
ನವದೆಹಲಿ – ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತಳಾಗಿರುವ ಮಹಿಳಾ ವೈದ್ಯೆ ಡಾ. ಶಾಹೀನ್ ಶಾಹಿದ್ 14 ರಿಂದ 18 ವರ್ಷ ವಯಸ್ಸಿನ ಮುಸ್ಲಿಂ ಹುಡುಗಿಯರು ಮತ್ತು ವಿಚ್ಛೇದಿತ ಅಥವಾ ಕುಟುಂಬದಿಂದ ದೂರವಿರುವ ಮುಸ್ಲಿಂ ಮಹಿಳೆಯರನ್ನು ‘ಮಾನವ ಬಾಂಬ್’ ಆಗಿ ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದಳು. ಆಕೆಯ ಮೊಬೈಲ್ ಸಂದೇಶಗಳಿಂದ ಈ ವಿಷಯ ಬಹಿರಂಗವಾಗಿದೆ. ಮಾನವ ಬಾಂಬ್ ಅನ್ನು ‘ಮುಜಾಹಿದ್ ಜಂಗ್ಜೂ’ ಎಂಬ ಪದದಿಂದ ಉಲ್ಲೇಖಿಸಲಾಗುತ್ತಿತ್ತು. ನೇರವಾಗಿ ಆತ್ಮಹತ್ಯಾ ಅಥವಾ ಮಾನವ ಬಾಂಬ್ ಎಂಬ ಪದಗಳ ಬಳಕೆ ಮಾಡಲಿಲ್ಲ. ಶಾಹೀನ್ ಸ್ವತಃ ಸಂಪೂರ್ಣ ಕೆಲಸದ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಳು ಮತ್ತು ತನ್ನ ಹ್ಯಾಂಡ್ಲರ್‌ಗೆ (ಸಂಚಾಲಕನಿಗೆ) ನಿರಂತರವಾಗಿ ಮಾಹಿತಿ ಕಳುಹಿಸುತ್ತಿದ್ದಳು.
ಈ ಕುತಂತ್ರಕ್ಕೆ ‘ಮಿಷನ್ ಕಾಫಿರ್’ ಎಂದು ಹೆಸರಿಸಲಾಗಿತ್ತು!
ಈ ಕುತಂತ್ರಕ್ಕೆ ‘ಮಿಷನ್ ಕಾಫಿರ್’ ಎಂದು ಹೆಸರಿಸಲಾಗಿತ್ತು. ಮೊದಲು ಕಟ್ಟರ್ ವಿಚಾರಸರಣಿಗೆ ಒಲವು ತೋರುವ ಹುಡುಗಿಯರು ಮತ್ತು ಮಹಿಳೆಯರನ್ನು ಆಯ್ಕೆ ಮಾಡುವುದು, ನಂತರ ತರಬೇತಿ ನೀಡುವುದು ಮತ್ತು ಕೊನೆಯಲ್ಲಿ ಸ್ಫೋಟಕಗಳಿಂದ ತುಂಬಿದ ನಿಲುವಂಗಿಯನ್ನು ಧರಿಸಿ ಜನನಿಬಿಡ ಸ್ಥಳಗಳಿಗೆ ಕಳುಹಿಸುವುದು, ಇದು ಯೋಜನೆಯಾಗಿತ್ತು.
ಸ್ಫೋಟಕ ಸಾಮಗ್ರಿಗಳ ಬೇಡಿಕೆಯನ್ನೂ ಇಟ್ಟಿದ್ದ ಡಾ.ಶಾಹೀನ್!
ಡಾ. ಶಾಹೀನ್ ಪಾಕಿಸ್ತಾನದಲ್ಲಿರುವ ತನ್ನ ಸಂಚಾಲಕನ ಸೂಚನೆಯ ಮೇರೆಗೆ ದೊಡ್ಡ ಪ್ರಮಾಣದಲ್ಲಿ ಸ್ಫೋಟಕ ಸಾಮಗ್ರಿಗಳನ್ನು ತರಿಸಿಕೊಂಡಿದ್ದಳು. ಫರಿದಾಬಾದ್ ಮತ್ತು ಇತರ ಸ್ಥಳಗಳಿಂದ ಈ ಸ್ಫೋಟಕ ಸಾಮಗ್ರಿಗಳನ್ನು ಇದುವರೆಗೆ ಜಪ್ತಿ ಮಾಡಲಾಗಿದೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !