
(ಇಡಿ – ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ – ಜಾರಿ ನಿರ್ದೇಶನಾಲಯ)
ನವದೆಹಲಿ – ದೆಹಲಿಯ ಓಖ್ಲಾ ಪ್ರದೇಶದಲ್ಲಿರುವ ‘ಅಲ್-ಫಲಾಹ್ ಟ್ರಸ್ಟ್’ ಮತ್ತು ಫರಿದಾಬಾದ್‌ನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ 24 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ. ಈ ಕಾರ್ಯಾಚರಣೆಯನ್ನು ಹಣಕಾಸು ಅಕ್ರಮಗಳ ಅಡಿಯಲ್ಲಿ ಕೈಗೊಳ್ಳಲಾಗಿದೆ.
1.ಅಲ್-ಫಲಾಹ್ ಗುಂಪಿಗೆ ಸೇರಿದ ಒಂಬತ್ತು ಸಂಸ್ಥೆಗಳು ಒಂದೇ ವಿಳಾಸದಲ್ಲಿ ನೋಂದಾಯಿಸಲ್ಪಟ್ಟಿವೆ ಮತ್ತು ಪ್ರಾಥಮಿಕ ತನಿಖೆಯಲ್ಲಿ ಅವು ಸಹಾಯಕ ಸಂಸ್ಥೆಗಳಾಗಿವೆ (ಸಬ್ಸಿಡಿಯರಿ) ಎಂಬ ಅನೇಕ ಸೂಚನೆಗಳು ಲಭ್ಯವಾಗಿವೆ. ನೀಡಿರುವ ವಿಳಾಸದಲ್ಲಿ ಯಾವುದೇ ಕಚೇರಿ ಕಂಡುಬಂದಿಲ್ಲ ಮತ್ತು ವಿದ್ಯುತ್ ಮತ್ತು ನೀರಿನ ಬಳಕೆ ಕುರಿತು ಯಾವುದೇ ದಾಖಲೆಗಳು ಸಹ ಪತ್ತೆಯಾಗಿಲ್ಲ. (ಇದನ್ನು ಮೊದಲು ಏಕೆ ಪರಿಶೀಲಿಸಲಿಲ್ಲ? ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಅಥವಾ ಭ್ರಷ್ಟಾಚಾರದಿಂದಾಗಿ ನಿರ್ಲಕ್ಷ್ಯ ತೋರಿದರೆ ಎಂಬುದರ ಕೂಡ ತನಿಖೆ ಮಾಡಬೇಕು! – ಸಂಪಾದಕರು)
2.ಅನೇಕ ಸಂಸ್ಥೆಗಳಲ್ಲಿ ಒಂದೇ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಬಳಸಲಾಗಿದೆ. ಸಂಸ್ಥೆಗಳ ವಹಿವಾಟಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ದೊರೆತಿಲ್ಲ; ಆದರೂ ಸಹ, ಕಾಗದಪತ್ರಗಳಲ್ಲಿ ಮಾತ್ರ ಈ ಸಂಸ್ಥೆಗಳನ್ನು ‘ದೊಡ್ಡ ಸಂಸ್ಥೆಗಳು’ ಎಂದು ತೋರಿಸಲಾಗಿದೆ.
3.ಹಲವಾರು ಸಂಸ್ಥೆಗಳಲ್ಲಿ ಒಬ್ಬರೇ ನಿರ್ದೇಶಕರು ಮತ್ತು ಅಧಿಕೃತ ಸಹಿ ಮಾಡುವ ವ್ಯಕ್ತಿ ಸಾಮಾನ್ಯರಾಗಿದ್ದಾರೆ ಎಂಬುದು ಕಂಡುಬಂದಿದೆ. ಬ್ಯಾಂಕ್ ಖಾತೆಗಳ ದಾಖಲೆಗಳಲ್ಲಿ ವೇತನವು ಅತ್ಯಂತ ಕಡಿಮೆಯಾಗಿದೆ ಎಂದು ಕಂಡುಬಂದಿದೆ. ಬಹುತೇಕ ಎಲ್ಲ ಸಂಸ್ಥೆಗಳನ್ನು ಒಂದೇ ಮಾದರಿಯಲ್ಲಿ ಸ್ಥಾಪಿಸಲಾಗಿದೆ ಮತ್ತು ಅವುಗಳ ಸಂಪರ್ಕ ವಿವರಗಳು ಸಹ ಒಂದೇ ಆಗಿವೆ.
4.ಅಲ್-ಫಲಾಹ್ ಗುಂಪು ಯು.ಜಿ.ಸಿ. (ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ – ವಿಶ್ವವಿದ್ಯಾಲಯ ಅನುದಾನ ಆಯೋಗ) ಮತ್ತು ನ್ಯಾಕ್ (ನ್ಯಾಷನಲ್ ಅಸೆಸ್‌ಮೆಂಟ್ ಅಂಡ್ ಅಕ್ರೆಡಿಟೇಶನ್ ಕೌನ್ಸಿಲ್ – ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ) ಮಾನ್ಯತೆಗೆ ಸಂಬಂಧಿಸಿದಂತೆ ಮಾಡಿದ ಹಕ್ಕುಗಳ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿವೆ ಮತ್ತು ಸಂಬಂಧಪಟ್ಟ ಸಂಸ್ಥೆಗಳಿಂದ ಮಾಹಿತಿ ಕೋರಲಾಗಿದೆ.
5.ಸ್ಥಳದಿಂದ ಪ್ರಮುಖ ದಾಖಲೆಗಳು, ಬ್ಯಾಂಕ್ ದಾಖಲೆಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ವಿವಿಧ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6.ಕೆಲವು ತಿಂಗಳ ಹಿಂದೆ ಇ.ಡಿ. ಅಲ್-ಫಲಾಹ್ ವಿಶ್ವವಿದ್ಯಾಲಯ ಮತ್ತು ಅದರ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿತ್ತು. ವಿಶ್ವವಿದ್ಯಾಲಯ ಮತ್ತು ಟ್ರಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ದೇಣಿಗೆಗಳನ್ನು ಪಡೆಯಲಾಗಿದೆ ಮತ್ತು ವಿದೇಶಿ ದೇಣಿಗೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪವಿತ್ತು. ಆಸ್ತಿಗಳ ದುರುಪಯೋಗದ ಮೂಲಕ ಕಪ್ಪು ಹಣವನ್ನು ಬಿಳಿ ಮಾಡಲಾಗಿದೆ ಎಂದೂ ಆರೋಪಿಸಲಾಗಿತ್ತು.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath