|

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಾಜಿ ಪ್ರಧಾನಿ ಚೌಧರಿ ಅನ್ವರುಲ್ ಹಕ್ ಅವರು, ಪಾಕಿಸ್ತಾನವು ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕರು ಕೆಂಪು ಕೋಟೆಯಿಂದ ಹಿಡಿದು ಕಾಶ್ಮೀರದ ಕಾಡುಗಳವರೆಗೆ ಭಾರತವನ್ನು ಗುರಿಯಾಗಿದ್ದಾರೆಂದು ಹೇಳಿದರು. ಆದಾಗ್ಯೂ, ಪಾಕಿಸ್ತಾನವು ಹಕ್ ಅವರ ಈ ಹೇಳಿಕೆಯಿಂದ ತನ್ನನ್ನು ತಾನು ದೂರವಿರಿಸಿದೆ. ನವೆಂಬರ್ 17 ರಂದು ವಿಧಾನಸಭೆಯು ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿ ಅವರನ್ನು ಪದಚ್ಯುತಗೊಳಿಸಿತು. ಹಕ್ ಅವರು ಎರಡೂವರೆ ವರ್ಷಗಳ ಕಾಲ ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿಯಾಗಿದ್ದರು.
ಪಾಕ್ ಆಕ್ರಮಿತ ಕಾಶ್ಮೀರದ ವಿಧಾನಸಭೆಯಲ್ಲಿ ಹಕ್ ಅವರು ಮಾತನಾಡಿ:
1. ಭಾರತವು ಬಲೂಚಿಸ್ತಾನವನ್ನು ರಕ್ತದ ಮಡುವಿನಲ್ಲಿ ಮುಳುಗಿಸಿದೆ, ಆದರೂ ನಾವು ಕೆಂಪು ಕೋಟೆಯಿಂದ ಹಿಡಿದು ಕಾಶ್ಮೀರದ ಕಾಡುಗಳವರೆಗೆ ಭಾರತದ ಮೇಲೆ ಆಕ್ರಮಣ ಮಾಡುವೆವು, ಎಂದು ನಾನು ಮೊದಲೇ ಹೇಳಿದ್ದೆ. (ಇದು ಯೋಚಿಸದೆ ಮಾತನಾಡುವ ಚೌಧರಿ ಅನ್ವರುಲ್ ಹಕ್ ಅವರ ವರ್ತನೆಯಾಗಿದೆ! ಬಲೂಚಿಸ್ತಾನದಲ್ಲಿನ ಚಟುವಟಿಕೆಗಳಿಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಪಾಕಿಸ್ತಾನದ ಇಂತಹ ಹೇಳಿಕೆಗಳನ್ನು ಯಾರು ನಂಬುತ್ತಾರೆ? – ಸಂಪಾದಕರು) ಕೆಲವೇ ದಿನಗಳಲ್ಲಿ ನಮ್ಮ ಶಾಹೀನ್ (ಭಯೋತ್ಪಾದಕ ಡಾ. ಶಾಹೀನ್) ನುಗ್ಗಿ ದಾಳಿ ಮಾಡಿದನು.
2. ಪ್ರಧಾನಿಯಾಗಿದ್ದಾಗ ನಾನು ನರೇಂದ್ರ ಮೋದಿ ಮತ್ತು ಭಾರತದಲ್ಲಿನ ಅವರ ಸರಕಾರಕ್ಕೆ ಸವಾಲು ಹಾಕಿದ್ದೆ ಎಂದು ಹಕ್ ಹೇಳಿದರು.
ಸಂಪಾದಕೀಯ ನಿಲುವುಭಾರತದಲ್ಲಿ ಹರಡಿರುವ ಜಿಹಾದಿ ಭಯೋತ್ಪಾದನೆಯು ಪಾಕಿಸ್ತಾನ ಬೆಂಬಲಿತವೇ ಆಗಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿಯೊಬ್ಬರೇ ಸಾರ್ವಜನಿಕವಾಗಿ ಒಪ್ಪಿಕೊಂಡಿರುವುದರಿಂದ ಭಾರತವು ಪಾಕಿಸ್ತಾನವನ್ನು ಪ್ರಶ್ನಿಸುವುದಕ್ಕಿಂತ ಕೂಡಲೇ ಆಕ್ರಮಣ ಮಾಡಬೇಕು! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ಪಾಕಿಸ್ತಾನ ಆಕ್ರಮಿತ ಕಾಶ್ಮೀರ: ಪ್ರತಿಭಟನಾಕಾರರ ಮೇಲೆ ಪಾಕ್ ಸೈನಿಕರಿಂದ ಗುಂಡಿನ ದಾಳಿ : ೧೨ ಸಾವು, ೩೮ ಜನರಿಗೆ ಗಾಯ : POK Protest
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು