದರ್ಶಕ ಅಂಶಗಳನ್ನು ರೂಪಿಸಿಲ್ಲ, ಮತ್ತು ಯಾವುದೇ ಪೂರ್ವಸಿದ್ಧತೆ ಇಲ್ಲದೆ ಈ ಪ್ರಕ್ರಿಯೆ ನಡೆಯುತ್ತಿದೆ. ಪರಿಣಾಮವಾಗಿ, ‘ಬೂತ್ ಮಟ್ಟದ ಅಧಿಕಾರಿ’ (ಬಿ.ಎಲ್.ಒ.) ಮತ್ತು ನಾಗರಿಕರ ಮೇಲೆ ಒತ್ತಡ ಹೆಚ್ಚಿದೆ. ಅದಲ್ಲದೇ, ಬಿ.ಎಲ್.ಒ.ಗಳಿಗೆ ಶಿಸ್ತು ಕ್ರಮದ ಬೆದರಿಕೆಯನ್ನು ಹಾಕಲಾಗುತ್ತಿದೆ. ಇದರಿಂದ ಅವರು ಭಯಭೀತರಾಗಿದ್ದಾರೆ. ಅನೇಕ ಬಿ.ಎಲ್.ಒ.ಗಳು ಶಿಕ್ಷಕರು ಮತ್ತು ಇತರ ನೌಕರರಾಗಿದ್ದು, ಅವರಿಗೆ ಏಕಕಾಲದಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವುದು ಮತ್ತು ಆನ್‌ಲೈನ್ ಫಾರ್ಮ್‌ಗಳನ್ನು ಭರ್ತಿ ಮಾಡುವಂತಹ ಕೆಲಸಗಳನ್ನು ಮಾಡಲು ಒತ್ತಾಯಿಸಲಾಗುತ್ತಿದೆ ಎಂದು ಅವರು ವಾದಿಸಿದ್ದಾರೆ. ಇದು ಮಾನವ ಸಾಮರ್ಥ್ಯವನ್ನು ಮೀರಿದ ಕೆಲಸವಾಗಿದೆ. ರಾಜ್ಯದಲ್ಲಿ ಭತ್ತದ ಕೊಯ್ಲು ಮತ್ತು ರಬ್ಬಿ ಬೆಳೆಗಳ ಬಿತ್ತನೆ ನಡೆಯುತ್ತಿರುವುದರಿಂದ ಲಕ್ಷಾಂತರ ರೈತರು ತಮ್ಮ ಗದ್ದೆಗಳಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಎಸ್‌ಐಆರ್‌ನಲ್ಲಿ ಅವರ ಭಾಗವಹಿಸುವಿಕೆ ಕಷ್ಟಕರವಾಗುತ್ತಿದ್ದು, ಗ್ರಾಮೀಣ ಪ್ರದೇಶದ ಕೆಲಸಗಳ ಮೇಲೆ ಪರಿಣಾಮ ಬೀರುತ್ತಿದೆ, ಎಂದು ಹೇಳಿದರು.
ಪ್ರತಿದಿನ ೧೦೦ಕ್ಕೂ ಹೆಚ್ಚು ಬಾಂಗ್ಲಾದೇಶಿ ಅಕ್ರಮ ನುಸುಳುಕೋರರು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತಿದ್ದಾರೆ ಎಂದು ಗಡಿ ಭದ್ರತಾ ದಳದ (ಬಿಎಸ್‌ಎಫ್) ಮಾಹಿತಿ
ಗಡಿ ಭದ್ರತಾ ದಳದ (ಬಿ.ಎಸ್.ಎಫ್) ಒಬ್ಬ ಅಧಿಕಾರಿಯು ನೀಡಿದ ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳದ ಉತ್ತರ ೨೪ ಪರಗಣ, ಮುರ್ಷಿದಾಬಾದ್ ಮತ್ತು ಮಾಲ್ಡಾದಲ್ಲಿನ ಗಡಿಯ ಬೇಲಿ ಇಲ್ಲದ ಪ್ರದೇಶಗಳಿಂದ ಹಿಂದಿರುಗುವ ಬಾಂಗ್ಲಾದೇಶಿ ವಲಸಿಗರ ಸಂಖ್ಯೆಯಲ್ಲಿ ದೊಡ್ಡ ಹೆಚ್ಚಳ ಕಂಡುಬಂದಿದೆ. ಪ್ರತಿದಿನ ೧೦೦ಕ್ಕೂ ಹೆಚ್ಚು ಬಾಂಗ್ಲಾದೇಶಿ ಅಕ್ರಮ ನುಸುಳುಕೋರರು ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ. ಹಿಂದೆ ಇಂತಹ ಘಟನೆಗಳು ವಿರಳವಾಗಿದ್ದವು. ಈಗ ಅದರಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಗಡಿಯಲ್ಲಿ ನಿಯೋಜಿಸಲಾದ ಬಿ.ಎಸ್.ಎಫ್. ಸೈನಿಕರು ಹೇಳುವ ಪ್ರಕಾರ, ತಪಾಸಣಾ ಕೇಂದ್ರದಲ್ಲಿ ಚಿಕ್ಕ ಚೀಲಗಳು ಮತ್ತು ಸಾಮಾನುಗಳನ್ನು ಹೊತ್ತು ಬರುವ ಜನರ ಸರತಿ ಸಾಲು ಇದ್ದು, ತಾವು ಮೂಲತಃ ಬಾಂಗ್ಲಾದೇಶದವರು ಮತ್ತು ವರ್ಷಗಳಿಂದ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದೆವು ಎಂದು ಅವರು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ.
ಸಂಪಾದಕೀಯ ನಿಲುವುಮತದಾರರ ಪರಿಶೀಲನೆಗೆ ಅತ್ಯಗತ್ಯವಾಗಿರುವ ವಿಶೇಷ ಆಳವಾದ ಪರಿಶೀಲನೆ ಪ್ರಕ್ರಿಯೆಯಿಂದ ಬಾಂಗ್ಲಾದೇಶಿ ಅಕ್ರಮ ನುಸುಳುಕೋರರು ತಾವಾಗಿಯೇ ಸಿಕ್ಕಿಬೀಳಲಿದ್ದಾರೆ. ಆದ್ದರಿಂದ, ಈ ಪ್ರಕ್ರಿಯೆಯು ಪಶ್ಚಿಮ ಬಂಗಾಳಕ್ಕೆ ಅಪಾಯಕಾರಿ ಅಲ್ಲ, ಆದರೆ ಮಮತಾ ಬ್ಯಾನರ್ಜಿ ಅವರ ಅಧಿಕಾರಕ್ಕೆ ಅಪಾಯಕಾರಿಯಾಗಿದೆ. ಇದೇ ಭಯ ಈಗ ಮಮತಾ ಬ್ಯಾನರ್ಜಿ ಅವರಿಗೆ ಕಾಡುತ್ತಿದೆ ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ