ಪಾಕಿಸ್ತಾನದೊಂದಿಗೆ 7 ಸಾವಿರ ಕೋಟಿ ರೂಪಾಯಿಗಳ ರಕ್ಷಣಾ ಒಪ್ಪಂದ ಮಾಡಿಕೊಂಡ ಟರ್ಕಿ -Turkey Pakistan Defence Deal

ನವದೆಹಲಿ – ಭಾರತದ ‘ಆಪರೇಷನ್ ಸಿಂದೂರ್’ ನಂತರ ಟರ್ಕಿಯು ಪಾಕಿಸ್ತಾನಕ್ಕೆ ವಿವಿಧ ಮಾಧ್ಯಮಗಳ ಮೂಲಕ ಸಹಾಯ ಮಾಡಲು ಪ್ರಾರಂಭಿಸಿದೆ. ಟರ್ಕಿಯು ಪಾಕಿಸ್ತಾನದೊಂದಿಗೆ 7 ಸಾವಿರ ಕೋಟಿ ರೂಪಾಯಿಗಳ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ಕೇವಲ ಟರ್ಕಿ ಮಾತ್ರವಲ್ಲದೆ, ಅನೇಕ ಇಸ್ಲಾಮಿಕ್ ದೇಶಗಳು ವಿವಿಧ ರೀತಿಯಲ್ಲಿ ಪಾಕಿಸ್ತಾನಕ್ಕೆ ನೆರವು ನೀಡುತ್ತಿವೆ. ಪಾಕಿಸ್ತಾನಕ್ಕೆ ಟರ್ಕಿ, ಅಜೆರ್ಬೈಜಾನ್ ಮತ್ತು ಜೋರ್ಡಾನ್ ಈ ಇಸ್ಲಾಮಿಕ್ ದೇಶಗಳ ಬೆಂಬಲ ದೊರೆಯುತ್ತಿದೆ. ಭಾರತವು ಭವಿಷ್ಯದಲ್ಲಿ ಪಾಕಿಸ್ತಾನದ ಮೇಲೆ ದೊಡ್ಡ ದಾಳಿ ಮಾಡಿದರೆ, ಈ ಎಲ್ಲ ದೇಶಗಳು ಪಾಕಿಸ್ತಾನಕ್ಕೆ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಬಹುದು.

ಪಾಕಿಸ್ತಾನದಿಂದ ಇಸ್ಲಾಮಿಕ್ ದೇಶಗಳನ್ನು ಒಗ್ಗೂಡಿಸುವ ಕೆಲಸ

ಕಳೆದ ಕೆಲವು ವರ್ಷಗಳಿಂದ ಭಾರತದ ಪ್ರಗತಿಯು ನೆರೆಯ ಮುಸ್ಲಿಂ ರಾಷ್ಟ್ರಗಳಿಗೆ ಸಹಿಸಲಾಗುತ್ತಿಲ್ಲ ಮತ್ತು ಭಾರತವನ್ನು ತೊಂದರೆಗೆ ಸಿಲುಕಿಸಲು ಅವರ ಕಡೆಯಿಂದ ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲೂ ಪಾಕಿಸ್ತಾನವು ಕೆಲವು ಮುಸ್ಲಿಂ ದೇಶಗಳನ್ನು ಕೈಗೆ ತೆಗೆದುಕೊಂಡು ಭಾರತದ ವಿರುದ್ಧ ದೊಡ್ಡ ಸಂಚು ರೂಪಿಸುತ್ತಿದೆ. ಇತ್ತೀಚೆಗೆ ಕತಾರ್‌ನಲ್ಲಿ ನಡೆದ ಇಸ್ರೇಲ್ ವಿರುದ್ಧದ ತುರ್ತು ಶೃಂಗಸಭೆಯಲ್ಲಿ ಸುಮಾರು 60 ಇಸ್ಲಾಮಿಕ್ ದೇಶಗಳು ಒಗ್ಗೂಡಿದ್ದವು. ಪಾಕಿಸ್ತಾನ ಮತ್ತು ಈಜಿಪ್ಟ್ ಈ ದೇಶಗಳು ಇಸ್ಲಾಮಿಕ್ ದೇಶಗಳ ಇಸ್ಲಾಮಿಕ್ ಸೇನೆಯನ್ನು ರಚಿಸುವ ಪ್ರಸ್ತಾವನೆಯನ್ನು ಮಂಡಿಸಿದ್ದವು. ‘ಆಪರೇಷನ್ ಸಿಂದೂರ್’ ನಂತರ ಪಾಕಿಸ್ತಾನವು ಇಸ್ಲಾಮಿಕ್ ದೇಶಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಇದನ್ನು ಭಾರತದ ವಿರುದ್ಧ ಬಳಸಲಾಗುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ.

ಸಂಪಾದಕೀಯ ನಿಲುವು

‘ಆಪರೇಷನ್ ಸಿಂದೂರ್’ ಸಮಯದಲ್ಲಿ ಟರ್ಕಿಯು ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು. ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ಟರ್ಕಿಯ ಹೆಸರು ಕೇಳಿಬಂದಿತ್ತು. ಒಟ್ಟಾರೆಯಾಗಿ ಟರ್ಕಿಯ ಭಾರತ ವಿರೋಧಿ ಚಟುವಟಿಕೆಗಳನ್ನು ಗಮನಿಸಿದರೆ, ಅದಕ್ಕೂ ಪಾಕಿಸ್ತಾನದಂತೆ ತಕ್ಕ ಪಾಠ ಕಲಿಸುವುದು ಆವಶ್ಯಕವಾಗಿದೆ !